ಬಕ್ರೀದ್ ಸ್ಮರಣೆಗಾಗಿ ತ್ಯಾಗ, ಧರ್ಮದ ಮನೋಭಾವನೆ ರೂಢಿಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ, ಸೌಹಾರ್ದತೆಯಿಂದ ಸಹಬಾಳ್ವೆ ನಡೆಸಿ ಸಮಾಜದಲ್ಲಿ ಸೌಹಾರ್ದತೆ ವಾತಾವರಣ ನಿರ್ಮಿಸಬೇಕು.

ಡಂಬಳ: ಈದ್ಗಾ ಮೈದಾನದಲ್ಲಿ ತ್ಯಾಗ- ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಶ್ರದ್ಧಾ- ಭಕ್ತಿಯಿಂದ ಗುರುವಾರ ಆಚರಿಸಿದರು.

ಬೆಳಗ್ಗೆ ವಿವಿಧ ಬಡಾವಣೆಯ ಪ್ರದೇಶಗಳಿಂದ ಈದ್ಗಾ ಮೈದಾನಕ್ಕೆ ಆಗಮಿಸಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಧರ್ಮಗುರುಗಳಾದ ಖಾದರಸಾಬ ಮುಲ್ಲಾ ಧರ್ಮಗ್ರಂಥ ಪಠಿಸಿದರು. ಬಳಿಕ ಧರ್ಮ ಸಂದೇಶ ನೀಡಿದ ಅವರು, ಬಕ್ರೀದ್ ಸ್ಮರಣೆಗಾಗಿ ತ್ಯಾಗ, ಧರ್ಮದ ಮನೋಭಾವನೆ ರೂಢಿಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ, ಸೌಹಾರ್ದತೆಯಿಂದ ಸಹಬಾಳ್ವೆ ನಡೆಸಿ ಸಮಾಜದಲ್ಲಿ ಸೌಹಾರ್ದತೆ ವಾತಾವರಣ ನಿರ್ಮಿಸಬೇಕು ಎಂದರು. ವಿಶೇಷ ಪ್ರಾರ್ಥನೆ ಸಲ್ಲಿಸಿ ದೇಶದ ಮತ್ತು ರಾಜ್ಯದ ರೈತರಿಗೆ ಉತ್ತಮ ಮಳೆ ಬೆಳೆಯಾಗಿ ಉತ್ತಮ ಫಸಲು ಬರಲಿ, ಯುವಕರಲ್ಲಿ ಆತ್ಮಸ್ಥೈರ್ಯ, ಕಾರ್ಮಿಕರಿಗೆ ಉತ್ತಮ ಆರೋಗ್ಯವನ್ನು ದಯಾಪರನಾದ ಅಲ್ಲಾ ಕರುಣಿಸಲಿ ಎಂದರು.

ಪ್ರಾರ್ಥನೆಯಲ್ಲಿ ಬಶೀರಹಮ್ಮದ ತಾಂಬೋಟಿ, ಖಾಜಾಹುಸೇನ ಹೋಸಪೇಟಿ, ಹುಸೇನಸಾಬ ಹೊಸಬಾವಿ, ರಾಯಸಾಬ ಕಾಸ್ತಾರ, ಬಾಬುಸಾಬ ಮೂಲಿಮನಿ, ಮಹಮ್ಮದರಫೀಕಸಾಬ ಹೊಸಪೇಟಿ, ಜಂದಿಸಾಬ ಸರಕಾವಾಸ, ಜಾಕೀರ ಮೂಲಿಮನಿ, ಬಾಬುಸಾಬ ಸರಕಾವಾಸ, ಹುಸೇನಸಾಬ ದೊಡ್ಡಮನಿ, ಶಫೀಕ ಮೂಲಿಮನಿ, ಬುಡೇಸಾಬ ಅತ್ತಾರ, ಚಾಂದಬಾಸಾ ಸರಕಾವಾಸ, ಮುರ್ತುಜಾ ಮನಿಯಾರ, ಎಂ.ಆರ್. ಆಲೂರ, ನೂರಹಮ್ಮದ ಸರಕಾವಾಸ, ಗೌಸುಸಾಬ ತಾಂಬೋಟಿ, ರಜಾಕಸಾಬ ತಾಂಬೋಟಿ, ರಫೀಕ ಮನಿಯಾರ, ಡಿ.ಡಿ. ಸೊರಟೂರ, ಫೈರೋಜಖಾನ ಹೊಸಪೇಟಿ, ಗೌಸುಸಾಬ ಹೊಸಪೇಟಿ, ಇಂತಿಯಾಜ ದಫೇದಾರ, ಮಹಮ್ಮದಗೌಸ ಅತ್ತಾರ, ರಿಯಾಜ್ ಚಾಂದಖಾನವರ, ಅಬ್ದುಲ್ ಮಕಾಂದರ, ಪೀರಸಾಬ ಮಕಾಂದಾರ, ಮೀರಾಸಾಬ ದೊಡ್ಡಮನಿ, ಹಿರಿಯರು, ಯುವಕರು ಇದ್ದರು. ಶಾಂತಿ, ಸಹಬಾಳ್ವೆ ತಿಳಿಸುವ ಬಕ್ರೀದ್‌

