ಸಾರಾಂಶ
ಸ್ವಯಂ ಪರಿವರ್ತನೆ ಮೂಲಕ ಮನುಷ್ಯ ತನ್ನಲ್ಲಿರುವ ದುರ್ಬುದ್ಧಿಗಳನ್ನು ಸಂಹಾರ ಮಾಡಿ, ಜೀವನದಲ್ಲಿ ಸದ್ಗುಣ ಅಳವಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಹನುಮಸಾಗರ
ಸ್ವಯಂ ಪರಿವರ್ತನೆ ಮೂಲಕ ಮನುಷ್ಯ ತನ್ನಲ್ಲಿರುವ ದುರ್ಬುದ್ಧಿಗಳನ್ನು ಸಂಹಾರ ಮಾಡಿ, ಜೀವನದಲ್ಲಿ ಸದ್ಗುಣ ಅಳವಡಿಸಿಕೊಳ್ಳಬೇಕು ಎಂದು ಪುರಾಣಿಕ ವಸಂತಕುಮಾರ ಸಿನ್ನೂರ ಹೇಳಿದರು.ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪುರಾಣ ಮಹಾಮಂಗಳಾರತಿ ಹಾಗೂ ಮುತ್ತೈದೆಯರ ಉಡಿ ತುಂಬುವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನು ತನ್ನಲ್ಲಿರುವ ದುರ್ಬುದ್ಧಿಗಳಾದ ಮದ, ಮತ್ಸರ, ಮೋಹ, ಕಾಮ, ಆಸೆಗಳನ್ನು ಬಿಟ್ಟು, ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ವಿಚಾರವಂತರಾಗಿ ಬಾಳಬೇಕು. ಪ್ರತಿಯೊಬ್ಬರಲ್ಲಿ ಇರುವ ದುಶ್ಚಟಗಳನ್ನು ತಾಯಿ ಬನಶಂಕರಿ ದೇವಿ ನಿರ್ಮೂಲನೆ ಮಾಡಲಿ ಎಂದರು.ನಂತರ ದೇವಿ ಪುರಾಣ ಮುಕ್ತಾಯಗೊಳಿಸಿದರು. ನವರಾತ್ರಿ ನಿಮಿತ್ತ ಮೆದಿಕೇರಿ ಆರ್ಟ್ ಗ್ಯಾಲರಿ ಕಲಾವಿದ ಏಕನಾಥ ಮೇದಿಕೇರಿ ಶ್ರೀ ಬನಶಂಕರಿ ದೇವಿಯ ವಿವಿಧ ಅವತಾರಗಳ ಕಲಾಕೃತಿಗಳಿಗೆ ಬಣ್ಣ ಹಚ್ಚಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು. ಇದೇ ಸಂದರ್ಭ ಮಹಿಳೆಯರು ಲಲಿತ ಸಹಸ್ರ ನಾಮ ಹಾಗೂ ಚೌಡೇಶ್ವರಿ ನಾಮಾವಳಿ ಪಠಣ ಮಾಡಿದರು.
ದೇವಾಂಗ ಸಮುದಾಯದ ಸ್ಥಳೀಯ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಉಪಾಧ್ಯಕ್ಷ ಸುರೇಶ ಸಿನ್ನೂರ, ಮುಖಂಡರಾದ ಶಂಕ್ರಪ್ಪ ಸಪ್ಪಂಡಿ, ವೀರಪ್ಪ ಸಿನ್ನೂರ, ರಾಮನಗೌಡ ಕಡೆಮನಿ, ಹನುಮಂತಗೌಡ ಸಿನ್ನೂರ, ಅಶೋಕ ಸಿನ್ನೂರ, ಅರ್ಚಕರಾದ ರಾಘವೇಂದ್ರ ಸಿನ್ನೂರ, ಮಹೇಶ ಹುಲಮನಿ, ಬಸವರಾಜ ಸಿನ್ನೂರ, ಅನಿಲ ಸಿನ್ನೂರ, ಶಂಕರ ಹುಲಮನಿ, ವಿಶಾಲ ಸಿನ್ನೂರ, ರಾಘವೇಂದ್ರ ಹುಲಮನಿ, ರಾಜು ಹುಲಮನಿ, ನಾಗೇಶ ಚಾವುಂಡಿ ಇತರರಿದ್ದರು.