ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಬೆಳ್ಳಿ ಸಲಹೆ

| Published : Feb 18 2024, 01:34 AM IST

ಸಾರಾಂಶ

ರೈತರು ಹೆಚ್ಚಿನ ಲಾಭ ಪಡೆಯಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಸಲಹೆ ನೀಡಿದರು. ಇಂಡಿ ತಾಲೂಕಿನ ಇಂಗಳಗಿ, ಸಾಲೋಟಗಿ, ನಾದ ಕೆ.ಡಿ, ಶಿರಶ್ಯಾಡ ಮತ್ತು ಸಂಗೋಗಿ ಗ್ರಾಮದ ವಿವಿಧ ಕಡೆಗಳಲ್ಲಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು.

ವಿಜಯಪುರ

ರೈತರು ಹೆಚ್ಚಿನ ಲಾಭ ಪಡೆಯಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಸಲಹೆ ನೀಡಿದರು. ಇಂಡಿ ತಾಲೂಕಿನ ಇಂಗಳಗಿ, ಸಾಲೋಟಗಿ, ನಾದ ಕೆ.ಡಿ, ಶಿರಶ್ಯಾಡ ಮತ್ತು ಸಂಗೋಗಿ ಗ್ರಾಮದ ವಿವಿಧ ಕಡೆಗಳಲ್ಲಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು. ರೈತರು ಇಂದಿನ ನೀರಿನ ಅಭಾವ ಪರಿಸ್ಥಿತಿಯಲ್ಲಿ ತಮ್ಮ ಬೆಳೆಗೆ ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ ಮತ್ತು ಸುಲಭ ಬೆಲೆಗೆ ದೊರಕುವ ಜೈವಿಕ ಗೊಬ್ಬರ ಬಳಸಬೇಕು. ಎರಡು ಸಾಲುಗಳ ಮಧ್ಯದಲ್ಲಿ ಹಸಿರೆಲೆಗೊಬ್ಬರ ಗಿಡಗಳಾದ ಸೆಣಬು, ಡೈಯಂಚಾ ಬೆಳೆದು ಮುಗ್ಗು ಹೊಡೆಯಬೇಕು ಎಂದರು. ಅಲ್ಲದೇ, ಬೆಳೆಗಳಿಗೆ ಗೋಕೃಪಾಮೃತ ಜಲ, ಜೀವಾಮೃತ, ಪಂಚಗವ್ಯ, ಬ್ರಹ್ಮಾಸ್ತ್ರದಂತಹ ಪ್ರಚೋದಕಗಳನ್ನು ಸಿಂಪಡಿಸಬೇಕು. ಬಿಸಿಲು ಹೆಚ್ಚಾಗಿದ್ದರಿಂದ ಬೆಳೆಗಳಿಗೆ ಕೃಷಿ ತ್ಯಾಜ್ಯ ಹೊದಿಕೆ ಮಾಡಬೇಕು. ಸಾವಯವದಿಂದ ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿರುವದರಿಂದ ಸಾವಯವ ದೃಢೀಕರಣ ಮಾಡಿಸಬೇಕು ಎಂದರು.

ಈ ವೇಳೆ ಪ್ರಗತಿಪರ ರೈತರಾದ ಶಿವಾನಂದ ಕುಂಬಾರ, ಎಸ್.ಟಿ.ಪಾಟೀಲ, ಸಿದ್ದಪ್ಪ ಬೂಸಗೊಂಡ, ಶಿವಾನಂದ ಹುಗ್ಗಿ, ಚಂದ್ರಶೇಖರ ಪಾಸೋಡಿ, ಅನಿಲಕುಮಾರ, ಎಸ್.ಪಿ.ಬಿಸನಾಳ ಸೇರಿದಂತೆ ರೈತರು ಇದ್ದರು.