ಫೆಬ್ರವರಿ ತಿಂಗಳಲ್ಲಿ ಅವಧಿ ಮುಗಿಯುತ್ತಿರುವ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಕೂಡ ಶೀಘ್ರದಲ್ಲೇ ಆಡಳಿತ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಫೆಬ್ರವರಿ ತಿಂಗಳಲ್ಲಿ ಅವಧಿ ಮುಗಿಯುತ್ತಿರುವ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಕೂಡ ಶೀಘ್ರದಲ್ಲೇ ಆಡಳಿತ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು. ಗುಬ್ಬಿ ತಾಲೂಕಿನ ಮಂಚಲದೊರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನೂತನ ಹಾಲಿನ ಡೈರಿ ಕಟ್ಟಡಕ್ಕೆ ಗುದ್ದಲಿಪೂಜೆ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ಆದೇಶ ಹೊರಡಿಸಿದ ಮೇಲೆ ಯಾವುದೇ ಕಾರಣಕ್ಕೂ ಇರುವ ಆಡಳಿತ ಸಿಬ್ಬಂದಿಗಳನ್ನು ಮುಂದುವರೆಸಲಾಗುವುದಿಲ್ಲ. ಸರ್ಕಾರದ ಆದೇಶ ಮಾಡಿರುವುದರಿಂದ ಬಹುತೇಕ ಮುಂದಿನ ತಿಂಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಗಳ ನೇಮಿಸಲಾಗುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವವರೆಗೂ ಮಾತ್ರ ಆಡಳಿತ ಅಧಿಕಾರಿಗಳು ಇರುತ್ತಾರೆ. ಈಗಾಗಲೇ ಎಲ್ಲಾ ಸ್ಥಳೀಯ ಚುನಾವಣೆಗಳನ್ನ ಮಾಡಬೇಕೆಂದು ಚುನಾವಣಾ ಆಯೋಗ ಕೂಡ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಂದು ತಿಳಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜು ,ಮಹಿಳಾ ಡೈರಿ ಅಧ್ಯಕ್ಷ ಶಶಿಕಲಾ ಲಿಂಗರಾಜ್ , ಕರಿಯಮ್ಮ ರಮೇಶ್ , ಶಶಿಕಲಾ, ಸದಸ್ಯರಾದ ಬಸವರಾಜು , ಶಂಕುತಲಾ , ರಂಗಸ್ವಾಮಿ , ರಮೇಶ್ , ಬಸವರಾಜು , ಕರಿಬಸವಯ್ಯ , ಬಾಬು ಹಾಗೂ ಗ್ರಾಮಸ್ಥರ ಭಾಗವಹಿಸಿದ್ದರು.