ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ವೀರಶೈವ ಧರ್ಮ ಎಲ್ಲ ಧರ್ಮ ಮತ್ತು ಜನಾಂಗದವರನ್ನು ಅಪ್ಪಿಕೊಳ್ಳುವ ಧರ್ಮವಾಗಿದೆ. ಎಲ್ಲರೂ ನನ್ನವರು ಎನ್ನುವ ಭಾತೃತ್ವ ಭಾವನೆ ಇದೆ. ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಇರಬೇಕೆಂದು ನರನಾಳ ಪೂಜ್ಯ ಷ.ಬ್ರ. ಶಿವಕುಮಾರ ಶಿವಾಚಾರ್ಯರು ಹೇಳಿದರು.ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣಮಂಟಪದಲ್ಲಿ ಜರುಗಿದ ೮೯೧ನೇ ಬಸವ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕಲ್ಯಾಣ ನಾಡಿನ ಸಂತರ ಶರಣರ ವಚನಗಳು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಬದುಕು ಸಾರ್ಥಕವಾಗಲಿದೆ. ನಡೆನುಡಿ ಇಲ್ಲದೇ ಭಕ್ತಿ ಆಗುವುದಿಲ್ಲ. ಅಹಂಕಾರ, ದುರಹಂಕಾರ ಮಾಡಿದವರ ಸಂಪತ್ತು ಹಾಳಾಗುತ್ತದೆ. ನಡೆ, ನುಡಿ, ಭಕ್ತಿ ಬೇಕಾಗಿದೆ. ಚಿಂಚೋಳಿ ತಾಲೂಕು ಕೃಷಿ, ಗುರುಸೇವೆ, ಆಧ್ಯಾತ್ಮದಲ್ಲಿ ಶಕ್ತಿಯುತವಾಗಿದೆ. ಕಾಯಕ ಮತ್ತು ದಾಸೋಹ ಸತ್ಯ ಶುದ್ಧವಾಗಿರಬೇಕು. ಬಸವಣ್ಣನವರ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಶುದ್ಧವಾಗಲಿದೆ ಎಂದರು.
ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಕಲಬುರಗಿ ಚಂದು ಪಾಟೀಲ, ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ, ಸಂಗಪ್ಪ ಪೊಲೀಸ್ ಪಾಟೀಲ, ಶಾಂತವೀರ ಹೀರಾಪೂರ, ಗೌತಮ್ ಪಾಟೀಲ, ಅಜೀತ ಪಾಟೀಲ, ವೀರಶೆಟ್ಟಿ ಇಮಡಾಪೂರ ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಶರಣು ಮೋತಕಪಳ್ಳಿ, ಜಗದೀಶ ಮರಪಳ್ಳಿಯವರನ್ನು ಸನ್ಮಾನಿಸಲಾಯಿತು.
ತಾಲೂಕಮಟ್ಟದ ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸಂತೋಷ ಗಡಂತಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಸಕ ಡಾ.ಅವಿನಾಶ ಜಾಧವ್, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಮುಖಂಡರಾದ ಸುಭಾಷ ಸೀಳಿನ, ರಾಜಶೇಖರ ಮಜ್ಜಗಿ, ಸಂಗಮೇಶ ಮೂಲಿಮನಿ, ಶಂಕರಗೌಡ ಅಲ್ಲಾಪೂರ, ಗುಂಡಯ್ಯಸ್ವಾಮಿ, ನಾಗರಾಜ ಮಲಕೂಡ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಉದ್ಯಮಿ ಅಶೋಕ ಮಗದಂಪೂರ, ವಿಜಯಕುಮಾರ ಚೇಂಗಟಿ, ನಂದಿಕುಮಾರ ಪಾಟೀಲ, ನೀಲಕಂಠ ಸೀಳಿನ, ವಿರೇಶ ಎಂಪಳ್ಳಿ, ಶಂಕರ ಶಿವಪುರಿ, ಸಂಜೀವ ಪಾಟೀಲ, ಮುರುಗೆಪ್ಪ ಕುಕ್ಕಡಿ ವಿವಿಧ ಸಮಾಜದ ಮುಖಂಡರಾದ ಸಂಜೀವನ್ ಯಾಕಾಪೂರ, ಜಗದೀಶಸಿಂಗ ಠಾಕೂರ, ಲಕ್ಷ್ಮಣ ಆವಂಟಿ, ಕೆ.ಎಮ.ಬಾರಿ, ಗೋಪಾಲರಾವ ಕಟ್ಟಿಮನಿ, ಹಣಮಂತ ಪೂಜಾರ, ಗೌತಮ ಬೊಮ್ಮನಳ್ಳಿ, ಆನಂದ ಟೈಗರ, ಬಾಸೀತ, ಜಗನ್ನಾಥ ಗುತ್ತೆದಾರ, ಜಗನ್ನಾಥ ಇದಲಾಯಿ ಇನ್ನಿತರಿದ್ದರು. ಸಂತೋಷ ಗಡಂತಿ ಸ್ವಾಗತಿಸಿದರು. ಪ್ರೊ.ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ನಾಗರಾಜ ಮಲಕೂಡ ವಂದಿಸಿದರು. ಇದೆ ಸಂದರ್ಭದಲ್ಲಿ ಬಸವಾಭಿಮಾನಿಗಳು ಬಸವೇಶ್ವರ ವೃತ್ತದಿಂದ ಹಾರಕೂಡ ಮಠದವರೆಗೆ ಬೈಕ್ ರ್‍ಯಾಲಿ ನಡೆಸಿದರು. ಬಸವೇಶ್ವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಮಾಡಲಾಯಿತು. ಅನೇಕ ಗ್ರಾಮಗಳಿಂದ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.