ಸಾರಾಂಶ
ನಾಪೋಕ್ಲು : ನಾಪೋಕ್ಲು ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಅಲ್ಪ ಪ್ರಮಾಣದ ಮಳೆಯಾಗಿದೆ. ಮಧ್ಯಾಹ್ನ 3.30ರ ವೇಳೆಗೆ 15 ನಿಮಿಷಗಳ ಕಾಲ ಮಳೆ ಆಯಿತು. ಪಟ್ಟಣವೂ ಸೇರಿದಂತೆ ಹಳೆ ತಾಲೂಕು, ಎಮ್ಮೆಮಾಡು ,ಬಲ್ಲಮಾವಟ್ಟಿ ,ನೆಲಜಿ ,ಕೊಳಕೇರಿ ಗ್ರಾಮೀಣ ಪ್ರದೇಶದಲ್ಲಿ ಮಳೆಯಾಗಿದೆ .
ಬಲ್ಲಮಾವಟಿ ವ್ಯಾಪ್ತಿಯಲ್ಲಿ ಬಿಸಿಲ ಧಗೆಗೆ ಕಾಫಿ ಗಿಡದಲ್ಲಿದ್ದ ಹೂಗಳು ಒಣಗಿ ಕೆಂಪಗಾಗಿದ್ದು ಕಾಫಿ ಬೆಳೆಗಾರರು ಆಂತಂಕದಲ್ಲಿ ಇದ್ದರು. ವಾರದ ಹಿಂದೆ ಬಲ್ಲಮಾವಟಿ, ಪೇರೂರು ಗ್ರಾಮ ವ್ಯಾಪ್ತಿಗಳಲ್ಲಿ ಮಳೆಯಾಗಿತ್ತು. ಇದೀಗ ಸಾಧಾರಣ ಮಳೆಯಾಗಿ ಸ್ವಲ್ಪ ಮಟ್ಟಿಗೆ ಭೂಮಿ ತಂಪವಾಯಿತು.
ಮಳೆಗೆ ವಿಶೇಷ ಪೂಜೆ, ಪ್ರಾರ್ಥನೆ:
ಸೋಮವಾರಪೇಟೆ ರಶೈವ ಸಮಾಜ ಹಾಗೂ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಪಟ್ಟಣದ ಮಹದೇಶ್ವರ ಬ್ಲಾಕ್‍ನಲ್ಲಿರುವ ಮಳೆ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಮಂಗಳವಾರ ನಡೆಯಿತು.ಪೂಜಾ ಕೈಂಕರ್ಯಗಳು ವಿರಕ್ತ ಮಠಾಧೀಶ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದವು. ಅರ್ಚಕರಾದ ಮೋಹನ್‍ಮೂರ್ತಿ ಶಾಸ್ತ್ರಿ, ವಿರೂಪಾಕ್ಷ ಪೂಜೆ ನೆರವೇರಿಸಿದರು. ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಮುಖಂಡರಾದ ಕೆ.ಎನ್. ಶಿವಕುಮಾರ್, ಕೆ.ಎನ್. ತೇಜಸ್ವಿ, ಎ.ಎಸ್. ಮಲ್ಲೇಶ್, ಎಚ್.ಎಸ್. ಯುವರಾಜ್, ಯೋಗೇಶ್ ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.02ಎಸ್‍ಪಿಟಿ04: ಮಳೆ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಮಂಗಳವಾರ ನಡೆಯಿತು.