ಬಾಳೆಹೊನ್ನೂರುಬಹುವಾರ್ಷಿಕ ಬೆಳೆಯಾದ ಕಾಫಿ ಬೆಳೆಯಲು ರೈತರು ಎಲ್ಲಾ ರೀತಿಯ ಪುರಾತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಎಸ್.ಎಂ.ಸೆಹಗಲ್ ಫೌಂಡೇಶನ್‌ನ ಸಿಬ್ಬಂದಿ ಶಿವಾನಂದ್ ಹೇಳಿದರು.

ಕಾಫಿ ಬೆಳೆಯ ಕೊಯ್ಲೋತ್ತರ ನಿರ್ವಹಣೆ ಮಾಹಿತಿ, ಪ್ರಾತ್ಯಕ್ಷತೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಹುವಾರ್ಷಿಕ ಬೆಳೆಯಾದ ಕಾಫಿ ಬೆಳೆಯಲು ರೈತರು ಎಲ್ಲಾ ರೀತಿಯ ಪುರಾತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಎಸ್.ಎಂ.ಸೆಹಗಲ್ ಫೌಂಡೇಶನ್‌ನ ಸಿಬ್ಬಂದಿ ಶಿವಾನಂದ್ ಹೇಳಿದರು.

ಅಳೆಹಳ್ಳಿ ಗ್ರಾಮದ ಹೆಗಲುವಾನಿಯಲ್ಲಿ ಎಸ್.ಎಂ.ಸೆಹಗಲ್ ಫೌಂಡೇಶನ್ ನಿಂದ ನಡೆದ ಕಾಫಿ ಬೆಳೆಯ ಕೊಯ್ಲೋತ್ತರ ನಿರ್ವಹಣೆ ಮಾಹಿತಿ, ಕಾಫಿ ಕಸಿ, ಜೀವಾಮೃತ ತಯಾರಿಕೆ, ತೊಟ್ಟಿಲು ಗುಂಡಿ ರಚಿಸುವ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಫಿ ಬೆಳೆಯಲ್ಲಿ ತೊಟ್ಟಿಲು ಗುಂಡಿ ನಿರ್ಮಾಣ ಅವಶ್ಯಕವಾಗಿದ್ದು ಇದು ಕಾಫಿ ತೋಟದ ತೇವಾಂಶವನ್ನು ಸಮರ್ಪಕವಾಗಿ ಕಾಪಾಡಿಕೊಳ್ಳುತ್ತದೆ. ಬೇರುಗಳಿಗೆ ಉತ್ತಮ ಗಾಳಿ, ಆಹಾರ ಒದಗಿಸಲು ಸಹಕಾರಿ ಯಾಗುತ್ತದೆ.

ಹವಾಮಾನ ವೈಪರೀತ್ಯದಿಂದ ಅತಿಯಾದ ಮಳೆಯಾದ ಸಂದರ್ಭದಲ್ಲಿ ಮಣ್ಣಿನ ಫಲವತ್ತತೆ ಕೊಚ್ಚಿ ಹೋಗಲು ಬಿಡುವುದಿಲ್ಲ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಇಳಿಜಾರು ಮತ್ತು ಒಣ ಪ್ರದೇಶಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತೊಟ್ಟಿಲು ಗುಂಡಿಗಳನ್ನು ನಿರ್ಮಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಜೆರಾಲ್ಡ್ ಮಾತನಾಡಿ, ಕಾಫಿ ಗಿಡದ ನಿರ್ವಹಣೆ ಉತ್ತಮವಾಗಿದ್ದಲಿ ಶೇ.30ರಿಂದ 40 ಉತ್ತಮ ಇಳುವರಿ ಪಡೆಯಬಹುದು. ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ಪಡೆದಿರಬೇಕಿದ್ದು, ಯೂರಿಯಾ ಗೊಬ್ಬರದ ಬಳಕೆ ಕಡಿಮೆ ಮಾಡಿ ಇದರ ಬದಲಿಗೆ ನ್ಯಾನೋ ಯೂರಿಯಾ, ಕಾಂಪೋಸ್ಟ್ ಗೊಬ್ಬರ, ಹಸಿರೆಲೆ ಗೊಬ್ಬರ, ಜೀವಾಮೃತ ಬಳಸಬೇಕು ಎಂದು ಸಲಹೆ ನೀಡಿದರು.

ಕೃಷಿಕರಾದ ನಾಗಪ್ಪಗೌಡ, ರಾಜೇಶ್, ಕೌಸಲ್ಯಾ, ಚೈತ್ರ, ಸುಹಾಸ್, ಶರತ್ ಮತ್ತಿತರರು ಹಾಜರಿದ್ದರು.೨೦ಬಿಹೆಚ್‌ಆರ್ ೩:

ಬಾಳೆಹೊನ್ನೂರು ಸಮೀಪದ ಅಳೆಹಳ್ಳಿ ಗ್ರಾಮದ ಹೆಗಲುವಾನಿಯಲ್ಲಿ ಎಸ್.ಎಂ.ಸೆಹಗಲ್ ಫೌಂಡೇಶನ್ ವತಿಯಿಂದ ಕಾಫಿ ಬೆಳೆಗಾರರಿಗೆ ತೊಟ್ಟಿಲುಗುಂಡಿ ನಿರ್ಮಾಣದ ಪ್ರಾತ್ಯಕ್ಷಿಕೆ ನೀಡಲಾಯಿತು.