ಜೀವನದಲ್ಲಿ ಶರಣರ ಕಾಯಕ ತತ್ವ ಅಳವಡಿಸಿಕೊಳ್ಳಿ: ಶಿವಾನಂದ ಭಸ್ಮೆ ಮಹಾರಾಜರು

| Published : Nov 08 2025, 03:00 AM IST

ಜೀವನದಲ್ಲಿ ಶರಣರ ಕಾಯಕ ತತ್ವ ಅಳವಡಿಸಿಕೊಳ್ಳಿ: ಶಿವಾನಂದ ಭಸ್ಮೆ ಮಹಾರಾಜರು
Share this Article
  • FB
  • TW
  • Linkdin
  • Email

ಸಾರಾಂಶ

ಬನಹಟ್ಟಿ ನಗರದಲ್ಲಿ ಮೇದಾರ ಕೇತೇಶ್ವರ ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡ ಶಿವಶರಣ ಮೇದಾರ ಕೇತೇಶ್ವರ ೮೯೫ನೇ ಜಯಂತ್ಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಶರಣರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಕುಲಕಸುಬಿನ ಮಹತ್ವ ಅರಿತುಕೊಳ್ಳಿ, ಅದರ ಬಗ್ಗೆ ಕೀಳರಿಮೆ ಬೇಡ, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಶಿಕ್ಷಣದ ಜೊತೆ ಕುಲದ ಕಲೆಯನ್ನು ಮರೆಯಬಾರದು ಎಂದು ರಾಮಪುರದ ಶಿವಾನಂದ ಭಸ್ಮೆ ಮಹಾರಾಜರು ಹೇಳಿದರು.

ಬನಹಟ್ಟಿ ನಗರದಲ್ಲಿ ಮೇದಾರ ಕೇತೇಶ್ವರ ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡ ಶಿವಶರಣ ಮೇದಾರ ಕೇತೇಶ್ವರ ೮೯೫ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೇದಾರ ಕೇತೇಶ್ವರರು ಬಸವಾದಿ ಪ್ರಮಥರ ಅನುಯಾಯಿ. ಕಾಯಕವೇ ಕೈಲಾಸ ಎಂದು ತಿಳಿದು ಬದುಕಿದವರು. ಅವರ ಆದರ್ಶ ನಮಗೆ ದಾರಿ ದೀಪವಾಗಬೇಕು. ವರ್ಷಕ್ಕೆ ಒಮ್ಮೆ ಕಾರ್ಯಕ್ರಮ ಮಾಡುವುದರ ಬದಲು ಪೂರ್ತಿ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಿ. ಕಾಯಕ ಜಾತಿ ಸೂಚಕವಲ್ಲ ಎಂದು ಅಭಿಪ್ರಾಯಪಟ್ಟರು.

ಶರಣ ಈರಣ್ಣ ಶಿರಹಟ್ಟಿ ಮಾತನಾಡಿ, ವಕೀಲರಾದ ರವಿ ಕಾಮಗೊಂಡ ಮಾತನಾಡಿದರು. ಸಮಾರಂಭದಲ್ಲಿ ಸಂಗನಗೌಡ ಪಾಟೀಲ, ಮಹೇಶ ಬಂಡಿಗಣಿ, ಪ್ರಕಾಶ ಬುರುಡ, ದುಂಡಪ್ಪ ಬುರುಡ, ರಾಜು ಬುರುಡ, ಅನೀಲ ಬುರುಡ, ಮುತ್ತು ಬುರುಡ, ಸಾಗರ ಬುರುಡ, ಬಸವಾರಾಜ ಬೈಯಾರ, ಮಲ್ಲಪ್ಪ ಬುರುಡ, ಶಿವು ಬುರುಡ, ಲಕ್ಷö್ಮಣ ಬುರುಡ, ಕರೆಪ್ಪ ಬುರುಡ, ದಶರಥ ಬುರುಡ, ಪರಸಪ್ಪ ಬುರುಡ, ಶಂಕರ ಬುರುಡ, ಸಾಗರ ಬುರುಡ, ಅವಿನಾಶ ಬುರುಡ, ಹನಮಂತ ಬುರುಡ, ಕಾಡಪ್ಪ ಬುರುಡ, ಮಂಜುನಾಥ ಬುರುಡ, ಗೋಪಾಲ ಬುರುಡ ಸೇರಿದಂತೆ ಅನೇಕರು ಇದ್ದರು.