ಸರ್‌ಎಂವಿ ಕಾಲೇಜಿನ ಅದಿತಿ ಜಿಲ್ಲೆ ಅಗ್ರ ಸಾಧಕಿ

| Published : Apr 09 2025, 12:33 AM IST

ಸಾರಾಂಶ

ಮಾರ್ಚ್‌ನಲ್ಲಿ ನಡೆದ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯು ಶೇ.69.45 ಫಲಿತಾಂಶ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ 20ನೇ ಸ್ಥಾನಕ್ಕೇರಿದೆ. ದಾವಣಗೆರೆ ನಗರದ ಸರ್ ಎಂ.ವಿ. ಪಿಯು ಕಾಲೇಜಿನ ಅದಿತಿ ವೀರೇಶ್ ಅಂಗಡಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ 6ನೇ ರ್ಯಾಂಕ್ ಹಾಗೂ ಜಿಲ್ಲೆಯ ಅಗ್ರ ಸಾಧಕಿಯಾಗಿ ಗಮನ ಸೆಳೆದಿದ್ದಾರೆ.

- ಯಾಗಿಯೂ ಗಮನ । 21ರಿಂದ 20ನೇ ಸ್ಥಾನಕ್ಕೆ ಮುಂದಡಿಯಿಟ್ಟ ಜಿಲ್ಲೆ ಫಲಿತಾಂಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾರ್ಚ್‌ನಲ್ಲಿ ನಡೆದ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯು ಶೇ.69.45 ಫಲಿತಾಂಶ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ 20ನೇ ಸ್ಥಾನಕ್ಕೇರಿದೆ. ದಾವಣಗೆರೆ ನಗರದ ಸರ್ ಎಂ.ವಿ. ಪಿಯು ಕಾಲೇಜಿನ ಅದಿತಿ ವೀರೇಶ್ ಅಂಗಡಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ 6ನೇ ರ್ಯಾಂಕ್ ಹಾಗೂ ಜಿಲ್ಲೆಯ ಅಗ್ರ ಸಾಧಕಿಯಾಗಿ ಗಮನ ಸೆಳೆದಿದ್ದಾರೆ.

ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 19161 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಜರಾಗಿದ್ದರು. ಈ ಪೈಕಿ 13308 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಜಿಲ್ಲೆಗೆ ಶೇ.69.45 ಫಲಿತಾಂಶ ತಂದಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಎಸ್.ಜಿ.ಕರಿಬಸಪ್ಪ ತಿಳಿಸಿದರು.

ಪಿಯುಸಿ ಪರೀಕ್ಷೆಯ ಕಲಾ ವಿಭಾಗದಿಂದ ಹಾಜರಾಗಿದ್ದ 3960 ವಿದ್ಯಾರ್ಥಿಗಳಲ್ಲಿ 1561 ಉತ್ತೀರ್ಣರಾಗಿ, ಶೇ.39.33ರಷ್ಟು ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 3790 ವಿದ್ಯಾರ್ಥಿಗಳಲ್ಲಿ 2296 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.60.58ರಷ್ಟು ಫಲಿತಾಂಶ ಬಂದಿದೆ ಎಂದರು.

ವಿಜ್ಞಾನ ವಿಭಾಗದಿಂದ 11,402 ವಿದ್ಯಾರ್ಥಿಗಳ ಪೈಕಿ 9451 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.82.89 ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 3244 ವಿದ್ಯಾರ್ಥಿಗಳಲ್ಲಿ 1913 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.59.68 ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 15917 ವಿದ್ಯಾರ್ಥಿಗಳಲ್ಲಿ 11372 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.71.45 ಫಲಿತಾಂಶ ಬಂದಿದೆ ಎಂದು ವಿವರಿಸಿದರು.

