ಮಹಾಶಿವರಾತ್ರಿ ಅಂಗವಾಗಿ ಕೊಯಮತ್ತೂರಿನ ಈಶಾ ಕೇಂದ್ರದಿಂದ ಆರಂಭವಾದ ಆದಿಯೋಗಿ ರಥಯಾತ್ರೆ ಮಡಿಕೇರಿಗೆ ಪ್ರವೇಶಿಸಿತು.
ಮಡಿಕೇರಿ: ಮಹಾಶಿವರಾತ್ರಿ ಅಂಗವಾಗಿ ಕೊಯಮತ್ತೂರಿನ ಈಶಾ ಕೇಂದ್ರದಿಂದ ಆರಂಭವಾದ ಆದಿಯೋಗಿ ರಥಯಾತ್ರೆ ಸೋಮವಾರ ಸಂಜೆ ಮಡಿಕೇರಿಗೆ ಪ್ರವೇಶಿಸಿತು.
ಡಿ. 7ರಂದು ದೇವಾಲಯ ಪಟ್ಟಣವಾದ ಉಡುಪಿಯಿಂದ ಪ್ರಾರಂಭವಾದ ಯಾತ್ರೆಯು ಫೆ. 13ರಂದು ಮಹಾಶಿವರಾತ್ರಿ ಆಚರಣೆಗೆ ಮುಂಚಿತವಾಗಿ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಮುಕ್ತಾಯಗೊಳ್ಳಲಿದೆ.ಆದಿಯೋಗಿ ರಥವು ಮಡಿಕೇರಿಯನ್ನು ಪ್ರವೇಶಿಸುತ್ತಿದ್ದಂತೆ, ಆದಿಯೋಗಿಯ ರಥಕ್ಕೆ ಭಕ್ತರು ಫುಷ್ಪವನ್ನು ಅರ್ಪಿಸಿದರು. ನಗರದುದಕ್ಕೂ ಭಜನೆಯನ್ನು ಹಾಡುವ ಮೂಲಕ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.
ಟೋಲ್ ಗೇಟ್‌ನಲ್ಲಿ ಪ್ರಾರಂಭವಾದ ಮೆರವಣಿಗೆ ಕೋಟೆ, ಹಳೆಯ ಖಾಸಗಿ ಬಸ್ ನಿಲ್ದಾಣ, ಚೌಕಿ, ಕಾಲೇಜು ರಸ್ತೆ, ಪೇಟೆ ರಾಮ ಮಂದಿರ, ಮಾರುಕಟ್ಟೆ ಜಂಕ್ಷನ್, ಮಹಾದೇವಪೇಟೆ ರಸ್ತೆ ಮತ್ತು ಚೌಡೇಶ್ವರಿ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ಸೋಮವಾರಪೇಟೆ ರಸ್ತೆಯಲ್ಲಿರುವ ಕಾಶೀಮಠ ತಲುಪಿತು.