ಎಐ ನಿಂದ ನಿರುದ್ಯೋಗ ಹೆಚ್ಚಳ ತಪ್ಪು ತಿಳುವಳಿಕೆ

| Published : Sep 27 2025, 12:00 AM IST

ಎಐ ನಿಂದ ನಿರುದ್ಯೋಗ ಹೆಚ್ಚಳ ತಪ್ಪು ತಿಳುವಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃತಕ ಬುದ್ದಿಮತ್ತೆ ಮತ್ತು ಮಿಷನ್ ಲನಿಂಗ್ (ಎಐ ಮತ್ತುಎಂ.ಎಲ್.) ತಂತ್ರಜ್ಞಾನದಿಂದ ನಿರುದ್ಯೋಗ ಹೆಚ್ಚಾಗಲಿದೆ ಎಂಬುದು ತಪ್ಪು ತಿಳುವಳಿಕೆ. ಎಐ ಮತ್ತು ಎಂಎಲ್‌ನಿಂದ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಐಐಐಟಿ ಧಾರವಾಡದ ನಿರ್ದೇಶಕ ಡಾ.ಎಸ್.ಆರ್.ಮಹದೇವ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಕೃತಕ ಬುದ್ದಿಮತ್ತೆ ಮತ್ತು ಮಿಷನ್ ಲನಿಂಗ್ (ಎಐ ಮತ್ತುಎಂ.ಎಲ್.) ತಂತ್ರಜ್ಞಾನದಿಂದ ನಿರುದ್ಯೋಗ ಹೆಚ್ಚಾಗಲಿದೆ ಎಂಬುದು ತಪ್ಪು ತಿಳುವಳಿಕೆ. ಎಐ ಮತ್ತು ಎಂಎಲ್‌ನಿಂದ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಐಐಐಟಿ ಧಾರವಾಡದ ನಿರ್ದೇಶಕ ಡಾ.ಎಸ್.ಆರ್.ಮಹದೇವ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎಐಸಿಟಿಇ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದರು.90 ರ ದಶಕದಲ್ಲಿ ಕಂಪ್ಯೂಟರ್ ಬಂದಾಗಲೂ ಇದೇ ರೀತಿಯ ಚರ್ಚೆಗಳು ನಡೆದವು.ಆದರೆ ಇಂದು ಅತಿ ಹೆಚ್ಚು ಉದ್ಯೋಗ ಸೃಷ್ಠಿ ಮಾಡುವ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನವೂ ಒಂದಾಗಿದೆ. ಹಾಗೆಯೇ ಎಐ ಮತ್ತು ಎಂಎಲ್ ಬಳಕೆಯಿಂದ ಉದ್ಯೋಗ ನಷ್ಟವಾಗುವುದಿಲ್ಲ ಎಂಬುದು ಸ್ಪಷ್ಟ ಎಂದರು. ಎಐ ಮತ್ತುಎಂಎಲ್ ಹಾಗೂ ಕಂಪ್ಯೂಟರ್‌ ಎಂಜಿನಿಯರ್ಸ್ ಒಂದಕ್ಕೊಂದು ಪೂರಕವಾಗಿವೆ. ಆದರೆ ಸಾಪ್ಟವೇರ್‌ ಎಂಜಿನಿಯರ್‌ಗಿಂತ ವೇಗವಾಗಿ ಮತ್ತು ನಿಖರವಾಗಿ ಎಐ ಮತ್ತು ಎಂಎಲ್ ಕೆಲಸ ಮಾಡಲಿವೆ. ಡೇಟಾ ಮಾನ್ಯೇಜ್‌ಮೆಂಟ್ ಮತ್ತು ಅನಾಲಿಸಿಸ್‌ನಲ್ಲಿ ಎಐ ಅತ್ಯಂತ ಪ್ರಕರವಾಗಿ ಕಾರ್ಯನಿರ್ವಹಿಸಲಿದೆ ಎಂದರು.ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತನಾಡಿದ ಡಾ.