ಆದಿಕವಿ ವಾಲ್ಮೀಕಿ ರಾಮಾಯಣ ಉತ್ತಮ ಗ್ರಂಥ : ಅಬ್ದುಲ್ ರೆಹಮಾನ್‌

| Published : Oct 18 2024, 12:09 AM IST

ಆದಿಕವಿ ವಾಲ್ಮೀಕಿ ರಾಮಾಯಣ ಉತ್ತಮ ಗ್ರಂಥ : ಅಬ್ದುಲ್ ರೆಹಮಾನ್‌
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಸಂಸ್ಕೃತದಲ್ಲಿ ಶ್ರೀರಾಮನ ಜೀವನಾಧಾರಿತ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ ಎಂದು ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್‌ ಹೇಳಿದರು.

ಲಕ್ಕವಳ್ಳಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಂಸ್ಕೃತದಲ್ಲಿ ಶ್ರೀರಾಮನ ಜೀವನಾಧಾರಿತ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ ಎಂದು ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್‌ ಹೇಳಿದರು.

ಲಕ್ಕವಳ್ಳಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಎಂಬ ಇದೊಂದು ಉತ್ತಮ ಗ್ರಂಥ ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರ ಧಾರ್ಮಿಕ ಸಂದೇಶಗಳು ನಮ್ಮೇಲ್ಲರ ಜೀವನದಲ್ಲಿ ಸಂಸ್ಕೃತಿಯ ಪಾಠ ಕಲಿಸಿದೆ ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎನ್.ಕಿರಣ್ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಎಲ್ಲರೂ ಪಠಿಸಿ ಅನುಕರಣೆ ಮಾಡಿದರೆ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಬಹುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಲ್. ಟಿ. ಹೇಮಣ್ಣ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿ ಒಂದು ಶಕ್ತಿ, ಅವರು ರಚಿಸಿದ ರಾಮಾಯಣ ಗ್ರಂಥ ಒಟ್ಟು 24000 ಪದ್ಯಗಳನ್ನು ಮತ್ತು ಏಳು ವಿಭಾಗಗಳನ್ನು ಒಳಗೊಂಡಿದೆ. ಉತ್ತರಭಾರತದ ಪಂಜಾಬ್ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ವಾಲ್ಮೀಕಿ ಜಯಂತ್ಯುತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಹಾಗೆಯೇ ತಮಿಳುನಾಡಿನ ಚೆನ್ನೈಯಲ್ಲಿ ತಿರವನ್ನೀಯಾರ್ ಆದಿಕವಿ ವಾಲ್ಮೀಕಿ ದೇವಸ್ಥಾನ ನಿರ್ಮಿಸಲಾಗಿದೆ.

ಆದಿಕವಿ ರಚಿಸಿರುವ ಗ್ರಂಥದಲ್ಲಿ ಶ್ರೀ ರಾಮನ ಜೀವನ ಚರಿತ್ರೆ ಹಾಗೂ ಆದರ್ಶಗಳನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಒಟ್ಟಾರೆ ಹಿಂದೂ ಸಂಸ್ಕೃತಿಯ ಪ್ರತಿಬಿಂಬ ಈ ಗ್ರಂಥ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ, ಕರುಣಾಮಯಿ ಸೇವಾ ಸಂಘದ ಪದಾಧಿಕಾರಿಗಳಾದ ಎಲ್.ಆರ್.ಹರೀಶ್, ಪಂಚಾಯಿತಿ ಕಾರ್ಯದರ್ಶಿ, ಸಿಬ್ಬಂದಿ, ಗ್ರಾಮ ಪಂಚಾಯಿತಿ ಪೌರಕಾರ್ಮಿಕರು, ಗ್ರಾಮಸ್ಥರು ಭಾಗವಹಿಸಿದ್ದರು.

17ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಗ್ರಾಪಂ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ಲುಲ್ ರೆಹಮಾನ್, ಉಪಾಧ್ಯಕ್ಷೆ ನಿರ್ಮಲಾ, ಮಾಜಿ ಸದಸ್ಯ ಎಲ್. ಟಿ. ಹೇಮಣ್ಣ ಮತ್ತಿತರರು ಇದ್ದರು.