ಜಾಗತಿಕ ಆರ್ಥಿಕ ವ್ಯವಸ್ಥೆಗೆ ಕೃಷಿ ಕೊಡುಗೆ ಅಪಾರ: ಜಿಲ್ಲಾಧಿಕಾರಿ ಡಾ.ಕುಮಾರ

| Published : Jul 31 2025, 12:45 AM IST

ಜಾಗತಿಕ ಆರ್ಥಿಕ ವ್ಯವಸ್ಥೆಗೆ ಕೃಷಿ ಕೊಡುಗೆ ಅಪಾರ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ವಿಜ್ಞಾನಿಗಳು ಹೊಸದಾಗಿ ತಂತ್ರಜ್ಞಾನಗಳ ಅಳವಡಿಕೆ ಮತ್ತು ಉಪಯುಕ್ತತೆಯಿಂದ ಕೃಷಿಯ ವ್ಯಾಪ್ತಿ ಜಾಗತಿಕ ಮಟ್ಟಕ್ಕೂ ವಿಸ್ತರಿಸುತ್ತಿದ್ದಾರೆ. ತರಬೇತಿ ಕಾರ್ಯಕ್ರಮಗಳು, ಜ್ಞಾನದ ಆಗರಗಳಾಗಿ ಸ್ಫೂರ್ತಿದಾಯಕವಾಗಿರುತ್ತದೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾಗತಿಕ ಆರ್ಥಿಕ ವ್ಯವಸ್ಥೆಗೆ ಕೃಷಿ ಕೊಡುಗೆ ಅಪಾರ. ವಿಜ್ಞಾನಿಗಳು ಕೃಷಿಯ ಹೊಸ ತಂತ್ರಜ್ಞಾನದೊಂದಿಗೆ ಆವಿಷ್ಕಾರಗಳ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ತಾಲೂಕಿನ ವಿ.ಸಿ.ಫಾರ್ಮ್ ನ ಕೃಷಿ ವಿಶ್ವ ವಿದ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕರುಗಳಿಗೆ ನಡೆದ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನೂತನವಾಗಿ ರೂಪುಗೊಂಡಿರುವ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಅಭಿನಂದನೆ ಸಲ್ಲಿಸಿ ನೂತನವಾಗಿ ನೇಮಕಗೊಂಡ ಅಧಿಕಾರಿ/ನೌಕರರಿಗೆ ಹಾಗೂ ಇತರರಿಗೆ ಆಯೋಜಿಸಲ್ಪಟುವ ತರಬೇತಿ ಕಾರ್ಯಕ್ರಮ ಜ್ಞಾನದ ಉನ್ನತಿಗೆ ವೇದಿಕೆಯಗಲಿ ಎಂದು ಶುಭ ಹಾರೈಸಿದರು.

ಕೃಷಿ ವಿಜ್ಞಾನಿಗಳು ಹೊಸದಾಗಿ ತಂತ್ರಜ್ಞಾನಗಳ ಅಳವಡಿಕೆ ಮತ್ತು ಉಪಯುಕ್ತತೆಯಿಂದ ಕೃಷಿಯ ವ್ಯಾಪ್ತಿ ಜಾಗತಿಕ ಮಟ್ಟಕ್ಕೂ ವಿಸ್ತರಿಸುತ್ತಿದ್ದಾರೆ. ತರಬೇತಿ ಕಾರ್ಯಕ್ರಮಗಳು, ಜ್ಞಾನದ ಆಗರಗಳಾಗಿ ಸ್ಫೂರ್ತಿದಾಯಕವಾಗಿರುತ್ತದೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನಾವು ಮಾಡುವ ಪ್ರತಿ ಕಾರ್ಯದಲ್ಲೂ ತೋರುವ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಎಂದಿಗೂ ಪ್ರತಿಫಲ ಅಪೇಕ್ಷಿಸದಂತೆ ನಿರ್ವಹಿಸುವ ಕಾರ್ಯವು ಸಂಸ್ಥೆ ಹಾಗೂ ವೈಯಕ್ತಿಕ ಸಾಧನೆಗೆ ಸ್ಪೂರ್ತಿಯಾಗುತ್ತದೆ ಎಂದರು.

ಪ್ರತಿಯೊಬ್ಬ ವಿಜ್ಞಾನಿಯು ಮಾಡುವ ಸಂಶೋಧನಾ ಫಲಿತಾಂಶಗಳು ಕೇವಲ ಸಂಶೋಧನಾ ಪ್ರಬಂಧಗಳಲ್ಲಿ ಉಳಿಯದೇ ರೈತರ ಹೊಲಗದ್ದೆಗಳಲ್ಲಿ ತಂತ್ರಜ್ಞಾನಗಳ ರೂಪದಲ್ಲಿ ಕೃಷಿ ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗವಾಗಬೇಕು ಎಂದರು.

