ಸಾರಾಂಶ
ಐತಿಹಾಸಿಕ ಐಹೊಳೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಮಹಾರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ಬೆಳಗ್ಗೆ ಶ್ರೀ ರಾಮಲಿಂಗೇಶ್ವರ ದೇವರಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಕಳಸದ ಮೆರವಣಿಗೆ ಜರುಗಿತು. ಸಂಜೆ 6 ಗಂಟೆಗೆ ಮಹಾ ರಥೋತ್ಸವ ಜರುಗಿತು.
ಕನ್ನಡಪ್ರಭ ವಾರ್ತೆ ಅಮೀನಗಡ
ಐತಿಹಾಸಿಕ ಐಹೊಳೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಮಹಾರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ಬೆಳಗ್ಗೆ ಶ್ರೀ ರಾಮಲಿಂಗೇಶ್ವರ ದೇವರಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಕಳಸದ ಮೆರವಣಿಗೆ ಜರುಗಿತು. ಸಂಜೆ 6 ಗಂಟೆಗೆ ಮಹಾ ರಥೋತ್ಸವ ಜರುಗಿತು.ರಥೋತ್ಸವದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಯುವರಾಜ ಎಂ.ದೇಸಾಯಿ, ಬಿ.ಸಿ. ಅಂಟರತಾನಿ, ಗುತ್ತಿಗೆದಾರರಾದ ಸಿದ್ದು ಹಿರೇಮಠ (ನಿಂಬಲಗುಂದಿ), ಸಿದ್ದು ಹೂಗಾರ, ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಮಾಲಗಿತ್ತಿ, ದ್ಯಾವಪ್ಪ ಆಸಂಗಿ, ಪರಸಪ್ಪ ಕುರಿ, ವಿಶಾಲ ದೇಸಾಯಿ, ಅಮರೇಶ ನಾಶಿ, ನಾಗನಗೌಡ ಪಾಟೀಲ, ಪ್ರವಾಸಿ ಮಾರ್ಗದರ್ಶಿಗಳಾದ ಪರಶುರಾಮ ಗೋಡಿ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿ ರಥಕ್ಕೆ ಉತ್ತತ್ತಿ, ಖರ್ಜೂರ ಎಸೆದು ಭಕ್ತಿ ಸಮರ್ಪಿಸಿದರು. ರಾತ್ರಿ 10 ಗಂಟೆಗೆ ಪರಶುರಾಮ ಮಾದರ ವಿರಚಿತ ರಥ ಹೊತ್ತ ನೇಗಿಲು ನಾಟಕ ಪ್ರದರ್ಶನ ಜರುಗಿತು.