ಮಲ್ಲಯ್ಯಕಂಬಿಯ ಐದೇಶಿ: ಭವ್ಯ ಮೆರವಣಿಗೆ

| Published : May 14 2024, 01:06 AM IST

ಸಾರಾಂಶ

ಗುಳೇದಗುಡ್ಡ: ಮಲ್ಲಯ್ಯ ಕಂಬಿಯ ಐದೇಶಿ ಕಾರ್ಯಕ್ರಮ ಪಟ್ಟಣದ ಸಂಗನಬಸವೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ಭಾನುವಾರ ನಡೆಯಿತು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ:

ಮಲ್ಲಯ್ಯಕಂಬಿಯ ಐದೇಶಿ ಕಾರ್ಯಕ್ರಮ ಪಟ್ಟಣದ ಸಂಗನಬಸವೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ಭಾನುವಾರ ನಡೆಯಿತು.

ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಭಕ್ತ ಮಂಡಳಿಯಿಂದ ಹೊಸಪೇಟೆಯ ಸಂಗನಬಸವೇಶ್ವರ ಗದ್ದುಗೆಯಲ್ಲಿ ಬೋರಮ್ಮ ಆಚರಿಸುವ ಕಾರ್ಯಕ್ರಮದ ನಿಮಿತ್ತ ಪಟ್ಟಣದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು. ಇಲ್ಲಿನ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭಗೊಂಡ ಐದೇಶಿ ಕಾರ್ಯಕ್ರಮದ ಮೆರವಣಿಗೆ ಹೊಸಪೇಟೆ ಕ್ರಾಸ್, ಹರದೊಳ್ಳಿ, ಸಾಲೇಶ್ವರ ದೇವಸ್ಥಾನ ಮೂಲಕ ಹಾಯ್ದು ಸಂಗನಬಸವೇಶ್ವರ ಗದ್ದುಗೆ ತಲುಪಿತು. ಐದೇಶಿ ಕಾರ್ಯಕ್ರಮದ ನಿಮಿತ್ತ ಸಂಗನಬಸವೇಶ್ವರ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ರವಿ ಅಲದಿ, ಈರಣ್ಣಚಿಂದಿ, ಈರಣ್ಣ ಶ್ಯಾವಿ, ಪರಪ್ಪ ಐವಳ್ಳಿ, ಬಸವರಾಜಚಿಂದಿ, ಮಲ್ಲಯ್ಯ ಮಠಪತಿ, ನೀಲಪ್ಪ ಉಂಕಿ, ಈರಣ್ಣಕುಂಬಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.