ನಮ್ಮ ಕಾರ್ಯಸ್ಥಳದಲ್ಲಿ ನಾವು ಒಗ್ಗೂಡಿಸಿಕೊಳ್ಳುವ ಉತ್ತಮ ಮಟ್ಟದ ವೃತ್ತಿ ನೈತಿಕತೆಯು ನಮ್ಮನ್ನು ಸಾಧನೆಯೆಡೆಗೆ ಕೊಂಡೊಯ್ಯತ್ತದೆ. ಕೃಷಿಯೊಂದಿಗೆ ಪಾರದರ್ಶಕ ಸೇವಾ ಮನೋಭಾವನೆಯುಳ್ಳ ವೃತ್ತಿ ಜೀವನವನ್ನು ಅಳವಡಿಸಿಕೊಂಡಲ್ಲಿ ವಿಶ್ವದಲ್ಲಿ ಭಾರತವು ಪಾರಂಪರಿಕವಾಗಿ ಕೃಷಿಯಲ್ಲಿ ಅಗ್ರಸ್ಥಾನದಲ್ಲಿರಲು ಕಾರಣೀಭೂತವಾಗಿರುತ್ತದೆ ಎಂದರು.

ಸಮಾರಂಭದಲ್ಲಿ ಕೃಷಿ ವಿವಿ ವಿಶೇಷಾಧಿಕಾರಿ ಡಾ.ಹರಿಣಿಕುಮಾರ್ ಸೇರಿದಂತೆ ಹಲವರು ಇದ್ದರು.

ರಾಜ್ಯ ಮಟ್ಟದ 13ನೇ ಶೂಟಿಂಗ್ ಸ್ಪರ್ಧೆ ಚಿನ್ನ, ಬೆಳ್ಳಿ ಪದಕ

ಮಂಡ್ಯ:

ರಾಜ್ಯ ರೈಫಲ್ ಅಸೋಸಿಯೇಷನ್ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜನಲ್ಲಿ ನಡೆದ ರಾಜ್ಯ ಮಟ್ಟದ 13ನೇ ಶೂಟಿಂಗ್ ಸ್ಪರ್ಧೆಯಲ್ಲಿ ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆದ ಸ್ಪರ್ಧಿಗಳು ಚಿನ್ನ- ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಜೆಎಸ್‌ಎಸ್ ಮಹಿಳಾ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂ.ಎಸ್.ಪುಣ್ಯ 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದರೆ, ಸೇಫಿಯಂಟ್ ಕಾಲೇಜಿನ ಪಿ.ವರ್ಷಿಣಿ 1 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದು ವಿಜೇತರಾಗಿದ್ದಾರೆ.

ಸೇಂಟ್ ಜೋಸೆಫ್ ಶಾಲೆ ವಿದ್ಯಾರ್ಥಿನಿ ಪವನಿ ಕಾಮತ್ 1 ಬೆಳ್ಳಿ ಹಾಗೂ ಚೇತನ ಓಬು ಲಕ್ಷ್ಮಿ ಹಾಗೂ ಎಸ್.ತರುಣ್ ಆಯಾ ವೈಯಕ್ತಿಕ ಈವೆಂಟ್‌ಗಳಲ್ಲಿ 1 ಬೆಳ್ಳಿ ಪದಕವನ್ನು ಗೆದ್ದು ಗೆಲುವಿನ ನಗೆ ಬೀರಿದ್ದಾರೆ.

ಈ ಸ್ಪರ್ಧೆಯಲ್ಲಿ 10 ಮೀ ರೈಫಲ್, 50 ಮೀ ರೈಫಲ್, ಪಿಸ್ತೂಲ್ ಈವೆಂಟ್‌ಗಳು, ಟ್ರ್ಯಾಪ್ ಮತ್ತು ಸ್ಕೀಟ್ ಸೇರಿದಂತೆ ಎಲ್ಲಾ ರೀತಿಯ ಶೂಟಿಂಗ್ ಕ್ರೀಡೆಗಳು ನಡೆದು ಮೈಸೂರು ಶೂಟಿಂಗ್ ಕ್ಲಬ್ ನಿಂದ ಪಾಲ್ಗೊಂಡಿದ್ದ ಶೂಟರ್‌ಗಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮುಂದಿನ ಹಂತಕ್ಕೆ (ದಕ್ಷಿಣ ವಲಯಗಳು) ಅರ್ಹತೆ ಪಡೆದಿದ್ದಾರೆ. 50 ಮೀ ರೈಫಲ್ ಎನ್‌ಆರ್‌ನಲ್ಲಿ 5 ವೈಯಕ್ತಿಕ ಪದಕಗಳನ್ನು ಮತ್ತು ಐಎಸ್‌ಎಸ್‌ಎಫ್ ಈವೆಂಟ್‌ಗಳಲ್ಲಿ 4 ಪದಕಗಳನ್ನು ಗೆದ್ದಿರುವ ಮೈಸೂರು ಶೂಟಿಂಗ್ ಕ್ಲಬ್ ತಂಡಕ್ಕೆ ರಾಷ್ಟ್ರೀಯ ಪ್ಯಾರಾ ಶೂಟರ್ ಬಿ.ಆರ್.ದರ್ಶನ್ ಕುಮಾರ್ (ಮೈಸೂರು) ಉತ್ತಮ ತರಬೇತಿ ನೀಡಿದ್ದರು.