ಡ್ರೋನ್ ಸೆರೆಯಾದ ಜಕ್ರಿಬೆಟ್ಟುವಿನ ಕಿಂಡಿ ಅಣೆಕಟ್ಟು ಮತ್ತು ಸೇತುವೆಯ ವಿಹಂಗಮ ದೃಶ್ಯ

| Published : Jun 26 2024, 12:33 AM IST

ಡ್ರೋನ್ ಸೆರೆಯಾದ ಜಕ್ರಿಬೆಟ್ಟುವಿನ ಕಿಂಡಿ ಅಣೆಕಟ್ಟು ಮತ್ತು ಸೇತುವೆಯ ವಿಹಂಗಮ ದೃಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ಚಾಳದ ಜಕ್ರಿಬೆಟ್ಟುವಿನಲ್ಲಿ ನಿರ್ಮಾಣವಾದ ಈ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನೇತ್ರಾವತಿಯ ಒಂದು ತೀರಾ ಬಂಟ್ವಾಳ ಹಾಗೂ ಇನ್ನೊಂದು ತೀರಾ ನರಿಕೊಂಬು ಗ್ರಾಮಕ್ಕೆ ನಡುವೆ ಕೊಂಡಿಯಾಗಲಿದೆ.

ಬಂಟ್ವಾಳ:ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಪರಿಕಲ್ಪನೆಯಂತೆ ಬಂಟ್ವಾಳದ ಜಕ್ರಿಬೆಟ್ಟು ಮತ್ತು ನರಿಕೊಂಬು ಗ್ರಾಮವನ್ನು ಸಂಪರ್ಕಿಸಲು ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ಸಣ್ಣನೀರಾವರಿ ಇಲಾಖೆ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟನ್ನು ಡ್ರೋನ್ ಮೂಲಕ ಸೆರೆಹಿಡಿದಿರುವ ವಿಹಂಗಮ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ.ಬಂಟ್ಚಾಳದ ಜಕ್ರಿಬೆಟ್ಟುವಿನಲ್ಲಿ ನಿರ್ಮಾಣವಾದ ಈ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನೇತ್ರಾವತಿಯ ಒಂದು ತೀರಾ ಬಂಟ್ವಾಳ ಹಾಗೂ ಇನ್ನೊಂದು ತೀರಾ ನರಿಕೊಂಬು ಗ್ರಾಮಕ್ಕೆ ನಡುವೆ ಕೊಂಡಿಯಾಗಲಿದೆ.

ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಗೇಟ್ ಅಳವಡಿಸಿ ಅಣೆಕಟ್ಟಿನಲ್ಲಿ ಸೋರಿಕೆಯಾಗುತ್ತಿದೆಯೇ ಹಾಗೂ ಕಾಮಗಾರಿಯ ಗುಣಮಟ್ಟವನ್ನು ಕೂಡ ಪರಿಶೀಲಿಸಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಅದರ ಹಿನ್ನೀರಿನ ಡ್ರೋನ್ ಪೋಟೋಗಳನ್ನು ಸೆರೆ ಹಿಡಿದಿದ್ದಾರೆ.ಯೋಜನೆ ಯಾವಾಗ ಉದ್ಘಾ ಟನೆಗೊಳ್ಳಲಿದೆ ಎಂಬುದು ಮಾತ್ರ ಇನ್ನು ಸ್ಪಷ್ಟವಾಗಿಲ್ಲ.

ವಿಶೇಷವಾಗಿ ಮಳೆಗಾಲದ ಪ್ರವಾಹದ ಸಂದರ್ಭ ನೀರನ್ನು ಕೆಳಕ್ಕೆ ಕಳುಹಿಸುವ ನಿಟ್ಟಿನಲ್ಲಿ ಸ್ಕವರ್ ಸ್ಫೂಯಿಸ್ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಇದು ಲಿಫ್ಟ್ ಗೇಟ್‌ಗಳಿಗಿಂತ ತೀರಾ ಕೆಳಸ್ತರದಲ್ಲಿರುತ್ತದೆ. ಹೀಗಾಗಿ ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಕೂಡ ಹೊರಕ್ಕೆ ಕಳುಹಿಸಲು ಅನುಕೂಲವಾಗಲಿದೆ.ಪೂರ್ತಿ 21 ಗೇಟ್ ಅಳವಡಿಸಿದರೆ 166 ಎಂಸಿಎಫ್‌ಟಿನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸುತ್ತದೆ ಎಂದು ಇಲಾಖೆಯ ಸಹಾಯಕ ಇಂಜುನಿಯರ್ ಶಿವಪ್ರಸನ್ನ ತಿಳಿಸಿದ್ದಾರೆ.ಬಂಟ್ವಾಳ ಜಕ್ರಿಬೆಟ್ಟಿನ ಹೆದ್ದಾರಿಯಲ್ಲಿ ಹಾದುಹೋಗುವ ಸಾರ್ವಜನಿಕರು,ವಾಹನ ಸವಾರರಿಗೆ ಈ ನೂತನ ಕಿಂಡಿಅಣೆಕಟ್ಟು ಸೇತುವೆ ಗಮನಸೆಳೆಯುತ್ತಿದೆ.