ಬಸವಣ್ಣನ ವಿಚಾರಧಾರೆ ಅಳವಡಿಸಿಕೊಳ್ಳಿ: ಡಾ. ಗಂಗಾಮಾತಾಜಿ

| Published : Dec 12 2024, 12:30 AM IST

ಸಾರಾಂಶ

ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು.

ಅನುಭವ ಮಂಟಪ, ಬಸವಣ್ಣನ ಮೂರ್ತಿ ಅನಾವರಣ, ಕಲ್ಯಾಣ ದರ್ಶನ ಪ್ರವಚನ-೨೦೨೪ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಡಾ. ಗಂಗಾಮಾತಾಜಿ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ಮಂಗಳವಾರ ರಾಷ್ಟ್ರೀಯ ಬಸವದಳದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಅನುಭವ ಮಂಟಪ ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಮತ್ತು ಕಲ್ಯಾಣ ದರ್ಶನ ಪ್ರವಚನ-೨೦೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನಗಳು ಮುಂದಿನ ಪೀಳಿಗೆಗೆ ನೀಡಿದ ಅನುಭಾವದ ಸಾಹಿತ್ಯವಾಗಿವೆ. ವಚನ ಸಾಹಿತ್ಯ ನಾಡಿನಾದ್ಯಂತ ಪ್ರಚಾರವಾಗುವ ಕಾಲ ಕೂಡಿಬಂದಿದೆ. ಮಾನವತ್ವದಿಂದ ದೈವತ್ವದ ಕಡೆಗೆ ಸಾಗಲು ವಚನ ಸಾಹಿತ್ಯ ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದರು.

ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶರಣಬಸವೇಶ್ವರ ಡಾಣಿ ಮಾತನಾಡಿ, ಗುಳೆ ಗ್ರಾಮ ಬಸವತತ್ವದ ತಿರುಳನ್ನು ಮೈಗೂಡಿಸಿಕೊಂಡಿದೆ. ವಿಶ್ವಗುರು ಬಸವಣ್ಣನವರ ಬಗ್ಗೆ ಐತಿಹಾಸಿಕ ಸಂಶೋಧನೆ ನಡೆಯಬೇಕು ಎಂದರು.

ಮನಗೂಳಿಯ ಶ್ರೀ ವಿರತಿಶಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಇನ್ನೂ ಬೇರೂರಿರುವ ಮೂಢನಂಬಿಕೆ, ಕಂದಾಚಾರ, ಜಾತಿ ವ್ಯವಸ್ಥೆ ತೊಲಗಬೇಕು. ಗುಳೆದಲ್ಲಿ ಅನುಭವ ಮಂಟಪ ನಿರ್ಮಿಸಿರುವುದು ಎಲ್ಲರ ಸೌಭಾಗ್ಯ. ಎಲ್ಲರೂ ಗುರುವಿನ ಮಹತ್ವ ಅರಿಯಬೇಕೆಂದರು.

ಈ ಸಂದರ್ಭ ಮಾಜಿ ಸಚಿವ ಹಾಲಪ್ಪ ಆಚಾರ ತಮ್ಮ ಅಧಿಕಾರವಧಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ₹೫ ಲಕ್ಷ ರೂ. ಅನುದಾನ ನೀಡಿದ್ದನ್ನು ಸ್ಮರಿಸಿ ಶ್ರೀಗಳು ಅವರನ್ನು ಸನ್ಮಾನಿಸಲಾಯಿತು.

ಹುಕ್ಕೇರಿ ತಾಲೂಕಿನ ಬಸವಬೆಳವಿಯ ಶ್ರೀಚರಮೂರ್ತಿ ಚಿರಂತೇಶ್ವರ ವಿರಕ್ತಮಠದ ಶ್ರೀ ಶರಣಬಸವ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ, ಶರಣಪ್ಪ ಹೊಸಳ್ಳಿ ಮಾತನಾಡಿದರು.

ಅತಿಥಿಗಳಾಗಿ ಮಕ್ಕಳ್ಳಿಯ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಗ್ರಾಪಂ ಅಧ್ಯಕ್ಷ ದ್ಯಾಮಣ್ಣ ಮೂಲಿ, ಗಣ್ಯರಾದ ಬಸನಗೌಡ ಪೊಲೀಸ್‌ಪಾಟೀಲ್, ಗಂಗಮ್ಮ ವೀರಭದ್ರಪ್ಪಣ್ಣ ಕುರಕುಂದಿ, ನಾಗಭೂಷಣ ನವಲಿ, ತಿಮ್ಮನಗೌಡ ಚಿಲ್ಕರಾಗಿ, ಶರಣಪ್ಪ ರ್‍ಯಾವಣಕಿ, ರುದ್ರಪ್ಪ ಮರಕಟ್, ಸಾವಿತ್ರೆಮ್ಮ ಆವಾರಿ, ಬಾಲಪ್ಪ ಕರುವಿನ, ಕರೇಗೌಡ ಕುರಕುಂದ, ಬಸವರಾಜಪ್ಪ ಇಂಗಳದಾಳ, ಶಂಕರ ಶಿಡ್ಲಭಾವಿ, ಅಮರೇಶಪ್ಪ ಬಳ್ಳಾರಿ, ಬಸವರಾಜ ಹೂಗಾರ, ದೇವಪ್ಪ ಕೋಳೂರು, ನಾಗನಗೌಡ ಜಾಲಿಹಾಳ, ಷಣ್ಮುಖಪ್ಪ ಬಳ್ಳಾರಿ, ಪಾಲಾಕ್ಷಪ್ಪ ಹುಣಸಿಹಾಳ, ಅಯ್ಯನಗೌಡ ಕೆಂಚಮ್ಮನವರ್, ವೀರಣ್ಣ ಹುಬ್ಬಳ್ಳಿ, ಅಯ್ಯಪ್ಪ ಗುಳೇದ, ಶರಣಪ್ಪ ನಿಲೋಗಲ್, ರಾಚಪ್ಪ ಹುರಳಿ ಮತ್ತಿತರರು ಇದ್ದರು.