ಇತಿಹಾಸ, ಪರಂಪರೆ ಹೊಂದಿರುವ ಶ್ರೀ ಆದಿಜಾಂಬವ ಮಠದ ಬಗ್ಗೆ ದಾವಣಗೆರೆಯಲ್ಲಿ ಫೆ.14ರಂದು ಗಾಂಧಿ ನಗರದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಕರೆದ ಸಮಾಲೋಚನಾ ಸಭೆಯನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಶ್ರೀ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಎಚ್ಚರಿಸಿದ್ದಾರೆ.
- ಮಠಕ್ಕೂ, ದಾವಣಗೆರೆ ಸಭೆಗೂ ಸಂಬಂಧವಿಲ್ಲ: ಷಡಕ್ಷರಮುನಿ ಶ್ರೀ ಸ್ಪಷ್ಟನೆ
- - -- ಕಾಂಗ್ರೆಸ್ ಮುಖಂಡರು ಬೇರೆ ಹೆಸರಿನಲ್ಲಿ ಬೇರೆ ಮಠ ಕಟ್ಟಿಕೊಳ್ಳಲು ನಮ್ಮ ಅಭ್ಯಂತರವಿಲ್ಲ
- ಅನಧಿಕೃತ ಕರಪತ್ರ ಹಂಚಿಕೆ, ಶಾಖಾ ಪೀಠದ ಸ್ಥಾಪನೆ ವಿರುದ್ಧ ಕಾನೂನು ಕ್ರಮ ನಿಶ್ಚಿತ- ಮಠದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಾನು ನಿಮ್ಮೊಂದಿಗೆ ಚರ್ಚಿಸಬೇಕು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಇತಿಹಾಸ, ಪರಂಪರೆ ಹೊಂದಿರುವ ಶ್ರೀ ಆದಿಜಾಂಬವ ಮಠದ ಬಗ್ಗೆ ದಾವಣಗೆರೆಯಲ್ಲಿ ಫೆ.14ರಂದು ಗಾಂಧಿ ನಗರದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಕರೆದ ಸಮಾಲೋಚನಾ ಸಭೆಯನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಶ್ರೀ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಎಚ್ಚರಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಜಾಂಬವ ಶ್ರೀಮಠದ ಗಮನಕ್ಕೆ ಬರದಂತೆ, ತಮ್ಮ ಗಮನಕ್ಕೂ ತರದಂತೆ ದಾವಣಗೆರೆಯಲ್ಲಿ ಆದಿಜಾಂಬವ ಮಠದ ಸಮಾಲೋಚನಾ ಸಭೆಯನ್ನು ಇಲ್ಲಿನ ಮುಖಂಡರಾದ ಬಿ.ಎಚ್. ವೀರಭದ್ರಪ್ಪ ಇತರರು ಕರೆದಿದ್ದಾರೆ. ಆದರೆ, ಆ ಸಭೆಗೂ, ಶ್ರೀಮಠಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆಯಲ್ಲಿ ಈಗಾಗಲೇ ಕೆಲವರು ಶಾಖಾ ಮಠಕ್ಕೆ ಸಂಬಂಧಿಸಿದಂತೆ ಹಬ್ಬಿಸಿರುವ ಸುದ್ದಿಗೆ ನಾವು ಈಗಾಗಲೇ ಸ್ಪಷ್ಟನೆ ನೀಡಿದ್ದೇವೆ. ಆದರೂ, ಅನಧಿಕೃತವಾಗಿ ಕರಪತ್ರಗಳನ್ನು ಹೊರಡಿಸಿ, ಶಾಖಾ ಮಠ ಸ್ಥಾಪನೆ ಹೆಸರಿನಲ್ಲಿ ಪ್ರಚಾರಕ್ಕೆ ಹೊರಟಿರುವುದು ಸರಿಯಲ್ಲ ಎಂದರು.ಮಠದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಾನು ನಿಮ್ಮೊಂದಿಗೆ ಚರ್ಚಿಸಬೇಕಾಗಿದೆ. ದಾವಣಗೆರೆ ಗಾಂಧಿ ನಗರದ ಕಾಂಗ್ರೆಸ್ ಮುಖಂಡರೇ ಸಮಿತಿ ರಚಿಸಿಕೊಂಡು, ಕರಪತ್ರ ಮಾಡಿಕೊಂಡು, ಜಿಲ್ಲಾ ಮಂತ್ರಿಗಳಾದಿಯಾಗಿ ಇತರೆ ಮುಖಂಡರನ್ನು ಸಮಾಲೋಚನಾ ಸಭೆಗೆ ಆಹ್ವಾನಿಸಿರುವ ವಿಚಾರ ತಮ್ಮ ಗಮನಕ್ಕೂ ಬಂದಿದೆ. ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುತ್ತಿರುವುದು ಶ್ರೀಮಠಕ್ಕೆ ಮಾಡುವ ಅಪಚಾರ ಹಾಗೂ ವಂಚನೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದಿಜಾಂಬವ ಮಹಾಸಂಸ್ಥಾನ ಮಠದ ಪರಂಪರೆ ಪುರಾತನವಾದುದು. ಇಂದಿಗೂ ಸಮುದಾಯವು ಅಂತಹ ಪರಂಪರೆ ಗೌರವಿಸುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ ಮಠದ ಪರಂಪರೆಗೆ ಧಕ್ಕೆ ಆಗುವುದಲ್ಲದೇ, ಭಕ್ತಾದಿಗಳಿಗೂ ತೀವ್ರ ನೋವುಂಟಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಕೆಲವರು ಇಂತಹ ಸಭೆ, ಶಾಖಾ ಮಠದ ವಿಚಾರಕ್ಕೆ ಮುಂದಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಕಾಂಗ್ರೆಸ್ ಮುಖಂಡರು ಬೇರೆ ಹೆಸರಿನಲ್ಲಿ ಬೇರೆ ಮಠ ಕಟ್ಟಿಕೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದು ಸ್ವಾಮೀಜಿ ನುಡಿದರು.- - -
(ಕೋಟ್) ಸುಖಾಸುಮ್ಮನೇ ಶ್ರೀಮಠದ ಬಗ್ಗೆ ವಿಚಾರ ಮುನ್ನೆಲೆಗೆ ತರುತ್ತಿರುವ ಕೆಲವರು ನಮ್ಮ ಮಠಕ್ಕೆ ಬಂದು ಎಂದಿಗೂ ಗೌರವಾದರಗಳನ್ನು ಪಡೆದವರಲ್ಲ. ಶ್ರೀಮಠಕ್ಕೆ ಭಕ್ತಿ ತೋರಿಸಿಲ್ಲ. ಇಂತಹ ಭಕ್ತರಿಂದ ನಮ್ಮ ಮಠವನ್ನು ಕಟ್ಟುವುದಾದರೂ ಹೇಗೆ ಸಾಧ್ಯ? ನಾವು ಆದಿಜಾಂಬವ ಪೀಠದ ಪರಂಪರೆಯಲ್ಲಿ ಬಂದವರು. ಪೀಠದ ಶಾಖೆ, ಮೂಲ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ಭಕ್ತರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದೇವೆ.- ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ, ಶ್ರೀ ಆದಿಜಾಂಬವ ಮಠ, ಕೋಡಿಹಳ್ಳಿ.
- - --8ಕೆಡಿವಿಜಿ2.ಜೆಪಿಜಿ:
ದಾವಣಗೆರೆಯಲ್ಲಿ ಭಾನುವಾರ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಶ್ರೀ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಮಠದ ವಿರುದ್ಧ ಅಪಪ್ರಚಾರ ನಡೆಸದಂತೆ ಎಚ್ಚರಿಕೆ ನೀಡಿದರು.