ಗ್ರಾಮದ ನಾಗೇಂದ್ರ ಅವರು ಸರ್ಕಾರಿ ಜಮೀನನ್ನು ಅಕ್ರಮ ಖಾತೆ ಮಾಡುತ್ತಿರುವುದಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಟೌನ್ ಠಾಣೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಗ್ರಾಮದ ಸರ್ವೇ ನಂ. 411ರ ಸರ್ಕಾರಿ ಜಮೀನು ಅಕ್ರಮ ಖಾತೆ ಸಂಬಂಧ ಲೋಕಾಯುಕ್ತ ಪೊಲೀಸರ ತನಿಖೆ ನಂತರ ತಲೆ ಮರಿಸಿಕೊಂಡಿದ್ದ ಎಡಿಎಲ್‌ಆರ್ ಮೊಹಮ್ಮದ್ ಹುಸೇನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ನಾಗೇಂದ್ರ ಅವರು ಸರ್ಕಾರಿ ಜಮೀನನ್ನು ಅಕ್ರಮ ಖಾತೆ ಮಾಡುತ್ತಿರುವುದಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಟೌನ್ ಠಾಣೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಖಾಸಗಿ ವ್ಯಕ್ತಿ ಸೇರಿದಂತೆ ಭೂ ದಾಖಲೆಗಳ ಇಲಾಖೆ ಸರ್ವೇ ಸೂಪರ್ ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ಸಿ. ನೇಶಾ ಸಾರಿಕ ಮಲ್ಲಿ ಈ 9 ಮಂದಿಯನ್ನು ಕಳೆದ ಜು.2 ರಂದು ಬಂಧಿಸಿದ್ದರು. ಪ್ರಮುಖ ಆರೋಪಿ ಎಡಿಎಲ್‌ಆರ್ ಮೊಹಮ್ಮದ್ ಹುಸೇನ್ 1 ತಿಂಗಳಿಗೂ ಹೆಚ್ಚು ಕಾಲ ತಲೆ ಮರೆಸಿಕೊಂಡಿದ್ದನು. ಲೋಕಾಯುಕ್ತ ಪೊಲೀಸರ ತನಿಖೆ ವೇಳೆ ಎಡಿಎಲ್‌ಆರ್ ಮನೆಯಲ್ಲಿ ₹1.40 ಲಕ್ಷ ಸಹಿತ ಹಲವು ದಾಖಲೆಗಳು ಸಹ ಸಿಕ್ಕಿದ್ದವು. ರಾಯಚೂರಿನಲ್ಲಿ ತಲೆ ಮರೆಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸರು ತೆರಳಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ, ನಂತರ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.