ಸಾರಾಂಶ
ಬೆಂಗಳೂರಿನ ಫ್ಲೈ ಓವರ್ ಒಂದರಲ್ಲಿ ಹಗಲು ದರೋಡೆ ನಡೆದು ಕೋಟ್ಯಂತರ ರುಪಾಯಿ ಹಣ ದರೋಡೆ ಮಾಡಿದ್ದಾರೆ. ಇದನ್ನು ನೋಡಿದರೆ ಈ ಸರ್ಕಾರದಲ್ಲಿ ಜನರಿಗೆ ಭದ್ರತೆಯೂ ಇಲ್ಲ ನೆಮ್ಮದಿಯೂ ಇಲ್ಲದಂತಾಗಿದೆ.
ಹುಬ್ಬಳ್ಳಿ:
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಇದರಿಂದ ರಾಜ್ಯದಲ್ಲಿ ದರೋಡೆ, ಹಲ್ಲೆ, ಕೋಮುಗಲಭೆ ನಡೆಯುತ್ತಿವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಮೇಲೆ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಚೆಗೆ ಶಿವಮೊಗ್ಗದಲ್ಲಿ ಹಿಂದೂ ಯುವಕನನ್ನು ಅನ್ಯ ಕೋಮಿನವರು ಅಟ್ಟಾಡಿಸಿ ಮನ ಬಂದಂತೆ ಥಳಿಸಿದ್ದಾರೆ. ದೂರು ನೀಡಲು ಹೋದರೆ ಪೊಲೀಸರು ತೆಗೆದುಕೊಂಡಿಲ್ಲ. ಇಂತಹ ಕೃತ್ಯಗಳು ನಡೆಯುತ್ತಲೇ ಇವೆ. ಈ ಹಿಂದೆ ನಡೆದ ಅನೇಕ ಘಟನೆಗಳಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಗಲಭೆಕೋರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುತ್ತಿದೆ, ಇದು ಸರಿಯಾದ ಕ್ರಮವಲ್ಲ ಎಂದರು.
ಬುಧವಾರ ಬೆಂಗಳೂರಿನ ಫ್ಲೈ ಓವರ್ ಒಂದರಲ್ಲಿ ಹಗಲು ದರೋಡೆ ನಡೆದು ಕೋಟ್ಯಂತರ ರುಪಾಯಿ ಹಣ ದರೋಡೆ ಮಾಡಿದ್ದಾರೆ. ಇದನ್ನು ನೋಡಿದರೆ ಈ ಸರ್ಕಾರದಲ್ಲಿ ಜನರಿಗೆ ಭದ್ರತೆಯೂ ಇಲ್ಲ ನೆಮ್ಮದಿಯೂ ಇಲ್ಲದಂತಾಗಿದೆ. ಪರ್ಯಾಸವೆಂದರೆ ಇಂತಹ ಘಟನೆಗಳು ನಡೆದಿರುವ ಕುರಿತು ಗೃಹಸಚಿವರಿಗೆ ಮಾಹಿತಿಯೇ ಇರುವುದಿಲ್ಲ ಎಂದರು.ಮುಖ್ಯಮಂತ್ರಿ ಬದಲಾವಣೆ ಹಾಗೂ ಸಂಪುಟ ವಿಸ್ತರಣೆ ಗುಂಗಿನಲ್ಲೇ ಸಚಿವರು, ಶಾಸಕರು ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
;Resize=(128,128))
;Resize=(128,128))
;Resize=(128,128))
;Resize=(128,128))