ಆಲೂರು ತಾಲೂಕು ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆದಿಲ್‌ ಪಾಷ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಿ. ಎನ್. ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ಕಾರ್ಯದರ್ಶಿ ಸತೀಶ್ ಚಿಕ್ಕಕಣಗಾಲು, ಖಜಾಂಚಿ ಎಚ್. ವಿ. ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಬೀರ್ ಅಹಮದ್, ಎಚ್. ವೈ. ವಿಶ್ವನಾಥ್, ಎಂ. ಪಿ. ಚಿದಾನಂದ, ಪ್ರದೀಪ, ವೀರಭದ್ರಸ್ವಾಮಿ, ಸಲೀಪಾಷ, ಎಚ್. ಡಿ. ಪ್ರದೀಪ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಪ್ರಕಾಶ್ ಮತ್ತು ಆ.ನ.ಪ್ರಸನ್ನ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕು ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆದಿಲ್‌ ಪಾಷ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ, ಉಪಾಧ್ಯಕ್ಷರಾಗಿ ಬಿ. ಎನ್. ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ಕಾರ್ಯದರ್ಶಿ ಸತೀಶ್ ಚಿಕ್ಕಕಣಗಾಲು, ಖಜಾಂಚಿ ಎಚ್. ವಿ. ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಬೀರ್ ಅಹಮದ್, ಎಚ್. ವೈ. ವಿಶ್ವನಾಥ್, ಎಂ. ಪಿ. ಚಿದಾನಂದ, ಪ್ರದೀಪ, ವೀರಭದ್ರಸ್ವಾಮಿ, ಸಲೀಪಾಷ, ಎಚ್. ಡಿ. ಪ್ರದೀಪ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಪ್ರಕಾಶ್ ಮತ್ತು ಆ.ನ.ಪ್ರಸನ್ನ ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಪೃಥ್ವಿಜಯರಾಮ್, ಮಾಜಿ ಅಧ್ಯಕ್ಷರಾದ ಎಂ. ಪಿ. ಹರೀಶ್, ಎಚ್ ವಿ ರಾಘವೇಂದ್ರ, ನಟರಾಜ್ ನಾಕಲಗೂಡು, ಉಪಸ್ಥಿತರಿದ್ದರು.