ಸಾರಾಂಶ
ಹೋಬಳಿಯ ಸೊಣ್ಣಹಳ್ಳಿಪುರದ ಅಕ್ಕಮಹಾದೇವಿ ಮಹಿಳಾ ಸ್ವ-ಸಹಾಯ ಗುಂಪಿಗೆ ಭೇಟಿ ನೀಡಿ ಕ್ರಿಯಾ ಚಟುವಟಿಕೆಗಳು ಹಾಗೂ ಉತ್ಪನ್ನಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮಹಿಳೆಯರ ಅಭಿವೃದ್ಧಿಗಾಗಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿದ್ದು, ಯೋಜನೆಗಳನ್ನು ಪರಿಪೂರ್ಣವಾಗಿ ಬಳಸಿಕೊಂಡು ಮಹಿಳೆಯರು ಆರ್ಥಿಕ ಸಬಲರಾಗಬೇಕು.
ಸೂಲಿಬೆಲೆ: ಮಹಿಳೆ ಮತ್ತು ಪುರುಷ ಎಂಬ ಬೇಧವಿಲ್ಲದೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಕ್ರಿಯರಾಗಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಹೇಳಿದರು.
ಹೋಬಳಿಯ ಸೊಣ್ಣಹಳ್ಳಿಪುರದ ಅಕ್ಕಮಹಾದೇವಿ ಮಹಿಳಾ ಸ್ವ-ಸಹಾಯ ಗುಂಪಿಗೆ ಭೇಟಿ ನೀಡಿ ಕ್ರಿಯಾ ಚಟುವಟಿಕೆಗಳು ಹಾಗೂ ಉತ್ಪನ್ನಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮಹಿಳೆಯರ ಅಭಿವೃದ್ಧಿಗಾಗಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿದ್ದು, ಯೋಜನೆಗಳನ್ನು ಪರಿಪೂರ್ಣವಾಗಿ ಬಳಸಿಕೊಂಡು ಮಹಿಳೆಯರು ಆರ್ಥಿಕ ಸಬಲರಾಗಬೇಕು ಎಂದು ಕರೆ ನೀಡಿದರು.ಲಕ್ಕೊಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಮ್ಮ ಅಕ್ಕಮಹಾದೇವಿ ಸ್ವ-ಸಹಾಯ ಮಹಿಳಾ ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದು, ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಉತ್ತಮ ಸ್ವ-ಸಹಾಯ ಗುಂಪು ಇದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಶಾಂತಮ್ಮ, ಮಹಿಳಾ ಅಭಿವೃದ್ಧಿ ನಿಗಮದ ವಿಜಯಕುಮಾರಿ, ಅಕ್ಕಮಹಾದೇವಿ ಸಂಘದ ಭಾರತಮ್ಮ, ಪದ್ಮ, ಶೈಲಾ, ಜಗದಾಂಬ, ಅಕ್ಕಯಮ್ಮ, ವೆಂಕಟಲಕ್ಷ್ಮಿ ಸಹಾಯಕ ಮಹೇಶ್, ಸಹದೇಶ್ ಇತರರಿದ್ದರು.