ವಿಜ್ಞಾನ ವಿಭಾಗದಲ್ಲಿ ಸರ್ ಎಂ.ವಿ. ಪಿಯು ಕಾಲೇಜಿನ ಅದಿತಿ ಅಂಗಡಿ 597 ಅಂಕ ಪಡೆದು, ರಾಜ್ಯಕ್ಕೆ 6ನೇ ರ್ಯಾಂಕ್ ಹಾಗೂ ಜಿಲ್ಲೆಯ ಟಾಪರ್ ಆಗಿ ಸಾಧನೆ ಮಾಡಿದ್ದಾರೆ. ಸರ್ ಎಂ.ವಿ. ಪಿಯು ಕಾಲೇಜಿನ ಎನ್.ಎಂ. ಜಯಲಕ್ಞ್ಮೀ 595 ಅಂಕ, ರಾಹುಲ್ ಆರ್. ಮಠದ್‌ 595, ಸಿದ್ಧಗಂಗಾ ಪಿಯು ಕಾಲೇಜಿನ ರವಿಕಿರಣ್‌ 595 ಅಂಕ, ಸೃಜನ್ ಎಸ್.ಗೌಡ 595 ಅಂಕ ಪಡೆದು ಜಿಲ್ಲೆಯ 2ನೇ ಟಾಪರ್ ಆಗಿದ್ದಾರೆ. ಸರ್ ಎಂ.ವಿ. ಕಾಲೇಜಿನ ಎ.ನಂದನ 594 ಅಂಕ, ವಿದ್ಯಾಚೇತನ ಪಿಯು ಕಾಲೇಜಿನ ಜಿ.ವಿ.ಶ್ರೇಯಾ 594 ಅಂಕ ಪಡೆದು, ಜಿಲ್ಲೆಯ ಮೂರನೇ ಟಾಪರ್ ಆಗಿದ್ದಾರೆ ಎಂದು ಹೇಳಿದರು.

ವಾಣಿಜ್ಯ ವಿಭಾಗದಲ್ಲಿ ಸರ್ ಎಂ.ವಿ. ಪಿಯು ಕಾಲೇಜಿನ ಕೆ.ಎಲ್.ಸಾಕ್ಷಿ 593 ಅಂಕ, ಆರ್.ಜಿ. ಪಿಯು ಕಾಲೇಜಿನ ಧನ್ಯ ಎಂ. ಪೈ 589 ಅಂಕ, ಧವನ್ ಪಿಯು ಕಾಲೇಜಿನ ಅಮೀಥಾ ಪಿ. ಪದಗಲ್‌ 588 ಅಂಕ ಪಡೆಯುವ ಮೂಲಕ ಜಿಲ್ಲೆಯ ಅಗ್ರ ಮೂವರು ಟಾಪರ್ ಎಂಬ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಜಗಳೂರು ಪಟ್ಟಣದ ನಲಂದ ಪಿಯು ಕಾಲೇಜಿನ ಎಲ್.ಕಾವ್ಯ 565 ಅಂಕ ಪಡೆದು, ಜಿಲ್ಲೆಯ ಟಾಪರ್ ಆಗಿದ್ದಾರೆ. ಜಗಳೂರು ಸರ್ಕಾರಿ ಪಿಯು ಕಾಲೇಜಿನ ಜಿ.ಜಿ.ಸಿದ್ದೇಶ 559 ಅಂಕ ಪಡೆದು, ದ್ವಿತೀಯ ಟಾಪರ್ ಹಾಗೂ ದಾವಣಗೆರೆ ಅಥಣಿ ಕಾಂಪೋಜಿಟ್ ಪಿಯು ಕಾಲೇಜಿನ ಕುಸುಮ ಎಸ್.ಮಲ್ಲಿಗೇರ 557 ಅಂಕ ಪಡೆದು, ಜಿಲ್ಲೆಗೆ 3ನೇ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಕರಿಬಸಪ್ಪ ತಿಳಿಸಿದರು.

- - -

(ಸಾಂದರ್ಭಿಕ ಚಿತ್ರ)