ಹಳೆಯಂಗಡಿಯಲ್ಲಿ ಕೃಷಿ ಅಭಿವೃದ್ಧಿ ಕಾರ್ಯಾಗಾರ

| Published : Nov 26 2024, 12:49 AM IST

ಹಳೆಯಂಗಡಿಯಲ್ಲಿ ಕೃಷಿ ಅಭಿವೃದ್ಧಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಕಾನೂನು ನೆರವು ಕೇಂದ್ರ ಹಳೆಯಂಗಡಿ ಹಾಗೂ ವಿಜಯ ಮಾಸ್ತರ್‌ ಟ್ರಸ್ಟ್ ಹಳೆಯಂಗಡಿ ಸಹಯೋಗದಲ್ಲಿ ಹಳೆಯಂಗಡಿಯಲ್ಲಿ ವಿವಿಧ ಬಗೆಯ ಕೃಷಿ ಅಭಿವೃದ್ಧಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರ ವಾರ್ತೆ ಮೂಲ್ಕಿ

ವಿವಿಧ ತಳಿಯ ಕೃಷಿಗಳನ್ನು ರೈತರು ಪಾರಂಪರಿಕ ಕೃಷಿಯೊಡನೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿ ಮಾಡಬೇಕೆಂದು ನವರಂಗ್‌ ಡಿಜಿಟೆಕ್‌ನ ಆಡಳಿತ ಪಾಲುದಾರ ರಾಹುಲ್ ಕರ್ಕಡ ಹೇಳಿದರು.

ಭಾರತದ ಕಾನೂನು ನೆರವು ಕೇಂದ್ರ ಹಳೆಯಂಗಡಿ ಹಾಗೂ ವಿಜಯ ಮಾಸ್ತರ್‌ ಟ್ರಸ್ಟ್ ಹಳೆಯಂಗಡಿ ಸಹಯೋಗದಲ್ಲಿ ಹಳೆಯಂಗಡಿಯಲ್ಲಿ ಆಯೋಜಿಸಲಾದ ವಿವಿಧ ಬಗೆಯ ಕೃಷಿ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಭಾರತದ ಕಾನೂನು ನೆರವು ಘಟಕ ಹಳೆಯಂಗಡಿಯ ಅಧ್ಯಕ್ಷ ಡೇನಿಯಲ್ ದೇವರಾಜ್ ವಹಿಸಿದ್ದರು.

ರೈತ ತಜ್ಞ ರಾಜೇಶ್, ತೆಂಗು ಕೃಷಿ, ಅಡಕೆ ಕೃಷಿ, ಕಬ್ಬು ಕೃಷಿ ಹಾಗೂ ಸಾವಯವ ಗೊಬ್ಬರಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಸಸ್ಯ ರೋಗ ತಜ್ಞ ಡಾ.ವಿಶ್ವನಾಥ್ ಭಟ್, ಕೃಷಿ ಹಾಗೂ ವಿವಿಧ ಬಗ್ಗೆಯ ಸಸ್ಯ ರೋಗಗಳು ಹಾಗೂ ನಿವಾರಣೆ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ತಜ್ಞ ಡಾ.ಇಸ್ಮಾಯಿಲ್, ಬೆಂಡೆ, ಅಲಸಂಡೆ, ಮೆಣಸು, ತೋಟಗಾರಿಕೆ ಅಭಿವೃದ್ಧಿ ಹಾಗೂ ವಿವಿಧ ತಳಿಯ ನಾಟಿ ಮಾಡುವ ವಿಧಾನ, ಗೊಬ್ಬರದ ಪ್ರಮಾಣ, ಹೆಚ್ಚಿನ ಇಳುವರಿಯ ಬಗ್ಗೆ, ಮಾಹಿತಿ ನೀಡಿದರು. ಕೃಷಿಕರಾದ ರಿಯಾನ, ಬೇಬಿಲತಾ, ಶಿಕ್ಷಕಿ ಐರಿನ್ ಕರ್ಕಡ, ಸುಶಾಂತಿ ಚರ್ಚ್‌ ಮರ್ಕೆರಾ ಹಿಲ್‌ನ ಹಿರಿಯರಾದ ಸುಪ್ರೀತಾ ಮತ್ತಿತರರಿದ್ದರು. ಅಕ್ಬರ್ ಸ್ವಾಗತಿಸಿದರು. ಮೇರಿ ಸ್ವಪ್ನ ವಂದಿಸಿದರು. ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು.