ಶಂಕರಾಚಾರ್ಯರ ಆದರ್ಶಮಯ ತತ್ವ ಅಳವಡಿಸಿಕೊಳ್ಳಿ: ಶಾಸಕ ವೈದ್ಯ

| Published : May 22 2024, 12:47 AM IST

ಸಾರಾಂಶ

ಸವದತ್ತಿ ಪಟ್ಟಣದ ಪದಕಿ ಪುರಂ ಬಡಾವಣೆಯಲ್ಲಿರುವ ಶಂಕರ ಮಠದಲ್ಲಿ ಅಖಿಲ ಬ್ರಾಹ್ಮಣ ಸಮಾಜ ಮತ್ತು ಶಂಕರಾಚಾರ್ಯರ ಜಯಂತಿ ಉತ್ಸವ ಸಮಿತಿ ವತಿಯಿಂದ ಜಗದ್ಗುರು ಶಂಕರಾಚಾರ್ಯರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಶಂಕರಾಚಾರ್ಯರು ಸಮಾಜಕ್ಕಾಗಿ ಕೊಡಮಾಡಿದ ಆದರ್ಶಮಯ ತತ್ವಗಳನ್ನು ನಾವು ನಿತ್ಯ ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಪದಕಿ ಪುರಂ ಬಡಾವಣೆಯಲ್ಲಿರುವ ಶಂಕರ ಮಠದಲ್ಲಿ ಅಖಿಲ ಬ್ರಾಹ್ಮಣ ಸಮಾಜ ಮತ್ತು ಶಂಕರಾಚಾರ್ಯರ ಜಯಂತಿ ಉತ್ಸವ ಸಮಿತಿ ವತಿಯಿಂದ ಜಗದ್ಗುರು ಶಂಕರಾಚಾರ್ಯರ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳು ವಿವೇಕ ಕುಲಕರ್ಣಿ, ಪ್ರತಿಕ್ಷಾ ಪಾಟೀಲ, ಸ್ಪಂದನಾ ಪಾಟೀಲರನ್ನು ಬ್ರಾಹ್ಮಣ ಸಮಾಜದ ವತಿಯಿಂದ ಶಾಸಕ ವಿಶ್ವಾಸ ವೈದ್ಯ ಸನ್ಮಾನಿಸಿ, ಗೌರವಿಸಿದರು. ಗೊರವನಕೊಳ್ಳದ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಆರ್.ಕುಲಕರ್ಣಿ, ಟಿಎಚ್‌ಒ ಡಾ.ಶ್ರೀಪಾದ್ ಸಬನೀಸ, ಬ್ರಾಹ್ಮಣ ಸಮಾಜದ ಮಹಿಳಾ ಮುಖಂಡರಾದ ಪಲ್ಲವಿ ಪಾಟೀಲಪದಕಿ, ಗಿರೀಶ ಮುನವಳ್ಳಿ, ವೇಣುಗೋಪಾಲ ಹಾಗೂ ಪಟ್ಟಣದ ಬ್ರಾಹ್ಮಣ ಸಮಾಜದ ಎಲ್ಲ ಮುಖಂಡರು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ರಾಮಚಂದ್ರ ಜೋಶಿ ನಿರೂಪಿಸಿ, ವಂದಿಸಿದರು.

21ಎಸ್‌ಡಿಟಿ1ಸವದತ್ತಿಯ ಅಖಿಲ ಬ್ರಾಹ್ಮಣ ಸಮಾಜದ ವತಿಯಿಂದ ಹಮ್ಮಿಕೊಂಡ ಜಗದ್ಗುರು ಶಂಕರಾಚಾರ್ಯರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.