ಸಾರಾಂಶ
ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಪ್ರವಾಹದ ಮುನ್ನೆಚ್ಚರಿಕೆ ಹಿನ್ನೆಲೆ ನದಿ ದಂಡೆಯ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದು ಸುರಕ್ಷಿತವಾಗಿ ಇರಬೇಕೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.
ಕನ್ನಡಪ್ರಭ ವಾರ್ತೆ ರಾಯಬಾಗ
ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಪ್ರವಾಹದ ಮುನ್ನೆಚ್ಚರಿಕೆ ಹಿನ್ನೆಲೆ ನದಿ ದಂಡೆಯ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದು ಸುರಕ್ಷಿತವಾಗಿ ಇರಬೇಕೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.ಭಾನುವಾರ ತಾಲೂಕಿನ ಬಾವನ ಸವದತ್ತಿ, ದಿಗ್ಗೇವಾಡಿ, ಜಲಾಲಪುರ ಮತ್ತು ಭಿರಡಿ ಗ್ರಾಮಗಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿ, ಜನರಿಗೆ ಧೈರ್ಯ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ತಾಲೂಕಾಡಳಿತದೊಂದಿಗೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಮುಖಂಡರು ಕೈಜೋಡಿಸಬೇಕೆಂದರು.
ತಹಸೀಲ್ದಾರ ಸುರೇಶ ಮುಂಜೆ ಮಾತನಾಡಿ, ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುತ್ತಿರುವುದರಿಂದ ನದಿ ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ತಾಲೂಕಾಡಳಿತ ಪ್ರವಾಹಎದುರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದರು.ತಾಪಂ ಇಒ ಅರುಣ ಮಾಚಕನೂರ, ಕೃಷಿ ಅಧಿಕಾರಿ ವಿನೋದ ಮಾವರಕರ, ಪಶು ಅಧಿಕಾರಿ ಡಾ.ಎಂ.ಬಿ. ಪಾಟೀಲ, ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ರವಿ ಚೌಗುಲೆ, ಸಿಬಿಕೆಎಸ್ಎಸ್ ಕೆ ಉಪಾಧ್ಯಕ್ಷ ತಾತ್ಯಾಸಾಬ ಕಾಟೆ, ಧೂಳಗೌಡ ಪಾಟೀಲ, ಮಹಾವೀರ ಪಾಟೀಲ, ಮಹಾದೇವ ಗಂಗಾಯಿ, ಮಲ್ಲಪ್ಪ ಮೈಶಾಳೆ, ಸತ್ಯಪ್ಪ ಐನಾಪೂರೆ, ಅಪ್ಪಾಸಾಬ ಮೈಶಾಳೆ, ಗಂಗಾಧರ ಮೈಶಾಳೆ, ಪ್ರಕಾಶ ಮೀರ್ಜೆ, ಅನೀಲ ಹಂಜೆ, ಬಸವರಾಜ ಡೋಣವಾಡೆ, ಭೋಲಾ ಕಡಾಳೆ, ಸೋಮಶೇಖರ ಜೊರೆ, ನಾಗರಾಜ ಪತ್ತಾರ ಸೇರಿ ಅನೇಕರು ಇದ್ದರು.