ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಅಂಬೇಡ್ಕರ್ ಸಂವಿಧಾನಕ್ಕೆ ಮಾತ್ರ ಸೀಮಿತವಾಗಿರದೆ ಬಹುರೂಪಿಯಾಗಿ ಸಮಾಜಮುಖಿಯಾಗಿ ಸಮಾನತೆಯ ಆದರ್ಶದ ಮಾನವಾತವಾದಿಯಾಗಿ ಕಾರ್ಯನಿರ್ವಹಿಸಿದ್ದರು. ಅಂಬೇಡ್ಕರ್ ವಿಚಾರಧಾರೆಗಳ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು.ನಗರದ ನಗರಸಭೆಯ ಕಾರ್ಯಾಲಯದಲ್ಲಿ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರಸಭೆಯ ಉಪಾಧ್ಯಕ್ಷೆ ಸಂಗೀತಾ ಮಾತನಾಡಿ, ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲ ಎಲ್ಲರಿಗೂ ಆದರ್ಶ ಪುರುಷರಾಗಿದ್ದರು. ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಹಾಗೂ ಮೀಸಲಾತಿ ಕಲ್ಪಿಸಿದರು. ದಲಿತರಿಗೆ ಮೀಸಲಾತಿ ಜಾರಿ ಮಾಡದಿದ್ದರೆ ಇಂದಿಗೂ ದಲಿತರು ಅವಕಾಶಗಳಿಂದ ವಂಚಿತರಾಗಬೇಕಾಗಿತ್ತು. ಅಂಬೇಡ್ಕರ್ ಶೋಷಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದರು ಎಂದರು.ನಗರಸಭೆ ಪೌರಾಯುಕ್ತ ಪ್ರಸಾದ್‌ರೆಡ್ಡಿ ಮಾತನಾಡಿ, ಅಂಬೇಡ್ಕರ್ ಪ್ರಪಂಚಕ್ಕೆ ಸಮಾನತೆ, ಸಾಮಾಜಿಕ ನ್ಯಾಯದ ಬೆಳಕು ಚೆಲ್ಲಿದ ಮಹಾನ್ ನಾಯಕ, ಸಮಾಜದ ಹಿತಕ್ಕಾಗಿ ತನ್ನ ಕುಟುಂಬವನ್ನೇ ನಿರ್ಲಕ್ಷಿಸಿದ ಮಹಾನ್ ತ್ಯಾಗಮಯಿ ಅವರಲ್ಲಿ ಜಾತಿ ಧರ್ಮಗಳ ತಾರತಮ್ಯದ ಭೇದಭಾವಗಳಿರಲ್ಲಿಲ್ಲ ಎಲ್ಲರನ್ನು ಸಮಾತೆಯಿಂದ ಕಾಣುತ್ತಿದ್ದರು, ಅವರ ಜೀವನದ ಪ್ರತಿಯೂಂದು ಘಟಕವು ಕ್ರಾಂತಿಕಾರಿಯಾಗಿತ್ತು, ಅವರ ಕೌಟುಂಬಿಕ ಜೀವನ ದುಸ್ತರವಾಗಿತ್ತು ಎಂದು ನೆನಪಿಸಿಕೊಂಡರು.ಅಂಬೇಡ್ಕರ್ ಸಂವಿಧಾನದ ಶಿಲ್ಪ ಮಾತ್ರವಲ್ಲ, ಅರ್ಥಶಾಸ್ತ್ರ ತಜ್ಞರು, ಕಾನೂನು ತಜ್ಞರು. ಮಹಾ ಮಾನವತಾವಾದಿಗಳಾಗಿದ್ದರು. ಸಂವಿಧಾನ ಬದ್ಧವಾಗಿ ಪ್ರತಿಯಬ್ಬರಿಗೂ ಮತದಾನದ ಹಕ್ಕು, ಮೂಲಭೂತವಾದ ಸಮಾನತೆಯ ಹಕ್ಕನ್ನು ಕಲ್ಪಿಸಿಕೊಟ್ಟರು. ಅಂಬೇಡ್ಕರ್ ಭಾರತದ ಸಂಪತ್ತು, ಸಂವಿಧಾನ ವಿಶ್ವಕ್ಕೆ ಮಾದರಿಯಾದ ಮಾರ್ಗದರ್ಶನ ಪವಿತ್ರವಾದ ಗ್ರಂಥವಾಗಿದೆ ಎಂದರು.ಕಿರಿಯ ಅಭಿಯಂತರ ಶ್ರೀನಿವಾಸ್ ಪ್ರಸ್ತಾವಿಕ ನುಡಿಗಳಾಡಿದರು. ಜಾನಪದ ಕಲಾವಿದ ವೆಂಕಟಚಲಪತಿ ಅಂಬೇಡ್ಕರ್ ಕ್ರಾಂತಿಕಾರಿ ಗೀತೆ ಹಾಡಿದರು.ಕಾರ್ಯಪಾಲಕ ಅಭಿಯಂತರ ಗಂಗಾಧರ್, ನಗರಸಭಾ ಸದಸ್ಯರಾದ ಅಂಬರೀಶ್, ಅಪ್ಸರ್, ಅಪೂರ್ವ, ಶಫಿ, ಸುರೇಶ್, ವಿ.ಮಂಜುನಾಥ, ಮಾಜಿ ಸದಸ್ಯ ಬಾಬಾಜಾನ್, ಮುಖಂಡರಾದ ಜನಾರ್ಧನ್, ಭರತ್‌ರಾಯ್, ಮು.ರಾಘವೇಂದ್ರ, ಅಧಿಕಾರಿಗಳಾದ ರಾಜೇಶ್ವರಿ. ನಯಾಜ್, ನಾರಾಯಣಸ್ವಾಮಿ, ವೇಣುಗೋಪಾಲಚಾರಿ, ಜೀವನ್ ಇದ್ದರು.