ನರಗುಂದ: ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಶಾಂತಿ, ಸಹಬಾಳ್ವೆಯಿಂದ ಹೇಗೆ ಬದುಕಬೇಕೆನ್ನುವುದನ್ನು ಬಕ್ರೀದ್ ಹಬ್ಬ ತಿಳಿಸಿಕೊಡುತ್ತದೆ ಎಂದು ಶಾಹಿ ಫತ್ತೆ ಮಸೀದಿ ಇಮಾಮ ಮೌಲಾನಾ ಆಝಮ್ ಸರ್ಕಾಜಿ ತಿಳಿಸಿದರು.ಗುರುವಾರ ಪಟ್ಟಣದ ಫತೇ ಮಸೀದಿ ಈದ್ಗಾ ಪಡೌಗೊಂಡ ಕೆರೆ ದಂಡಾಪುರದಲ್ಲಿ ಬಕ್ರೀದ್ ಆಚರಿಸಿ ಮಾತನಾಡಿ, ಬಕ್ರೀದ್ ಜೀವನದಲ್ಲಿ ತ್ಯಾಗ, ಸಹನೆ, ಭಕ್ತಿ ಮತ್ತು ಅಲ್ಲಾಹನಿಗೆ ಸಮರ್ಪಣೆ ಎಂಬ ಮಹತ್ವದ ಮೌಲ್ಯಗಳನ್ನು ಇಬ್ರಾಹಿಂ(ಅಲೈಹಿಸ್ಸಲಾಂ) ಅವರ ತ್ಯಾಗದ ಸ್ಮರಣೆಯಾಗಿ ನೆನಪಿಸುತ್ತದೆ ಎಂದರು.ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಐ.ಪಿ. ಚಂದೂನವರ ಮಾತನಾಡಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಈ ಹಬ್ಬನಮ್ಮ ನಂಬಿಕೆ ಹಾಗೂ ಮಾನವೀಯತೆಯನ್ನು ಮತ್ತಷ್ಟು ಬಲಪಡಿಸುವ ದಿನವಾಗಿದೆ ಎಂದರು.ಸಾಮೂಹಿಕ ಪ್ರಾರ್ಥನೆಯಲ್ಲಿ ಜನಾಬ್ ಬಾಬುಸಾಬ್ ಇಮಾಮಸಾಬ್ ಜಮಾದಾರ, ಧರ್ಮಗುರುಗಳಾದ ಜಹೀರ್ ಅಹ್ಮದ್ ಖಾಜಿ, ಅಮ್ಜದ ಅಹ್ಮದ್ ಖಾಜಿ, ಇಮಾಮಸಾಬ್ ನದಾಫ್, ರಜಾಕ ಸಕಲಿ, ಮಹಮ್ಮದ ನಾಯ್ಕರ, ಝೆಡ್.ಎಂ. ಖಾಜಿ, ಎಂ.ಎಂ. ಖಾಜಿ, ಇಮಾಮ್ ಹುಸೇನ್ ನಾಯಕರ, ಜಮಾಲಸಾಬ ನರಗುಂದ, ಮಾಬೂಸಾಬ ಹವಾಲದಾರ್, ಮಾಬುಸಾಬ್ ಕಿಲ್ಲೇದಾರ, ಬಾಬಾಜಾನ ಮುಲ್ಲಾ, ಭಾಷೆಸಾಬ ಪಠಾಣ, ಅಲ್ಲಾಭಕ್ಷ ಸಂಶಿ, ಬಾಬಾಜಾನ ಪಠಾಣ, ಮೋದಿನಬೇಗ ಮುಲ್ಲಾ, ಅಬ್ದುಲ ಮುಲ್ಲಾ, ರೀಯಾಜ್ ನಾಲಬಂದ, ಅಹ್ಮದ ಪಠಾಣ, ಅಲ್ತಾಫ ಸಕಲಿ, ಮುಲ್ಲಾ , ಖಲಂದರ ಖಡ್ಡೇಗಾರ, ಮಾಬುಸಾಬ ಸಕಲಿ, ಮೋದಿನಸಾಬ ಬಳ್ಳೂರು, ಜಾವೇದ್ ಸಕಲಿ, ಹಜರತಅಲಿ ಮುಲ್ಲಾನವರ, ಫಕ್ರುದ್ದೀನ್ ನದಾಫ್ ಜಬೀರ್ ಸಕಲಿ ಇದ್ದರು.