ಕನಕದಾಸರ ಆದರ್ಶ ಅಳವಡಿಸಿಕೊಳ್ಳಿ: ದೊಡ್ಡನಗೌಡ ಪಾಟೀಲ

| Published : Nov 19 2024, 12:45 AM IST

ಸಾರಾಂಶ

Adopt the ideal of Kanakadasa

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ 537ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯೊಂದಿಗೆ ಸಹೋದರತ್ವ ಭಾವನೆಯೊಂದಿಗೆ ಬಾಳಬೇಕು. ಅಂದಾಗ ನಮ್ಮ ಬದುಕು ಸಾರ್ಥಕತೆ ಕಾಣುತ್ತದೆ ಎಂದರು.

ಉಪನ್ಯಾಸಕ ರಮೇಶಬಾಬು ಯಾಳಗಿ ಉಪನ್ಯಾಸ ನೀಡಿ, ಕನಕದಾಸರ ಜಯಂತಿಯು ಒಂದು ದಿನದ ಉತ್ಸವವಾಗದೆ ಕನಕದಾಸರ ತತ್ವಗಳ ನಿತ್ಯೋತ್ಸವವಾಗಬೇಕು. ಕನಕದಾಸರು ಮನುಕುಲದ ದಾರಿ ದೀಪವಾಗಿದ್ದಾರೆ. ವೈಚಾರಿಕತೆಯ ಬಹುದೊಡ್ಡ ಜ್ವಾಲೆ ಕನಕದಾಸರಾಗಿದ್ದು, ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ ಅಶೋಕ ಶಿಗ್ಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು ಐದು ನೂರು ವರ್ಷಗಳ ಹಿಂದೆ ಜಾತಿ ವ್ಯವಸ್ಥೆಯನ್ನು ಕಿತ್ತು ಎಸೆದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.

ದೇವೇಂದ್ರಪ್ಪ ಬಳೂಟಗಿ ಮಾತನಾಡಿದರು. ಬಾದೀಮನಾಳ ಕನಕಗುರು ಪೀಠದ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಸಡಗರದ ಮೆರವಣಿಗೆ:

ಕನಕದಾಸರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಸಂಭ್ರಮದಿಂದ ಜರುಗಿತು. ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಗೊಂಡಿತು. ಮಾರುತಿ ವೃತ್ತ, ಬಸವೇಶ್ವರ ವೃತ್ತ, ಪುರಸಭೆಯ ಮುಂಭಾಗದ ಮಾರ್ಗದಿಂದ ಹಳೆಯ ಬಜಾರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ತಾಲೂಕು ಕ್ರೀಡಾಂಗಣದವರೆಗೂ ಮೆರವಣಿಗೆ ನಡೆಯಿತು.

ಈ ಸಂದರ್ಭ ಸಮಾಜದ ಗುರುಗಳಾದ ತೇಜಯ್ಯ ಗುರುವಿನ, ಶರಣಯ್ಯ ಗುರುವಿನ, ಶಿವಾನಂದಯ್ಯ ಗುರುವಿನ, ಗ್ಯಾನಪ್ಪಯ್ಯ ಗುರುಗಳು, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ, ದೊಡ್ಡಬಸವನಗೌಡ ಬಯ್ಯಾಪುರ, ಪ್ರಭಾಕರ ಚಿಣಿ, ಕೆ. ಮಹೇಶ, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೆದ, ನಾಗರಾಜ ಮೇಲಿನಮನಿ, ಸಂಗನಗೌಡ ಪಾಟೀಲ, ಫಕೀರಪ್ಪ ಚಳಗೇರಿ, ಹನುಮಂತಪ್ಪ ಹೂಗಾರ, ಗುರಪ್ಪ ಕುರಿ, ಸತೀಶ ಲುಕ್ಕ, ಹೊಳಿಯಪ್ಪ ಕುರಿ, ರಾಜು ಗಂಗನಾಳ, ಕಂದಕೂರಪ್ಪ ವಾಲ್ಮೀಕಿ, ಲಕ್ಷ್ಮವ್ವ ಟಕ್ಕಳಕಿ, ಸಿಡಿಪಿಒ ಯಲ್ಲಮ್ಮ ಹಂಡಿ, ದೈಹಿಕ ಪರೀವಿಕ್ಷಕಿ ಸರಸ್ವತಿ ಬಿ., ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಮೇಣೆದಾಳ, ಶೈಲಜಾ ಬಾಗಲಿ, ರಮೇಶ ಗಿರಣಿ, ಸತ್ಯಪ್ಪ ರಾಜುರು, ಪ್ರಕಾಶ ಬೆದವಟಿಗಿ, ಡಾ. ಎಸ್.ವಿ. ಡಾಣಿ, ಸೋಮನಗೌಡ ಪಾಟೀಲ, ಚಂದಪ್ಪ ಗುಡಿಮನಿ, ಸುರೇಶ ಗೋಕಾಕ ಸೇರಿದಂತೆ ಅನೇಕರು ಇದ್ದರು.

18ಕೆಎಸಟಿ2.1: ಕುಷ್ಟಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಚಾಲನೆ ನೀಡಿದರು.