ಔರಾದ್ ಕ್ಷೇತ್ರದಿಂದ 1.20ಲಕ್ಷ ಸದಸ್ಯರನ್ನಾಗಿಸುವ ಗುರಿ

| Published : Sep 21 2024, 02:10 AM IST

ಸಾರಾಂಶ

ಕಮಲನಗರ ಪಟ್ಟಣದ ಬಸವ ಫಂಕ್ಷನ್ ಹಾಲನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಭಾರತೀಯ ಜನತಾ ಪಕ್ಷದಿಂದ ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಔರಾದ್ ಕ್ಷೇತ್ರದಿಂದ 1.20ಲಕ್ಷ ಸದಸ್ಯರನ್ನಾಗಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದರು.

ಶುಕ್ರವಾರ ಠಾಣಾ ಕುಶನೂರ, ಕಮಲನಗರ, ಬೆಳಕುಣಿ(ಭೊ) ಮಹಾ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿ, ಅಧ್ಯಕ್ಷರು ಹಾಗೂ ಪ್ರಮುಖ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದರು.

ಇಲ್ಲಿಯವರೆಗೆ 86 ಸಾವಿರ ಸದಸ್ಯರು ನೋಂದಾಯಿಸಿದ್ದಾರೆ. ಉಳಿದ 34 ಸಾವಿರ ಸದಸ್ಯತ್ವ ನೊಂದಣಿ ಸೆ.26ರ ವರೆಗೆ ಪೂರ್ಣಗೊಳಿಸಲು ಎಲ್ಲರೂ ಅಭಿಯಾನ ಇನ್ನಷ್ಟು ಚುರುಕುಗೊಳಿಸುವಂತೆ ಶುಕ್ರವಾರ ನಡೆದ ಅಭಿಯಾನದಲ್ಲಿ ಕರೆ ನೀಡಿದರು.

ದೇಶದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕೆಂಬ ಸಂಕಲ್ಪದೊಂದಿಗೆ ಸದಸ್ಯರನ್ನಾಗಿ ಮಾಡುವವರಿಗೆ ನಾನು ವೈಯಕ್ತಿಕವಾಗಿ ಧನಸಹಾಯ ಹಾಗೂ ಸನ್ಮಾನ ಮಾಡುತ್ತಿದ್ದು, ರಾಜ್ಯಾಧ್ಯಕ್ಷರು ಕೂಡ ಸನ್ಮಾನಿಸುವರು. ಹಾಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಹುರುಪಿನಿಂದ ಮತ್ತು ಆಸಕ್ತಿಯಿಂದ ಕೆಲಸ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ, ಶಿವಾಜಿ ಪಾಟಿಲ್ ಮುಂಗನಾಳ, ಮುಖಂಡರಾದ ಶಿವಾನಂದ ವಡ್ಡೆ , ಎಪಿಎಮ್.ಸಿ ಮಾಜಿ ಅಧ್ಯಕ್ಷ ರಂಗರಾವ ಜಾಧವ, ಮಲ್ಲಪ್ಪಾ ದಾನಾ, ನಾಗೇಶ ಪತ್ರೆ, ಸುಭಾಷ ಗಾಯಕವಾಡ, ಯುವರಾಜ ರಾಂಪುರೆ, ಸಂತೊಷ ಸೊಲಾಪುರೆ ದೇವಿದಾಸ, ಕಲ್ಲೇಶ ಉದಗಿರೆ ಹಾಗೂ ಮುಂತಾದ ಕಾರ್ಯಕರ್ತರು ಹಾಜರಿದ್ದರು.