ನೆಲಮಂಗಲ: ನೆಲಮಂಗಲ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಗಳಕುಪ್ಪೆ ಗೋವಿಂದರಾಜು ನೆಲಮಂಗಲದ ಎನ್‍ಪಿಎ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು

ನೆಲಮಂಗಲ: ನೆಲಮಂಗಲ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಗಳಕುಪ್ಪೆ ಗೋವಿಂದರಾಜು ನೆಲಮಂಗಲದ ಎನ್‍ಪಿಎ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ಎನ್‍ಪಿಎ ಅಧ್ಯಕ್ಷನಾಗುವ ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಸಮುದಾಯಕ್ಕೆ ಹಾಗೂ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿದ ನನಗೆ ಸಿಕ್ಕ ಗೌರವವಿದು. ಶಾಸಕರ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ ಎಂದರು.

ನಿಕಟಪೂರ್ವ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ಶಾಸಕರು ನನಗೆ ಕೊಟ್ಟ ಅವಕಾಶ ಸದ್ಬಳಸಿಕೊಂಡು, ಸಂಘ ಸಂಸ್ಥೆಗಳಿಗೆ ಸಿಎ ಜಾಗ ನೀಡುವ ಜತೆ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲಾಗಿದೆ. ಶಾಸಕರು ಮಾತು ಎಸ್ಟಿ ಸಮುದಾಯಕ್ಕೆ ನೀಡಿದಂತೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಸದಸ್ಯರಿಂದ ಅಧಿಕಾರ ಸ್ವೀಕಾರ: ಅಧ್ಯಕ್ಷರಾಗಿ ಅಗಳಕುಪ್ಪೆ ಕೆ.ಗೋವಿಂದರಾಜು, ಸದಸ್ಯರಾಗಿ ಭೂಸಂದ್ರ ಚಿಕ್ಕಣ್ಣಸ್ವಾಮಿ, ಗಂಗರಾಜು, ಸಿ.ಹನುಮಂತರಾಜು ಅಧಿಕಾರ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷೆ ಮಮತಗೋವಿಂದರಾಜು, ನಿಕಟಪೂರ್ವ ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಎನ್ ಪಿಎ ಮಾಜಿ ಸದಸ್ಯರಾದ ಅಂಚೆಮನೆ ಪ್ರಕಾಶ್, ಅಂಜನಮೂರ್ತಿ, ವೆಂಕಟೇಶ್, ಸದಸ್ಯ ಶಿವಕುಮಾರ್, ಎಪಿಎಂಸಿ ಮಾಜಿ ಸದಸ್ಯ ಗೋವಿಂದರಾಜು ಉಪಸ್ಥಿತರಿದ್ದರು.

ಪೋಟೋ 4 :

ನೆಲಮಂಗಲದ ಎನ್‍ಪಿಎ ಕಚೇರಿಯಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಗಳಕುಪ್ಪೆ ಗೋವಿಂದರಾಜು ಅಧಿಕಾರ ಸ್ವೀಕರಿಸಿದರು.