ಸದೃಢ ಶಿಕ್ಷಣಕ್ಕೆ ಅಗತ್ಯ ಮಾರ್ಗ ಕಂಡುಕೊಳ್ಳಲು ಸಲಹೆ

| Published : May 18 2025, 02:02 AM IST

ಸಾರಾಂಶ

ರಾಮನಗರ: ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿನ ಪಕ್ಕದಲ್ಲಿರುವ ರಾಮನಗರ ಜಿಲ್ಲೆ ಆರ್ಥಿಕವಾಗಿ ಸದೃಢವಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದಿದೆ. ಇಲ್ಲಿನ ಮಕ್ಕಳ ಸದೃಢ ಶಿಕ್ಷಣಕ್ಕೆ ಅಗತ್ಯ ದಾರಿಗಳನ್ನು ಕಂಡುಕೊಳ್ಳಬೇಕಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದರಾವ್ ಹೇಳಿದರು.

ರಾಮನಗರ: ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿನ ಪಕ್ಕದಲ್ಲಿರುವ ರಾಮನಗರ ಜಿಲ್ಲೆ ಆರ್ಥಿಕವಾಗಿ ಸದೃಢವಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದಿದೆ. ಇಲ್ಲಿನ ಮಕ್ಕಳ ಸದೃಢ ಶಿಕ್ಷಣಕ್ಕೆ ಅಗತ್ಯ ದಾರಿಗಳನ್ನು ಕಂಡುಕೊಳ್ಳಬೇಕಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದರಾವ್ ಹೇಳಿದರು.

ನಗರದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ, ಆರ್ಥಿಕವಾಗಿ ಹಿಂದುಳಿದಿವೆ. ಆದರೆ ಶೈಕ್ಷಣಿಕವಾಗಿ ಬಲಾಢ್ಯವಾಗಿವೆ. ರಾಮನಗರ ಇದಕ್ಕೆ ವಿರುದ್ಧವಾಗಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿ ಅದರಲ್ಲೂ ನ್ಯೂಮರಸಿ ಹಾಗೂ ಲಿಟರಸಿ ಅಂದರೆ ಭಾಷೆ ಮತ್ತು ಗಣಿತ ವಿಷಯಗಳ ಬಗ್ಗೆ ಉತ್ತಮ ಜ್ಞಾನ ಇರುವುದು ಮುಖ್ಯ ಎಂದರು.

ರಾಮನಗರ ಜಿಲ್ಲೆ ಆರ್ಥಿಕ ಶೈಕ್ಷಣಿಕವಾಗಿ ಸುಧಾರಣೆ ಆಗಬಹುದಾದ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಪ್ರಗತಿಗೆ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಶಿಕ್ಷಣ ತಜ್ಞರು, ಸಾರ್ವಜನಿಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಚರ್ಚಿಸಿದರು.

ಡಾ. ಡಿ.ಎಂ.ನಂಜುಡಪ್ಪ 2002ರ ವರದಿಯನ್ವಯ ರಾಮನಗರ ಜಿಲ್ಲೆಯಲ್ಲಿ ಕನಕಪುರ ಮತ್ತು ಮಾಗಡಿ ಅತಿ ಹಿಂದುಳಿದ ತಾಲೂಕು ಹಾಗೂ ಚನ್ನಪಟ್ಟಣ ಹಿಂದುಳಿದ ತಾಲೂಕಾಗಿದೆ. ಪ್ರಸ್ತುತ ಸಹ ತಾಲೂಕುಗಳ ಸೂಚ್ಯಂಕಗಳಲ್ಲಿ ಗಮನಾರ್ಹ ಬದಲಾವಣೆ ಆಗದ ಕಾರಣ ವಾಸ್ತವ ಸ್ಥಿತಿ ಅನ್ವಯ ಅಸಮತೋಲನೆ ನಿವಾರಿಸಲು ತಳ ಮಟ್ಟದ ಸಲಹೆ ಸೂಚನೆ ಪಡೆಯಲಾಯಿತು.

ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ರೇಷ್ಮೆ ಪಶುಪಾಲನೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾಧಿಕಾರಿಗಳು ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ಸುಧಾರಿಸುವ ಸೂಚ್ಯಂಕಗಳನ್ನು ಅಭಿವೃದ್ಧಿಪಡಿಸಲು ಹಲವು ಸಲಹೆಗಳನ್ನು ನೀಡುತ್ತಾ, ಇಲಾಖಾವಾರು ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಲು ಕೋರಿದರು.

ಚೆಂಬರ್ಸ್ ಆಫ್ ಕಾಮರ್ಸ್ ಪ್ರತಿನಿಧಿಗಳು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಇರುವ ಸಮಸ್ಯೆಗಳು, ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದಂತೆ ರೀಲರ್ಸ್ ಗಳು, ಮತ್ತು ನೇಕಾರರು ರೇಷ್ಮೆ ಗೂಡಿನ ಉತ್ಪನ್ನವನ್ನು ಉತ್ಪಾದಿಸಿ, ನವೀಕರಿಸಿ ಬಟ್ಟೆ ನೇಯುವವರಗೆ ಇರುವ ಸಮಸ್ಯೆಗಳ ಕುರಿತು ಹಾಗೂ ಮಾರುಕಟ್ಟೆಯ ಅವಕಾಶದ ಕೊರತೆಯ ಕುರಿತು ಸರ್ಕಾರದ ಹಂತದಲ್ಲಿ ಪಾಲಿಸಿ ಹೊರ ತರಲು ಕೋರಿದರು.

ಅಂತಿಮವಾಗಿ ಅಧ್ಯಕ್ಷರು ಮಾತನಾಡಿ, ಇದುವರೆಗೂ ಒಟ್ಟು 21 ಜಿಲ್ಲೆಯಲ್ಲಿ ಸಂವಾದ ಸಭೆಯನ್ನು ನಡೆಸಿದ್ದು, ಅವರ ಜಿಲ್ಲೆಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ತಿಳಿಸಿದ್ದು, ರಾಮನಗರ ಜಿಲ್ಲೆಯಲ್ಲಿಯೂ ಹಲವಾರು ಹೊಸ ವಿಷಯಗಳು ತಿಳಿದು ಬಂದಿದ್ದು, ನೀತಿ ನಿರೂಪಣೆಯಲ್ಲಿ ಹಾಗೂ ಸಮಿತಿ ವರದಿಯಲ್ಲಿ ಸೇರ್ಪಡೆಗೊಳಿಸುವುದಾಗಿ ತಿಳಿಸಿ, ಸಂವಾದ ಸಭೆಯನ್ನು ಮುಕ್ತಾಯಗೊಳಿಸದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯರಾದ ಡಾ. ಸೂರ್ಯನಾರಾಯಣ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಚಿಕ್ಕ ಸುಬ್ಬಯ್ಯ, ಉಪಕಾರ್ಯದರ್ಶಿ ಧನರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಚೆಂಬರ್ಸ್ ಆಫ್ ಕಾಮರ್ಸ್ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ಸಮಾಜ ಸೇವಾಕರು, ನೋಂದಾಯಿತ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

--------------------------

15ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಆರ್ಥಿಕ ತಜ್ಞರಾದ ಪ್ರೋ. ಎಂ. ಗೋವಿಂದರಾವ್ ಮಾತನಾಡಿದರು.

------------------------