ರಾಜ್ಯಪಾಲರ ವಾಪಸ್ಸು ಕರೆಸಿಕೊಳ್ಳಲು ಅಹಿಂದ ಆಗ್ರಹ

| Published : Aug 19 2024, 12:54 AM IST / Updated: Aug 19 2024, 12:55 AM IST

ಸಾರಾಂಶ

ತರೀಕೆರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತನಿಖೆ ನಡೆಸಲು ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಅಹಿಂದ ಸಂಘಟನೆ ವಿರೋಧಿಸುತ್ತಿದ್ದು, ಇದು ಸಂವಿಧಾನ ಮತ್ತು ಕಾನೂನು ಬಾಹಿರವಾಗಿರುವುದರಿಂದ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಈ ಕೂಡಲೇ ರಾಜ್ಯಪಾಲರನ್ನು ವಾಪಸ್ಸು ಕರೆಸಿ ಕೊಳ್ಳಬೇಕೆಂದು ಅಹಿಂದ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಅಹಿಂದ ಸಂಘಟನೆಯಿಂದ ಆಕ್ರೋಶ...

ಕನ್ನಡಪ್ರಭ ವಾರ್ತೆ, ತರೀಕೆರೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತನಿಖೆ ನಡೆಸಲು ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಅಹಿಂದ ಸಂಘಟನೆ ವಿರೋಧಿಸುತ್ತಿದ್ದು, ಇದು ಸಂವಿಧಾನ ಮತ್ತು ಕಾನೂನು ಬಾಹಿರವಾಗಿರುವುದರಿಂದ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಈ ಕೂಡಲೇ ರಾಜ್ಯಪಾಲರನ್ನು ವಾಪಸ್ಸು ಕರೆಸಿ ಕೊಳ್ಳಬೇಕೆಂದು ಅಹಿಂದ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಅಹಿಂದ ಸಂಘಟನೆಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಹಾಲವಜ್ರಪ್ಪ ಮಾತನಾಡಿ ಟಿ.ಜೆ. ಅಬ್ರಾಹಂ ನೀಡಿರುವ ಪತ್ರದ ಮೇರೆಗೆ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಗಳಿಗೆ ಅನುಮತಿ ನೀಡಿರುವುದನ್ನು ರಾಜ್ಯಾದ್ಯಂತ ನಮ್ಮ ಸಂಘಟನೆ ವಿರೋಧಿಸುತ್ತದೆ ಎಂದು ಹೇಳಿದರು.

ಸುಪ್ರಿಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಟಿ.ಜೆ. ಅಬ್ರಾಹಂ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುತ್ತಿರುವ ಅಹಿಂದ ನಾಯಕ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಧಮನಿಸಲು ಹೊಂಚುಹಾಕುತ್ತಿದ್ದಾರೆಂದು ಕುರುಬ ಸಮಾಜದ ಅಧ್ಯಕ್ಷ ಪದ್ಮರಾಜ್ ಹೇಳಿದರು. ಪುರಸಭಾ ಮಾಜಿ ಅಧ್ಯಕ್ಷ ಬೈಟು ರಮೇಶ್ ಮಾತನಾಡಿ ಟಿ.ಜೆ. ಅಬ್ರಾಹಂ ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿರುವಂತೆ ಕೆಸರೆ ಗ್ರಾಮದ 3.16 ಎಕರೆ ಜಮೀನು ಕ್ರಯಪತ್ರ ಹಾಗೂ ದಾನಪತ್ರದಲ್ಲಿ ಯಾವುದಾದರೂ ಲೋಪದೋಷಗಳಿದ್ದರೆ ಯಾವ ಸಂದರ್ಭದಲ್ಲಾದರೂ ಬದಲಾಯಿಸುವ ಅವಕಾಶವಿದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲದಿದ್ದರೂ ಇವರ ಮೇಲೆ ಆರೋಪಿಸುತ್ತಿರುವುದು ಖಂಡನೀಯ ಎಂದು ಹೇಳಿದರು.ಕಾಂಗ್ರೇಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ ಮಾತನಾಡಿ ಅಹಿಂದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವ ಕುಮಾರ್ ನೇತೃತ್ವದಲ್ಲಿ ಕಳೆದ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಗ್ರಾರಂಟಿ ಯೋಜನೆಗಳ ಮೂಲಕ ಅಭೂತಪೂರ್ವ ಸಾಧನೆಗೈದು ಜನ ಬೆಂಬಲ ಹೆಚ್ಚಾಗಿರುವ ಕಾರಣ ಇದನ್ನು ಸಹಿಸದ ಸಂಘ ಪರಿವಾರ ಮತ್ತು ಬಿಜೆಪಿ ಹುನ್ನಾರ ನಡೆಸಿ ರಾಜ್ಯದಲ್ಲಿ ಅಹಿಂದ ನಾಯಕರನ್ನು ಧಮನ ಮಾಡುವ ಸಂಚು ನಡೆಸುತ್ತಿದೆ ಎಂದು ಹೇಳಿದರು. ಮಹಿಳ ಘಟಕದ ರಾಜ್ಯ ಸಂಚಾಲಕಿ ಭವಾನಿ ಮಾತನಾಡಿ ರಾಜ್ಯ ಮುಖ್ಯ ಸಂಚಾಲಕ ಮೂರ್ತಿ ಸಿದ್ದಯ್ಯ ಮತ್ತು ಎನ್. ವೆಂಕಟೇಶಗೌಡ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಹಲವಾರು ಹಂತಗಳಲ್ಲಿ ಅಹಿಂದ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ರೀತಿ ಹೋರಾಟಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.ಪುರಸಭಾ ಸದಸ್ಯ ಟಿ.ಜಿ. ಶಶಾಂಕ್, ಮುರುಗೇಶಪ್ಪ, ಮಂಜುನಾಥ್ , ಸಂಘಟನೆಯ ರಾಜ್ಯ ಜಂಟಿ ಸಂಚಾಲಕ ಎನ್. ವೆಂಕಟೇಶ್ , ಆನಂದ್, ಪದ್ಮ ಮತ್ತಿತರರು ಭಾಗವಹಿಸಿದ್ದರು. 18ಕೆಟಿಆರ್.ಕೆ.15ಃ

ತರೀಕೆರೆಯಲ್ಲಿ ಅಹಿಂದ ಸಂಘಟನೆಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು.