ಕೂಲಿ ಹೆಚ್ಚಳ, 200 ದಿನ ಕೆಲಸಕ್ಕೆ ಆಗ್ರಹಿಸಿ ಕೃಷಿ ಕೂಲಿಕಾರರ ಪ್ರತಿಭಟನೆ

| Published : Jan 18 2025, 12:45 AM IST

ಸಾರಾಂಶ

ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹೆಚ್ಚಳ ಮಾಡಬೇಕು. ಜೊತೆಗೆ ವರ್ಷಕ್ಕೆ 200 ದಿನ ಕೆಲಸ ನೀಡಬೇಕೆಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಕೂಲಿಕಾರರಿಗೆ ಕಲ್ಯಾಣ ಮಂಡಳಿ ಜಾರಿ, ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಕೂಲಿಕಾರರಿಗೆ ಹಕ್ಕುಪತ್ರ, ನಿವೇಶನ ರಹಿತರಿಗೆ ನಿವೇಶನ, ಹಳ್ಳಿಗೊಂದು ಸುಸಜ್ಜಿತ ಸ್ಮಶಾನ, ಕೂಲಿಕಾರರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು.

ಮದ್ದೂರು: ಕೂಲಿ ಹೆಚ್ಚಳ, 200 ದಿನ ಕೆಲಸಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳು ತಾಲೂಕಿನ ಆತಗೂರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಕೃಷಿ ಕೂಲಿಕಾರರನ್ನು ವಂಚಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. 2025- 26 ನೇ ಸಾಲಿನ ಬಜೆಟ್ ನಲ್ಲಿ ಕೃಷಿಕೂಲಿಕಾರರ ಮತ್ತು ಗ್ರಾಮೀಣ ಕೆಲಸಗಾರರ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಆಗ್ರಹಿಸಿದರು. ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡವರು, ಕೂಲಿಕಾರ್ಮಿಕರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಹೆಚ್ಚಳ ಮಾಡಬೇಕು. ಜೊತೆಗೆ ವರ್ಷಕ್ಕೆ 200 ದಿನ ಕೆಲಸ ನೀಡಬೇಕೆಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಕೂಲಿಕಾರರಿಗೆ ಕಲ್ಯಾಣ ಮಂಡಳಿ ಜಾರಿ, ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಕೂಲಿಕಾರರಿಗೆ ಹಕ್ಕುಪತ್ರ, ನಿವೇಶನ ರಹಿತರಿಗೆ ನಿವೇಶನ, ಹಳ್ಳಿಗೊಂದು ಸುಸಜ್ಜಿತ ಸ್ಮಶಾನ, ಕೂಲಿಕಾರರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, ಕೂಲಿಗಾರರಿಗೆ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಿ, ಪಿಡಿಒ ಎ.ಬಿ.ಶಶಿಧರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ಟಿ.ಪಿ.ಅರುಣ್ ಕುಮಾರ್, ಪಿ.ಶಿವರಾಜು, ಚಿಕ್ಕಮ್ಮ, ಜಯಮ್ಮ, ಭಾಗ್ಯಮ್ಮ, ಹೇಮ, ನಾರಾಯಣ, ಸಾಕಮ್ಮ, ಗೌರಮ್ಮ, ಮಹದೇವಮ್ಮ ಭಾಗವಹಿಸಿದ್ದರು.