ಮರಿಯಮ್ಮನಹಳ್ಳಿ ಪಪಂ ಅಧ್ಯಕ್ಷರಾಗಿ ಆದಿಮನಿ ಹುಸೇನ್‌ ಬಾಷಾ ಆಯ್ಕೆ

| Published : Aug 31 2024, 01:35 AM IST

ಮರಿಯಮ್ಮನಹಳ್ಳಿ ಪಪಂ ಅಧ್ಯಕ್ಷರಾಗಿ ಆದಿಮನಿ ಹುಸೇನ್‌ ಬಾಷಾ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆದಿಮನಿ ಹುಸೇನ್‌ ಬಾಷಾ, ಉಪಾಧ್ಯಕ್ಷರಾಗಿ ಲಕ್ಷ್ಮೀ ರೋಗಾಣಿ ಮಂಜುನಾಥ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಪಪಂ ಕಚೇರಿಯ ಮುಂದಿನ ರಸ್ತೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಮರಿಯಮ್ಮನಹಳ್ಳಿ: ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆದಿಮನಿ ಹುಸೇನ್‌ ಬಾಷಾ, ಉಪಾಧ್ಯಕ್ಷರಾಗಿ ಲಕ್ಷ್ಮೀ ರೋಗಾಣಿ ಮಂಜುನಾಥ ಅವಿರೋಧವಾಗಿ ಆಯ್ಕೆಯಾದರು.

ಸುಮಾರು 2 ವರ್ಷ 8 ತಿಂಗಳು ಆನಂತರ ನಡೆದ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಅಧ್ಯಕ್ಷರ ಸ್ಥಾನಕ್ಕೆ 11ನೇ ವಾರ್ಡಿನ ಸದಸ್ಯ ಆದಿಮನಿ ಹುಸೇನ್‌ ಬಾಷಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರ ಸ್ಥಾನಕ್ಕೆ 9ನೇ ವಾರ್ಡಿನ ಸದಸ್ಯೆ ಲಕ್ಷ್ಮೀ ರೋಗಾಣಿ ಮಂಜುನಾಥ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ಹೊಸಪೇಟೆಯ ತಹಸೀಲ್ದಾರ್‌ ಶ್ರುತಿ ಮಳ್ಳಪ್ಪಗೌಡ್ರು ಕರ್ತವ್ಯ ನಿರ್ವಹಿಸಿದರು.

ಮರಿಯಮ್ಮನಹಳ್ಳಿ ಪಪಂ 18 ಸದಸ್ಯರ ಬಲ ಹೊಂದಿದೆ. 2021ರ ಡಿಸೆಂಬರ್ 30ರಂದು ಚುನಾವಣೆಯಲ್ಲಿ ಕಾಂಗ್ರೆಸ್‌ನ 13 ಸದಸ್ಯರು, 4 ಬಿಜೆಪಿ ಹಾಗೂ 1 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಶುಕ್ರವಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ 13 ಕಾಂಗ್ರೆಸ್‌ ಸದಸ್ಯರು ಮಾತ್ರ ಭಾಗವಹಿಸಿದ್ದರು. ಲೋಕಸಭಾ ಸದಸ್ಯ ಈ. ತುಕಾರಾಂ ಭಾಗವಹಿಸಿದ್ದರು.

ಕಾಂಗ್ರೆಸ್‌ ಸಂಭ್ರಮ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಪಪಂ ಕಚೇರಿಯ ಮುಂದಿನ ರಸ್ತೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕೆಎಂಎಫ್‌ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್‌. ಭೀಮಾನಾಯ್ಕ್, ಕಾಂಗ್ರೆಸ್‌ ಮುಖಂಡರಾದ ಕುರಿ ಶಿವಮೂರ್ತಿ, ಗೋವಿಂದರ ಪರಶುರಾಮ, ಎನ್. ಸತ್ಯನಾರಾಯಣ, ಎನ್‌.ಎಸ್‌. ಬುಡೇನ್‌ ಸಾಹೇಬ್‌, ನಂದಿಬಂಡಿ ಉಪ್ಪಾರ್‌ ಸೋಮಪ್ಪ, ವಿಷ್ಣುನಾಯ್ಕ, ಬಿ. ವಿಜಯಕುಮಾರ್‌, ಬಿ. ತಾಯಪ್ಪ, ಹುರುಕೊಳ್ಳಿ ಮಂಜುನಾಥ, ಸಿ. ಮಂಜುನಾಥ, ರೋಗಾಣಿ ಮಂಜುನಾಥ, ರುದ್ರಾನಾಯ್ಕ, ಮರಡಿ ಬಸವರಾಜ, ಸುರೇಶ್‌, ಮಲ್ಲೇಶ್‌, ಗಾಳೆಪ್ಪ, ಗೋಣಿಬಸಪ್ಪ ಉಪಸ್ಥಿತರಿದ್ದರು.