ಮಾನವ ಯಾವುದೇ ಕೃತಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ, ಎಐಯನ್ನು ಒಪ್ಪಿಕೊಳ್ಳುತ್ತಿದ್ದಾನೆ . ಎಐಯನ್ನು ಬಳಸುವುದು ಮಾತ್ರವಲ್ಲದೆ, ಅದನ್ನು ನಿಯಂತ್ರಿಸುವ ವಿಧಾನವನ್ನೂ ಮನುಷ್ಯ ಅರಿಯಬೇಕು. ಆದರೆ ನಾವು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯ ಮೇಲೆ ಅವಲಂಬಿತರಾಗಬಾರದು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.

ಪುತ್ತೂರು: ಮಾನವ ಯಾವುದೇ ಕೃತಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ, ಎಐಯನ್ನು ಒಪ್ಪಿಕೊಳ್ಳುತ್ತಿದ್ದಾನೆ . ಎಐಯನ್ನು ಬಳಸುವುದು ಮಾತ್ರವಲ್ಲದೆ, ಅದನ್ನು ನಿಯಂತ್ರಿಸುವ ವಿಧಾನವನ್ನೂ ಮನುಷ್ಯ ಅರಿಯಬೇಕು. ಆದರೆ ನಾವು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯ ಮೇಲೆ ಅವಲಂಬಿತರಾಗಬಾರದು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.

ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು, ಪುತ್ತೂರು ಇಲ್ಲಿನ ಗೂಗಲ್ ಡೆವಲಪ್ಮೆಂಟ್ ಗ್ರೂಪ್, ಗಣಕ ಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ನಡೆದ ‘ಬಿಲ್ಡ್ ವಿದ್ ಎಐ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಂಶುಪಾಲ ಪ್ರೋ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾ, ಈಗಿನ ಸಮಾಜ ಇಂತಹ ಕೌಶಲ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಬಯಸುತ್ತಿದೆ. ಹಾಗಾಗಿ ಯುವಜನತೆ ಇಂತಹ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ಗೂಗಲ್ ಕ್ಲೌಡ್ ಫೆಸಿಲಿಟೇಟರ್ ವಿ. ಶ್ರೀನಿವಾಸ್ ಮತ್ತು ಅಸೋಸಿಯೇಟ್ ಪ್ರೋಗ್ರಾಮ್ ಮ್ಯಾನೇಜರ್ @ಹ್ಯಾಕ್ 2 ಸ್ಕಿಲ್‌ನ ಕುಶಾಗ್ರ ಟೆಂಡನ್ ಕಾರ್ಯಾಗಾರ ನಡೆಸಿಕೊಟ್ಟರು. ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರಕಾಶ್ ಕುಮಾರ್, ಉಪನ್ಯಾಸಕಿ ಹೇಮಾ ಶುಭಾಷಿನಿ ಹಾಗೂ ಜಿಡಿಜಿಓಸಿ ಸಂಘಟಕ ಸಚಿನ್ ಉಪ್ಪರ್ಣ ಇದ್ದರು.

ವಿದ್ಯಾರ್ಥಿನಿ ಶ್ರೀಜಾ ಸ್ವಾಗತಿಸಿದರು. ಬಿ. ಜಯಂತ್ ಸುಧಾನ್ವ ಪೈ ವಂದಿಸಿದರು. ಕಂಪ್ಯೂಟರ್ ಲ್ಯಾಬ್ ಸಹಾಯಕಿ ನಿರೀಕ್ಷಾ. ಹೆಚ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ದಿಶಾ ಕೆ. ಕಾರ್ಯಕ್ರಮ ನಿರೂಪಿಸಿದರು.