ಮಹಾತ್ಮರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಗುರಿಕಾರ

| Published : Oct 03 2024, 01:24 AM IST

ಸಾರಾಂಶ

ಚಿತ್ತಾಪುರ ಪುರಸಭೆ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ರವರ ಜಯಂತಿಯಲ್ಲಿ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿರವರ ಆದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಸರಳತೆಯ ಮಾಜಿ ಪ್ರಧಾನಿ ಶಾಸ್ರೀ ಅವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ತತ್ವ ಮುಂದಿಟ್ಟುಕೊಂಡು ಹೋರಾಡಿದ ಗಾಂಧೀಜಿರನ್ನು ಭಾರತೀಯರಾದ ನಾವೆಲ್ಲರು ಮರೆಯುವಂತಿಲ್ಲಾ. ಅದೇ ರೀತಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮೂಲಕ ರೈತರ ಹಾಗೂ ಸೈನಿಕರ ಶಕ್ತಿ ಜಗತ್ತಿಗೆ ಸಾರಿ ದೇಶಕ್ಕೆ ಸರಳತೆ ಮಂತ್ರ ಬೋಧಿಸಿದ ಧೀಮಂತ ವ್ಯಕ್ತಿತ್ವದ ಸರಳ ಸಜ್ಜನಿಕೆ ರಾಜಕಾರಣಿ ಶಾಸ್ತ್ರಿ ರವರ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲಾ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಕ್ತಾರ ಅಹ್ಮದ ಪಟೇಲ್, ನಾಗರೆಡ್ಡಿ ಗೊಪಸೇನ್, ಸಪ್ನಾ ಪಾಟೀಲ್, ಶರಣಪ್ಪ ನಾಟೀಕಾರ, ಜಗದೀಶ ಚವ್ವಾಣ, ಈರಪ್ಪ ಬೊವಿ, ಜಾಫರ್ ಪಟೇಲ್, ರಾಮಲಿಂಗ ಬಾನರ್, ಭೀಮು ಹೊತಿನಮಡಿ, ಲಕ್ಷ್ಮಿಕಾಂತ ಸಾಲಿಮ, ರವಿ ಗೊಬ್ಬೂರ, ಶರಣಪ್ಪ ಕೊರವಾರ ಇತರರು ಇದ್ದರು.