ಅಂಚೆ ಇಲಾಖೆ ಸೇವೆ ಸದುಪಯೋಗಕ್ಕೆ ಗ್ರಾಮೀಣ ಜನರಿಗೆ ಸಲಹೆ

| Published : Aug 29 2024, 12:52 AM IST

ಸಾರಾಂಶ

Advice to rural people for efficient use of postal services

-ಅಂಚೆ ಇಲಾಖೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿದ ಜಿಲ್ಲಾ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ

------

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಹಲವು ದಶಕಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉತ್ತಮ, ಪ್ರಾಮಾಣಿಕ ಸೇವೆಯನ್ನು ನೀಡುವ ಮೂಲಕ ಅಂಚೆ ಇಲಾಖೆ ತನ್ನದೇಯಾದ ವಿಶೇಷ ಮೌಲ್ಯವನ್ನು ಕಾಪಾಡಿಕೊಂಡು ಬಂದಿದೆ. ಇತ್ತೀಚೆಗೆ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಅನೇಕ ಸೇವೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗವನ್ನು ಹೆಚ್ಚು ಪಡೆಯಬೇಕೆಂದು ಜಿಲ್ಲಾ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ ತಿಳಿಸಿದರು.

ಅವರು, ಪರಶುರಾಮಪುರ ಹೋಬಳಿಯ ಟಿ.ಎನ್.ಕೋಟೆ ಗ್ರಾಮದ ಅಂಚೆ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಅಂಚೆ ಕಚೇರಿ ಗ್ರಾಮೀಣ ಭಾಗದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಅಂಚೆ ಇಲಾಖೆ ಮೇಲೆ ಅಪಾರವಾದ ವಿಶ್ವಾಸ, ಗೌರವವಿಟ್ಟಿದ್ದಾರೆ. ಯಾವುದೇ ದುರಾಡಳಿತವನ್ನು ಅಂಚೆ ಇಲಾಖೆಯಲ್ಲಿ ಕಾಣಲು ಸಾಧ್ಯವಿಲ್ಲ. ಹಣ ಭದ್ರವಾಗಿ ಇಡುವಲ್ಲಿ ಅಂಚೆ ಇಲಾಖೆ ಯಶಸ್ವಿಯಾಗಿದೆ. ಅಂಚೆ ಇಲಾಖೆಯ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿದ್ದು, ಗ್ರಾಮೀಣ ಜನರು ಇದರ ಸದುಪಯೋಗವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯುವಂತೆ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಓಬಕ್ಕ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಂಚೆ ಇಲಾಖೆಯ ಸೇವೆ ಜನರಲ್ಲಿ ಹೊಸವಿಶ್ವಾಸವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ದಕ್ಷತೆ, ಪ್ರಾಮಾಣಿಕತೆಯನ್ನು ನಾವು ಕೇವಲ ಅಂಚೆ ಇಲಾಖೆಯಲ್ಲಿ ಕಾಣಲು ಸಾಧ್ಯ. ಯಾವುದೇ ಗ್ರಾಮೀಣ ಭಾಗದಲ್ಲಿ ಅಂಚೆ ಇಲಾಖೆಯನ್ನು ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ವರ್ಗ ಜನರಿಗೆ ಸೇವೆಯನ್ನು ನೀಡುವಲ್ಲಿ ಯಾವುದೇ ಲೋಪವೆಸಗುವುದಿಲ್ಲ. ಇದು ಅಂಚೆ ಇಲಾಖೆಯ ಅವಿರತ ಸೇವೆಯನ್ನು ತೋರಿಸುತ್ತದೆ ಎಂದರು.

ಅಂಚೆ ನಿರೀಕ್ಷಕ ಮಂಜುನಾಥ, ಸಹಾಯಕ ಅಂಚೆ ನಿರೀಕ್ಷಕ ಬಸವರಾಜು, ಪಿ.ಎಂ.ಎಸ್.ಶರೀಫ್, ತಿಪ್ಪೇರುದ್ರಪ್ಪ, ಮೇಲ್ವಿಚಾರಕ ರಾಘವೇಂದ್ರ, ಮೈಲನಹಳ್ಳಿನಾಗರಾಜ, ಬ್ರಾಂಚ್ ಪೋಸ್ಟ್‌ ಮಾಸ್ಟರ್‌ ಸಿದ್ದೇಶ್, ವಿ.ನಂದಿನಿ, ಸರಸ್ವತಿ, ನಾಗರಾಜು, ಚಿಕ್ಕಣ್ಣ, ಮುಖ್ಯ ಶಿಕ್ಷಕ ರಂಗಣ್ಣ ಮುಂತಾದವರು ಉಪಸ್ಥಿತರಿದ್ದರು.

-----

ಪೋಟೋ: ೨೭ಸಿಎಲ್‌ಕೆ೩

ಚಳ್ಳಕೆರೆ ತಾಲೂಕಿನ ಟಿ.ಎನ್.ಕೋಟೆ ಗ್ರಾಮದ ಅಂಚೆ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನವನ್ನು ಜಿಲ್ಲಾ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ ಉದ್ಘಾಟಿಸಿದರು.