ಸಾರಾಂಶ
ಮಣಿಪಾಲ ಡಾ. ಟಿ.ಎಂ.ಎ. ಪೈ ಫೌಂಡೇಶನ್ ಅಂಗಸಂಸ್ಥೆಯಾದ ಟಿ.ಎಂ.ಎ. ಪೈ ಪಾಲಿಟೆಕ್ನಿಕ್, ನವದೆಹಲಿಯ ಎಐಸಿಟಿಇ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿದೆ. ಈ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶ ಆರಂಭವಾಗಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ನಂತರ ಎಂಜಿನಿಯರಿಂಗ್ ಅಥವಾ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಲಾಗದವರು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಬೇಡಿಕೆ, ಉದ್ಯೋಗಾವಕಾಶಗಳಿರುವ ಡಿಪ್ಲೊಮಾ ವ್ಯಾಸಂಗಕ್ಕೆ ಇಲ್ಲಿದೆ ಅವಕಾಶ.ಮಣಿಪಾಲ ಡಾ. ಟಿ.ಎಂ.ಎ. ಪೈ ಫೌಂಡೇಶನ್ ಅಂಗಸಂಸ್ಥೆಯಾದ ಟಿ.ಎಂ.ಎ. ಪೈ ಪಾಲಿಟೆಕ್ನಿಕ್, ನವದೆಹಲಿಯ ಎಐಸಿಟಿಇ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿದೆ. ಈ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶ ಆರಂಭವಾಗಿದೆ.ಇಲ್ಲಿ ಆಟೋಮೊಬೈಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ (ಕ್ಯಾಡ್ ಸೆಂಟರ್ ಮೂಲಕ ಇಂಟೀರಿಯರ್ ಡಿಸೈನ್ ಒಳಗೊಂಡಿರುತ್ತದೆ), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಮೆಕಾನಿಕಲ್ ಎಂಜಿನಿಯರಿಂಗ್, ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಪ್ರಿಂಟಿಂಗ್ ತಂತ್ರಜ್ಞಾನ ವಿಷಯಗಳಲ್ಲಿ ಡಿಪ್ಲೊಮಾ ತರಗತಿಗಳಿವೆ.೧೦ನೇ ತರಗತಿ ಪಾಸಾದವರು ಅಥವಾ ಕಲಾ ಅಥವಾ ವಾಣಿಜ್ಯ ಪಪೂ ತರಗತಿಗಳಲ್ಲಿ ಪಾಸ್ ಅಥವಾ ಫೇಲ್ ಆದವರು ಈ 3 ವರ್ಷಗಳ ಡಿಪ್ಲೊಮಾ ತರಗತಿಗಳಿಗೆ ಸೇರಬಹುದಾಗಿದೆ.ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪಾಸಾದವರು ನೇರವಾಗಿ ಡಿಪ್ಲೊಮಾದ ದ್ವಿತೀಯ ವರ್ಷಕ್ಕೆ ಪ್ರವೇಶ (ಲ್ಯಾಟರಲ್ ಎಂಟ್ರಿ) ಪಡೆಯಬಹುದಾಗಿದೆ.