ಮಹೇಶ್ ಪಂಡಿತ್, ಭಾರತ ಯಂಗ್‌ ಇಂಡಿಯಾ ಮುಂದಿನ 30 ವರ್ಷಗಳ ಕಾಲ ದುಡಿಯುವ ವಯಸ್ಸಿನ ಯುವಕರು ನಮ್ಮಲ್ಲಿದ್ದಾರೆ. ಅಲ್ಲದೆ ತಂತ್ರಜ್ಞಾನದ ಭಾರತ ಮತ್ತು ಹಲವಾರು ಕೊರತೆಗಳನ್ನು ಎದುರಿಸುತ್ತಿರುವ ಭಾರತ. ಇಂತಹ ಭಾರತ ಎಐ ಮತ್ತು ಎಂಎಲ್ ಬಳಕೆಯಿಂದ ಸದೃಢ ಭಾರತವಾಗಿ ಬದಲಾಗಲು ಸಾಧ್ಯವಿದೆ ಎಂದರು.ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶ್ರಿವಕುಮಾರಯ್ಯ ಮಾತನಾಡಿ, ನಾವೆಲ್ಲರೂ ಇಂದು ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹೊಸ ತಂತ್ರಜ್ಞಾನಗಳು ಬಂದಾಗ ಆತಂಕ ಉಂಟಾಗುವುದು ಸಹಜ. ಲಭ್ಯವಿರುವ ಮತ್ತು ಹೊಸದಾಗಿ ಬರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು. ಪ್ರಸ್ತಾವಿಕ ನುಡಿಗಳನ್ನಾಡಿದ ಸಂಯೋಜಕರಾದ ಮಮತಾ, ಬೇರೆ ಬೇರೆ ಕ್ಷೇತ್ರಗಳಲ್ಲಿ ಹೇಗೆ ಎಐ ಬಳಕೆ ಮಾಡಬಹುದು, ಎಐ ಬಳಕೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, ಮಿಡಿಯಾ, ಕಾನೂನು, ಆರೋಗ್ಯ, ಶಿಕ್ಷಣ ಹಾಗೂ ಸೈಬರ್‌ ಕ್ರೈಮ್ ತಡೆಯಲು ಹೇಗೆ ಬಳಕೆ ಮಾಡಬಹುದು ಎಂಬುದರ ಕುರಿತು ಇಂದಿನ ವಿಚಾರ ಸಂಕಿರಣ ಹೆಚ್ಚಿನ ಬೆಳಕು ಚಲ್ಲಲಿದೆ ಎಂದರು.ವಿವಿಧ ಇಂಜಿನಿಯರಿಂಗ್ ಕಾಲೇಜುಗಳು ಸುಮಾರು 93ಕ್ಕೂ ಹೆಚ್ಚು ಪ್ರಂಬಂಧಗಳು ಮಂಡನೆಯಾಗಲಿವೆ. ಸುಮಾರು 200 ಕ್ಕು ಹೆಚ್ಚು ಪ್ರತಿನಿಧಿಗಳು ಈ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ, ಎಐಸಿಟಿಇ ಅಡಿಯಲ್ಲಿ ನಡೆಯುತ್ತಿರುವ ಈ ವಿಚಾರ ಸಂಕಿರಣ ಭವಿಷ್ಯದ ಭಾರತವನ್ನು ಕುರಿತಾಗಿದೆ. ತಂತ್ರಜ್ಞಾನ ಬಳಕೆಯಿಂದ ಜನಸಾಮಾನ್ಯರ ಭವಣೆತೀರಿಸುವ ಕೆಲಸಕ್ಕೆ ಇಂತಹ ವಿಚಾರ ಸಂಕೀರಣಗಳು ಮುನ್ನುಡಿ ಬರೆಯಲಿ ಎಂದು ಶುಭ ಹಾರೈಸಿದರು. ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನ ಪ್ರಾಂಶುಪಾಲರಾದಡಾ.ನಿಜಲಿಂಗಪ್ಪ ಸ್ವಾಗತಿಸಿದರು.ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದಕೆ.ಎಸ್. ಲಿಂಗದೇವರಪ್ಪ, ಡಾ.ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು.