‘ಸನಾತನ ವಾಣಿ’ ಬಹುಭಾಷಾ ಪ್ರಸಾರಕ್ಕೆ ಎಐ ತಂತ್ರಜ್ಞಾನ

| Published : Sep 19 2025, 01:00 AM IST

ಸಾರಾಂಶ

‘ಸನಾತನ ವಾಣಿ’ಯನ್ನು ಎಐ ತಂತ್ರಜ್ಞಾನದ ಮೂಲಕ ಬಹು ಭಾಷೆಗಳಲ್ಲಿ ಪ್ರಸಾರ ಮಾಡಲಾಗುವುದು. ಈ ಮೂಲಕ ಎಲ್ಲರಿಗೂ ಅಧ್ಯಾತ್ಮಿಕ ಸಂದೇಶಗಳು ತಲುಪಲಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಅಪ್ಲಿಕೇಶನ್ ನನ್ನ ಧ್ವನಿಯನ್ನು ಬಹುಭಾಷೆಗಳಲ್ಲಿ ಬರುವಂತೆ ಮಾಡುತ್ತದೆ. ಸ್ಪೇನ್, ಜರ್ಮನಿ, ಡಚ್, ರಷ್ಯಾ, ಇಟಲಿ ಹೀಗೆ ಹಲವಾರು ಭಾಷೆಗಳಲ್ಲಿ ನನ್ನ ಉಪನ್ಯಾಸಗಳನ್ನು ಆಲಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸತ್ಯ ಸಾಯಿ ಗ್ರಾಮದಿಂದ ನಿರ್ವಹಣೆಯಾಗುತ್ತಿರುವ ಸಂಸ್ಥೆಗಳಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಮುಂದಿನ ನವೆಂಬರ್ ವೇಳೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್ ಪರಿಚಯಿಸಲಾಗುವುದು. ಈ ಮೂಲಕ ಇಲ್ಲಿ ನಡೆಯುವ ಉಪನ್ಯಾಸ ಮತ್ತು ಪ್ರಕಟವಾಗುವ ಪುಸ್ತಕಗಳನ್ನು ಎಲ್ಲರೂ ಅವರವರ ಭಾಷೆಗಳಲ್ಲಿಯೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಮಾತನಾಡಿ , ಹಲವು ವರ್ಷಗಳಿಂದ ಭಾರತೀಯರಾದ ನಾವು ಮೌಖಿಕ ಪರಂಪರೆಯಿಂದ ಕಲಿಯುತ್ತಿದ್ದೇವೆ. ಈಗ ಆಧುನಿಕ ತಂತ್ರಜ್ಞಾನದ ಸಮಯ. ಎಲ್ಲದರ ಜೊತೆಗೆ ಸಾಗಬೇಕಿದೆ. ಆಡಿಯೋ ಮತ್ತು ವಿಡಿಯೋ ತಂತ್ರಗಳನ್ನು ಹೊಂದಿರುವ ಎಐ ತಂತ್ರಜ್ಞಾನವನ್ನು ಬಳಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಸನಾತನ ವಾಣಿ’ ಬಹುಭಾಷಾ ಪ್ರಸಾರ‘ಸನಾತನ ವಾಣಿ’ಯನ್ನು ಎಐ ತಂತ್ರಜ್ಞಾನದ ಮೂಲಕ ಬಹು ಭಾಷೆಗಳಲ್ಲಿ ಪ್ರಸಾರ ಮಾಡಲಿದ್ದೇವೆ. ಈ ಮೂಲಕ ಎಲ್ಲರಿಗೂ ಅಧ್ಯಾತ್ಮಿಕ ಸಂದೇಶಗಳು ತಲುಪಲಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಅಪ್ಲಿಕೇಶನ್ ನನ್ನ ಧ್ವನಿಯನ್ನು ಬಹುಭಾಷೆಗಳಲ್ಲಿ ಬರುವಂತೆ ಮಾಡುತ್ತದೆ. ಸ್ಪೇನ್, ಜರ್ಮನಿ, ಡಚ್, ರಷ್ಯಾ, ಇಟಲಿ ಹೀಗೆ ಹಲವಾರು ಭಾಷೆಗಳಲ್ಲಿ ನನ್ನ ಉಪನ್ಯಾಸಗಳನ್ನು ಆಲಿಸಬಹುದಾಗಿದೆ ಎಂದರು.ನಮ್ಮಲ್ಲಿರುವ ಎಲ್ಲಾ ಪುಸ್ತಕಗಳನ್ನು ರೆಕಾರ್ಡ್ ಮಾಡಿ ಅದನ್ನು ಆಸಕ್ತರು ಅವರಿಗೆ ಬೇಕಿರುವ ಭಾಷೆಗಳಲ್ಲಿ ಆಲಿಸಲು ಸಾಧ್ಯವಾಗುವಂತೆ ಮಾಡಲಾಗುವುದು. ಇದರಿಂದ ಯಾರು ಎಲ್ಲಿಯೇ ಇದ್ದರೂ ತಮ್ಮದೇ ಭಾಷೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಆಲಿಸಬಹುದಾಗಿದೆ. ಇಂದಿನ ಪೀಳಿಗೆಯವರಿಗೆ ಪುಸ್ತಕವನ್ನು ಓದುವಷ್ಟು ತಾಳ್ಮೆಯಿಲ್ಲ. ಹೀಗಾಗಿ ನಾವು ಆಡಿಯೊ ಪುಸ್ತಕಗಳನ್ನು ತರುತ್ತಿದ್ದೇವೆ ಎಂದು ವಿವರಿಸಿದರು. ಫಿಲಿಪ್ಸ್ ಕಂಪನಿಗೆ ಪುರಸ್ಕಾರ

ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ ಫಿಲಿಪ್ಸ್ ಇಂಡಿಯಾ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭರತ್ ಆರ್ ಶೇಷ ಪ್ರಶಸ್ತಿ ಸ್ವೀಕರಿಸಿದರು. ನೆದರ್‍‌ಲೆಂಡ್ಸ್ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎರಿಕ್ ಲಾರಕ್ಕರ್ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ’ ಪುರಸ್ಕಾರ ನೀಡಿ ಗೌರವಿಸಲಾಯಿತು.