ಸಾರಾಂಶ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನೊಳಗಿದ್ದಿ ನಾಲ್ವರೂ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದರು.
ಕನ್ನಡಪ್ರಭ ವಾರ್ತೆ. ಮಂಡ್ಯ
ಕಾರೊಂದಕ್ಕೆ ಹಿಂದಿನಿಂದ ವೇಗವಾಗಿ ಬಂದ ಐರಾವತ ಬಸ್ ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ತೂಬಿನಕೆರೆ ಬಳಿ ಗುರುವಾರ ನಡೆದಿದೆ.ಬೆಂಗಳೂರಿನ ಜೆ.ಪಿ.ನಗರ ನಿವಾಸಿಗಳಾದ ಸತ್ಯಾನಂದರಾಜೇ ಅರಸ್, ಪತ್ನಿ ನಿಶ್ಚಿತಾ, ಸಹೋದರ ಚಂದ್ರರಾಜೇ ಅರಸ್, ಪತ್ನಿ ಸುವೇದಿನಿ ರಾಣಿ ಅಪಘಾತದಲ್ಲಿ ಮೃತಪಟ್ಟವರು.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮದಲ್ಲಿ ನೆಲೆಸಿದ್ದ ಸೋದರ ಮಾವ ಸತ್ಯಾನಂದರಾಜೇ ಅರಸ್ ಮೃತಪಟ್ಟಿದ್ದರಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಾಲ್ವರು ಬೆಂಗಳೂರಿನಿಂದ ತೆರಳುತ್ತಿದ್ದರು. ಕಾರು ಚಾಲನೆ ಮಾಡುತ್ತಿದ್ದ ಚಂದ್ರರಾಜೇ ಅರಸ್ ಅವರು ತೂಬಿನಕೆರೆ ಬಳಿಯ ಎಕ್ಸಿಟ್ ಪಾಯಿಂಟ್‌ಗೆ ಬಂದ ಸಮಯದಲ್ಲಿ ಗೊಂದಲಕ್ಕೊಳಗಾಗಿ ಕಾರನ್ನು ನಿಧಾನ ಮಾಡಿದ ವೇಳೆ ಹಿಂದಿನಿಂದ ವೇಗವಾಗಿ ಬಂದ ಐರಾವತ ಬಸ್ ಕಾರಿಗೆ ಅಪ್ಪಳಿಸಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನೊಳಗಿದ್ದಿ ನಾಲ್ವರೂ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದರು. ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.೩ಕೆಎಂಎನ್‌ಡಿ-೪ಅಪಘಾತದಲ್ಲಿ ನಜ್ಜಗುಜ್ಜಾಗಿರುವ ಕಾರು.೩ಕೆಎಂಎನ್‌ಡಿ-೫ಕ್ರೇನ್ ಸಹಾಯದಿಂದ ಕಾರನ್ನು ಹೆದ್ದಾರಿಇಯಿಂದ ತೆರವುಗೊಳಿಸುತ್ತಿರುವ ದೃಶ್ಯ.
;Resize=(128,128))
;Resize=(128,128))
;Resize=(128,128))
;Resize=(128,128))