ಸಾರಾಂಶ
ಬಾಗಲಕೋಟೆ: ದಿನ ಪತ್ರಿಕೆ ಓದುವ ಮೂಲಕ ಪ್ರಶಿಕ್ಷಣಾರ್ಥಿಗಳು ಸುದ್ದಿ ಬರೆಯುವ ಕೌಶಲ ಅಳವಡಿಸಿಕೊಳ್ಳಬೇಕು ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಈರಯ್ಯ ಚಿಕ್ಕಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದಿನ ಪತ್ರಿಕೆ ಓದುವ ಮೂಲಕ ಪ್ರಶಿಕ್ಷಣಾರ್ಥಿಗಳು ಸುದ್ದಿ ಬರೆಯುವ ಕೌಶಲ ಅಳವಡಿಸಿಕೊಳ್ಳಬೇಕು ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಈರಯ್ಯ ಚಿಕ್ಕಮಠ ಹೇಳಿದರು.ನಗರದ ಬವಿವಿ ಸಂಘದ ಶಿಕ್ಷಣ ಮಾಹಾವಿದ್ಯಾಲಯದಲ್ಲಿ ನಡೆದ ಪತ್ರಿಕೆಗೆ ಸುದ್ದಿ ಬರೆಯುವುದು ಹೇಗೆ ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸುದ್ದಿ ಎಂದರೇನು? ಸುದ್ದಿಯ ಪ್ರಕಾರಗಳು? ಸುದ್ದಿಯಲ್ಲಿ ಏನಿರಬೇಕು? ತೆಲೆ ಬರಹ ಹೇಗೆ ಬರೇಯಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ದಿನ ಪತ್ರಿಕೆಗಳನ್ನು ಓದುವುದರಿಂದ ಸಮಾಜದಲ್ಲಿ ಅನೇಕ ವಿಷಯಗಳ ಮಾಹಿತಿ ಜ್ಞಾನ ಪಡೆಯಿರಿ ಎಂದು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ರಾಜೇಶ್ವರಿ ತೆಗ್ಗಿ ಮಾತನಾಡಿ, ವಿಶೇಷವಾಗಿ ಪ್ರಶಿಕ್ಷಣಾರ್ಥಿಗಳು ಮುಂದೆ ಶಿಕ್ಷಕರಾಗುವುದರಿಂದ ಪ್ರಸ್ತುತ ದಿನಗಳ ಬಗ್ಗೆ ಸುದ್ದಿ ಬರೆಯುವ ಕೌಶಲ ಪ್ರಾರಂಭಿಸಿರಿ. ವಿದ್ಯಾರ್ಥಿಗಳಿಗೆ ಪತ್ರಿಕಾರಂಗದ ಹಾಗೂ ಪತ್ರಿಕೆಯಲ್ಲಿ ಸುದ್ದಿ ಬರೆಯವುದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಹೆಮ್ಮೆ ತಂದಿದೆ ಎಂದರು.ಪುಷ್ಪಾ ಪ್ಯಾಟಿಶೆಟ್ಟರ ಮತ್ತು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರೆ, ಸಹಪ್ರಾಧ್ಯಾಪಕ ಡಾ.ರಮೇಶ ಯಾನಮಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹಪ್ರಾಧ್ಯಾಪಕ ಡಾ.ಸಿದ್ದಪ್ಪ ಭೂಮಣ್ಣನವರ ವಂದಿಸಿದರು. ಕಾರ್ಯಾಗಾರದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಎಲ್ಲ ಪ್ರಶಿಕ್ಷಣಾರ್ಥಿಗಳು ಮತ್ತು ಬೋದಕ ಸಿಂಬಂಧಿ ಭಾಗವಹಿಸಿದ್ದರು.