ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಎ. ಸಿ. ಚಂದ್ರಪ್ಪ

| Published : May 15 2024, 01:41 AM IST

ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಎ. ಸಿ. ಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಎ. ಸಿ. ಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಎ. ಸಿ. ಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು. ಕಸಬಾ ಹೋಬಳಿ ಕಾಟಿಗನೆರೆ ಗ್ರಾಮದಲ್ಲಿ ಇದೇ 19 ರಂದು ನಡೆಯುವ ತಾಲೂಕು ಸಮ್ಮೇಳನಕ್ಕೆ ಎ . ಸಿ. ಚಂದ್ರಪ್ಪ ಅವರನ್ನು ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೊಸ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಫಲಪುಷ್ಪನೀಡಿ ಸಮ್ಮೇಳನಕ್ಕೆ ಸ್ವಾಗತ ನೀಡಿಮಾತನಾಡಿದರು. ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷರಾಗಿ ಎ. ಸಿ. ಚಂದ್ರಪ್ಪ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಎಂದು ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್. ಆರ್. ಚಂದ್ರಪ್ಪ ಮಾತನಾಡಿ ಕಲೆ ನಾಡು ನುಡಿ ಸಾಹಿತ್ಯ ಸಂಗೀತ ಈ ಪರಂಪರೆ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಎ. ಸಿ. ಚಂದ್ರಪ್ಪ ಕೈಜೋಡಿಸಿದ್ದಾರೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಹ. ಪುಟ್ಟಸ್ವಾಮಿ ಮಾತನಾಡಿ ಇದುವರೆಗೂ ನೂರಾರು ನಾಟಕಗಳಲ್ಲಿ ಅಭಿನಯಿಸಿ ಹಾಗೆ ಜಮುರ ನಾಟಕ ತಂಡ ತರುಳುಬಾಳು ಶಿವಕುಮಾರ ಕಲಾಸಂಘಯಿಂದ ಹಲವು ನಾಟಕಗಳನ್ನು ಈ ಭಾಗದಲ್ಲಿ ಪ್ರದರ್ಶನ ಮಾಡಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಯಾವುದೇ ಸಂಘ-ಸಂಸ್ಥೆಗಳಲ್ಲು ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು ಕಳೆದ 40 ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ ನಾಟಕ ಇದರ ಪೋಷಕರಾಗಿ ಈ ಭಾಗದಲ್ಲಿ ಜನಮನ್ನಣೆ ಗಳಿಸಿದ್ದಾರೆ ಶ್ರೀಯುತರನ್ನು ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಿನ ಎಲ್ಲಾ ಪದಾಧಿಕಾರಿಗಳ ಪೂರ್ಣ ಒಮ್ಮತದಿಂದ ಸಮ್ಮೇಳನ ಅಧ್ಯಕ್ಷರ ಆಯ್ಕೆ ಜರುಗಿದೆ ಎಂದು ತಿಳಿಸಿದರು.ತಾಲೂಕಿನ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಸಾಧಕರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ಗೌರವಿಸಲಿದ್ದಾರೆ. ಎಂದು ತಿಳಿಸಿದರು.

ಸಮ್ಮೇಳನದ ಸ್ವಾಗತ ಸಮಿತಿಯ ಮಹಾ ಪೋಷಕರಾದ ಕಾಟಿಗನೆರೆ ಗ್ರಾಮದ ನಿವೃತ್ತ ಶಿಕ್ಷಕ ಜಿ. ಉಮಾಪತಿ ಆರಾಧ್ಯ , ಸಿ ಶಿವಪ್ರಸಾದ್ ಕಸಬಾ ಹೋಬಳಿಯ ಕಸಾಪ ಅಧ್ಯಕ್ಷ ಜಿ. ಎಲ್. ಮಂಜುನಾಥ್ ಹಾಗೂ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಎಸ್ ಗಾಯತ್ರಮ್ಮ ಎ ