ವೈದ್ಯಕೀಯ ಔಷಧ ವಿಜ್ಞಾನ ಇಂದು ಎಐ ತಂತ್ರಜ್ಞಾನ ಬಳಿಕೆಯಿಂದ ಮೊದಲಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದು, ನಾವು ಅಭಿವೃದ್ಧಿಪಡಿಸುವ ಔಷಧಿಗಳಿಂದ ಜೀವ ಉಳಿಸುವ ಮಹತ್ವದ ಕಾರ್ಯ ನಮ್ಮದಾಗಿದೆ ಎಂದು ಅಮೆರಿಕದ ಮಿಚಿಗನ್ ಪೈಜರ್ ಯುನಿರ್ವಸಿಟಿ ನಿರ್ದೇಶಕ ಡಾ.ಪ್ರವೀಣ ಹಿರೇಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯಕೀಯ ಔಷಧ ವಿಜ್ಞಾನ ಇಂದು ಎಐ ತಂತ್ರಜ್ಞಾನ ಬಳಿಕೆಯಿಂದ ಮೊದಲಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದು, ನಾವು ಅಭಿವೃದ್ಧಿಪಡಿಸುವ ಔಷಧಿಗಳಿಂದ ಜೀವ ಉಳಿಸುವ ಮಹತ್ವದ ಕಾರ್ಯ ನಮ್ಮದಾಗಿದೆ ಎಂದು ಅಮೆರಿಕದ ಮಿಚಿಗನ್ ಪೈಜರ್ ಯುನಿರ್ವಸಿಟಿ ನಿರ್ದೇಶಕ ಡಾ.ಪ್ರವೀಣ ಹಿರೇಮಠ ಹೇಳಿದರು.ನಗರದ ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಔಷಧ ಮಹಾವಿದ್ಯಾಲಯದಿಂದ ಬವಿವ ಸಂಘದ ನೂತನ ಸಭಾಭವನದಲ್ಲಿ ಔಷಧ ವಿಜ್ಞಾನದಲ್ಲಿ ಎಐ ಚಾಲಿತ ಸಂಶೋಧನೆಗಳು ವಿಷಯದ ಮೇಲೆ ಒಂದು ದಿನದ ರಾಷ್ಟ್ರಿಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಔಷಧ ಉದ್ಯಮವಿಂದು ರೂಪಾಂತರದ ಮುಂಚೂಣಿಯಲ್ಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೊಸ ಹೊಸ ಔಷಧಗಳ ಅವಿಷ್ಕಾರಗಳನ್ನು ವೇಗವಾಗಿ ಮಾಡಲು ಸಹಕರಿಸುತ್ತದೆ. ಎಐ ತಂತ್ರಜ್ಞಾನ ಬಳಿಕೆಯಿಂದ ಈ ಉದ್ಯಮ ಮೊದಲಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ. ನಾನೂ ಕೂಡ ಬಿವಿವಿ ಸಂಘದ ಎಚ್.ಎಸ್.ಕೆ.ಫಾರ್ಮಾಸಿ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ಅವಿರತ ಶ್ರಮದಿಂದ ಪ್ರಪಂಚದ ಔಷಧ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನೆಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಭಾಗದ ಯುವ ವಿಜ್ಞಾನಿಗಳಿಗೆ, ವಾಣಿಜ್ಯೋದ್ಯಮಿಗಳಿಗೆ ವಿದ್ಯಾರ್ಥಿಗಳಿಗೆ ಮುಖ್ಯ ವೇದಿಕೆಯಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯ ಪ್ರಾಚಾರ್ಯ ಡಾ.ಪ್ರಕಾಶ ಗೌಡನವರ ಮಾತನಾಡಿ, ಬಾಗಲಕೋಟೆಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಈ ಸಮ್ಮೇಳನ ಔಷಧ ವಿಜ್ಞಾನ ವಿಭಾಗದಲ್ಲಿ ಮೈಲಿಗಲ್ಲಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು, ಇಂದು ದೇಶದ ಆರ್ಥಿಕ ಹಾಗೂ ವೈದ್ಯಕೀಯ ಅಭಿವೃದ್ಧಿಯಲ್ಲಿ ಔಷಧ ವಿಜ್ಞಾನ ವಾಣಿಜ್ಯೋದ್ಯಮ ಪ್ರಮುಖ ಪಾತ್ರವಹಿಸುತ್ತದೆ. ಪ್ರಪಂಚದಲ್ಲಿ ಇಂದು ಭಾರತ ಔಷಧ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ನವೀಣ ಯೋಜನೆಗಳು ಯುವ ವಿಜ್ಞಾನಿಗಳಿಗೆ ವರವಾಗಿವೆ ಎಂದರು.
ಇದೇ ವೇಳೆ ಎಂಐಟಿ ಲಿಮಿಟೇಡ್ ಪೂನಾ ಕಂಪನಿಯೊಂದಿಗೆ ಎಐ-ರೋಬೋಟಿಕ್ ಸಂಶೋಧನಾ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಜೊತೆಗ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು,ವೇದಿಕೆ ಮೇಲೆ ಕುಮಾರೇಶ್ವರ ಔಷಧ ಮಹಾವಿದ್ಯಾಲಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ವೈ.ಶ್ರೀನಿವಾಸ ಸ್ವಾಗತಿಸಿದರು. ಡಾ.ಜಯದೇವ ಹಿರೇಮಠ ಪರಿಚಯಿಸಿದರು. ಡಾ.ಅನಿತಾ ದೇಸಾಯಿ ಫಾರ್ಮಾಸುಟಿಕಾನ್-25 ಸಮ್ಮೇಳನ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಡಾ.ಲಕ್ಷ್ಮಣ ವಿಜಯಪುರ ವಂದಿಸಿದರು. ಪ್ರಸಾದ ಮಾಲಗಿ ಹಾಗೂ ಸುಸ್ಮಿತಾ ಮೂಡಲಗಿ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ, ಡಾ.ಚಂದ್ರಶೇಖರ .ಡಾ.ಶರಣು ಬಿರಾದಾರ. ಡಾ.ಬಿ.ಎಸ್ .ಕಿತ್ತೂರ ಸೇರಿದಂತೆ ಸಂಘದ ಸದಸ್ಯರು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು. ವಿದ್ಯಾರ್ಥಿಗಳು ಸೇರಿದಂತೆ ಪ್ರಪಂಚದ ನಾನಾ ದೇಶಗಳ ಪ್ರತಿನಿಧಿಗಳೊಂದಿಗೆ ಸುಮಾರು 1200 ಜನ ಭಾಗವಹಿಸಿದ್ದರು.