ಸಾರಾಂಶ
ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಇತ್ತೀಚೆಗೆ ನಡೆದಿದ್ದು, ಪ.ಜಾತಿ ಸ್ಥಾನಕ್ಕೆ 3 ಜನರು, ಪ.ಪಂಗಡಕ್ಕೆ ಇಬ್ಬರು, ಸಾಮಾನ್ಯ ಮೀಸಲು ಸ್ಥಾನಕ್ಕೆ 8 ಜನರು ಅ ವರ್ಗ ಮೀಸಲು ಸ್ಥಾನಕ್ಕೆ 3, ಬ ವರ್ಗ ಮೀಸಲು ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಇತ್ತೀಚೆಗೆ ನಡೆದಿದ್ದು,
ಪ.ಜಾತಿ ಸ್ಥಾನಕ್ಕೆ 3 ಜನರು, ಪ.ಪಂಗಡಕ್ಕೆ ಇಬ್ಬರು, ಸಾಮಾನ್ಯ ಮೀಸಲು ಸ್ಥಾನಕ್ಕೆ 8 ಜನರು ಅ ವರ್ಗ ಮೀಸಲು ಸ್ಥಾನಕ್ಕೆ 3, ಬ ವರ್ಗ ಮೀಸಲು ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯ ನಂತರ ಮತ ಏಣಿಕೆ ನಡೆದಾಗ ಮಲ್ಲಿಕಾರ್ಜುನ ಮಡ್ಡಿಮನಿ(ಪ.ಜಾ), ರಾಜಕುಮಾರ ಕೌಲಗಿ(ಪ.ಪಂ), ಅಣ್ಣಾರಾಯ ಬಿದರಕೊಟಿ, ಅಣ್ಣಾರಾಯ ಪಾಟೀಲ, ಗುರುನಾಥ ಹಾವಳಗಿ, ದೀಲಿಪ ಮರಗೂರ, ಮೋಹನ ಖಂಡೆಕರ(ಸಾಮಾನ್ಯ ವರ್ಗ ಮೀಸಲು ಸ್ಥಾನಗಳು), ಶಾಂತಪ್ಪ ಅಂದೇವಾಡಿ(ಅ ವರ್ಗ ಮೀಸಲು), ಶ್ರೀಶೈಲ ಹಾವಳಗಿ(ಬ ವರ್ಗ ಮೀಸಲು) ಸ್ಥಾನದಿಂದ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ಗೆಲುವು ಸಾಧಿಸಿದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಪರಸ್ಪರ ಬಣ್ಣ ಎರಚಿ ಸಂಭ್ರಮಾಚರಣೆ ಮಾಡಿದರು.;Resize=(128,128))
;Resize=(128,128))