ಕಲಾವಿದರಿಗೆ ಎಐ ಸವಾಲು: ಎಡಿಸಿ ಅಬೀದ್‌ ಗದ್ಯಾಳ

| Published : Oct 04 2025, 12:00 AM IST

ಕಲಾವಿದರಿಗೆ ಎಐ ಸವಾಲು: ಎಡಿಸಿ ಅಬೀದ್‌ ಗದ್ಯಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜಿಬೆಟ್ಟು ಕಟ್ಟೆಆಚಾರ್ಯ ಮಾರ್ಗದಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಅರೇಬಿಕ್ ಕ್ಯಾಲಿಗ್ರಫಿ ಕಲಾ ಪ್ರದರ್ಶನ ಮತ್ತು ಗಾಂಧಿ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪ್ರದರ್ಶನ ನಡೆಯಿತು.

ಉಡುಪಿ: ಕಲಾವಿದರಿಗೆ ಇತ್ತೀಚೆಗೆ ಆಧುನಿಕ ಕೃತಕ ಬುದ್ಧಿಮತ್ತೆ(ಎಐ)ಯ ಸವಾಲು ಎದುರಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ನಗರದ ಕುಂಜಿಬೆಟ್ಟು ಕಟ್ಟೆಆಚಾರ್ಯ ಮಾರ್ಗದಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಅರೇಬಿಕ್ ಕ್ಯಾಲಿಗ್ರಫಿ ಕಲಾ ಪ್ರದರ್ಶನ ಮತ್ತು ಗಾಂಧಿ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಸಂತಸದಿಂದ ಮಾಡಿದ ಕೆಲಸ ಯಾವತ್ತೂ ಭಾರವಾಗದು. ನೀರು, ಗೊಬ್ಬರ, ಬೆಳಕು, ಗಾಳಿಯಿಂದ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಫಲ ನೀಡುವಂತೆ ಮಕ್ಕಳಲ್ಲಿರುವ ಕಲೆಯ ಪ್ರತಿಭೆ, ಸಾಮರ್ಥ್ಯ ಅಭಿವ್ಯಕ್ತಿಗೆ ಅವಕಾಶ, ಪೋಷಣೆ ಅಗತ್ಯ, ಹೆತ್ತವರು ಮಕ್ಕಳಿಗೆ ಸಂತಸದ ಕಲಿಕೆಯ ವಾತಾವರಣ ರೂಪಿಸಬೇಕು ಎಂದವರು ಹೇಳಿದರು.ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ಎಚ್. ಕೆ. ಗಂಗಾಧರ, ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಕ್ ವಾಹಿದ್ ದಾವೂದ್, ಸಾಮಾಜಿಕ ಕಾರ್ಯಕರ್ತ ಯ. ವಿಶ್ವನಾಥ್ ಶೆಣೈ ಮಾತನಾಡಿದರು.

ಡಾ. ಕಿರಣ ಆಚಾರ್ಯ, ಕೃಷ್ಣಮೂರ್ತಿ ರಾವ್, ಬೆಂಗಳೂರಿನ ಮೊಹಮ್ಮದ್ ಸಹಿನ್, ಇಂದ್ರಾಳಿ ಮಸೀದಿಯ ಖಾಸ್ಮಿ ಮೌಲಾನಾ ಮಸಿಯುಲ್ಲಾ ಖಾನ್, ಇನಾಯತ್ ಆರ್ಟ್ ಗ್ಯಾಲರಿಯ ಲಿಯಾಕತ್ ಅಲಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲ್ ಸ್ವಾಗತಿಸಿ, ವಂದಿಸಿದರು.