ಸಾರಾಂಶ
ಬ್ಯಾಡಗಿ: ಪಟ್ಟಣದ ತಾಲ್ಲೂಕಾ ಕೃಷಿಕ ಸಮಾಜ ಸಭಾಂಗಣದಲ್ಲಿ ಬರುವ 2024-25ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಮತ್ತು ತಾಲ್ಲೂಕಿನ ಕೃಷಿಪರಿಕರ ಮಾರಾಟಗಾರರ ಜಾಗೃತಿಸಭೆ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕಾರ್ಯಾಗಾರ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕರು ಗಣೇಶ ಕಮ್ಮಾರ ಮಾತನಾಡಿ, ರಸಗೊಬ್ಬರಗಳನ್ನು ರೈತರಿಗೆ ಸರಿಯಾದ ಸಮಯಕ್ಕೆ ಮತ್ತು ಸರ್ಕಾರ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದೇನೆ ಮತ್ತು ಗೈರು ಹಾಜರಾದ ಮಾರಾಟಗಾರರಿಗೆ ನೋಟಿಸ್ ನೀಡುವುದಾಗಿ ಎಚ್ಚರಿಸಿದರು.ಕೃಷಿ ಪರಿಕರಗಳ ಮಾರಾಟಗಾರರು ಗುಣಮಟ್ಟದ ಎಲ್ಲಾ ತರಹದ ಬಿತ್ತನೆ ಬೀಜ, ಕೃಷಿ ಪರಿಕರ ಮಾರಾಟಗಾರರು ಪಿ.ಓ.ಎಸ್.ನಲ್ಲಿರುವ ರಸಗೊಬ್ಬರ ದಾಸ್ತಾನನ್ನು ಭೌತಿಕ ದಾಸ್ತಾನಿಗೆ ತಕ್ಕಂತೆ ನಿರ್ವಹಿಸಬೇಕು, ಟಾಪ್-20 ಯೂರಿಯಾ ಪ್ರಕರಣ ಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಸಭೆಗೆ ತಿಳಿಸಿದರು.ಎರಡು ದಿನದಲ್ಲಿ ದರಪಟ್ಟಿ ಪ್ರಕಟಿಸಿ:ಮುಂಗಾರು ಹಂಗಾಮು ಪ್ರಾರಂಭವಾಗುವ ಮೊದಲೇ ಅವಶ್ಯವಿರುವ ಡಿ.ಎ.ಪಿ, ಯೂರಿ ಯಾ ಮತ್ತು ಇತರೆ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡು ಮುಂಗಾರು ಹಂಗಾಮಿನಲ್ಲಿ ಯಾವುದೇ ರಸಗೊಬ್ಬರ ಗಳ ಕೊರತೆ ಆಗದಂತೆ ಜವಾಬ್ದಾರಿ ನಿರ್ವಹಿಸಬೇಕು ಇನ್ನೆರಡು ದಿನಗಳಲ್ಲಿ ದರಪಟ್ಟಿ ಮತ್ತು ದಾಸ್ತಾನು ವಿವರ ಪ್ರದರ್ಶಿಸ ಬೇಕು ಇದಕ್ಕೆ ತಪ್ಪಿದಲ್ಲಿ 15 ದಿನಗಳವರೆಗೆ ಲೈಸನ್ಸ್ ಅಮಾನತ್ತಿನಲ್ಲಿಡಲಾಗುತ್ತದೆ ಎಂದರು. ಕೃಷಿಕ ಸಮಾಜದ ತಾಲ್ಲೂಕಾಧ್ಯಕ್ಷ ಮಂಜುನಾಥ ಬೆನಕನಕೊಂಡ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಹಾಗೂ ತಾಲೂಕಿನ ಎಲ್ಲಾ ಮಾರಾಟಗಾರರು ಕೃಷಿ ಪರಿಕರಗಳ ದರಪಟ್ಟಿ, ದಾಸ್ತಾನು ವಿವರಗಳನ್ನು ರೈತರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು ಅದಕ್ಕೆ ನಾವು ಬದ್ಧರಾಗಿರಬೇಕು ಪರವಾನಿಗೆಗೆ ಸಂಬಂಧಿಸಿದ ನ್ಯೂನ್ಯತೆಗಳನ್ನು ಆಗಿಂದಾಗ್ಗೆ ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಮಾತನಾಡಿ, ಎಲ್ಲಾ ಕೃಷಿ ಪರಿಕರ ಮಾರಾಟಗಾರರು ತಾವು ಮಾರಾಟ ಮಾಡುವ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳ ಪಿಸಿಒ-ಫಾರ್ಮ್ & ಸರಬರಾಜು ಮೂಲ ಪ್ರಮಾಣ ಪತ್ರಗಳನ್ನು ತಮ್ಮ ಪರವಾನಗಿ ಪತ್ರದಲ್ಲಿ ನಮೂದಿಸಿಕೊಂಡು ಕಾಲೋಚಿತಗೊಳಿಸಿದ ನಂತರ ಮಾರಾಟ ಮಾಡುವುದು ಮತ್ತು ಕೃಷಿ ಪರಿಕರ ಗಳನ್ನು ಖರೀದಿಸಿದ ರೈತರಿಗೆ ಕಡ್ಡಾಯವಾಗಿ ಬಿಲ್ ನೀಡಲು ಸೂಚಿಸಿದರು. ಕೀಟನಾಶಕಗಳನ್ನು ಖರೀದಿಸಿ, ಶೇಖರಿಸುವಾಗ, ದ್ರಾವಣ ತಯಾರಿಸುವಾಗ ಸಿಂಪರಣೆ ಮಾಡುವಾಗ ಸುರಕ್ಷಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲಾ ಮಾರಾಟಗಾರರು ರೈತರಿಗೆ ಕಡ್ಡಾಯವಾಗಿ ತಿಳಿಸುವಂತೆ ಸೂಚಿಸಿದರು, ಕೃಷಿ ಅಧಿಕಾರಿ ನಿಂಗಪ್ಪ ಕಾಕೋಳ ಸ್ವಾಗತಿಸಿ ವಂದಿಸಿದರು.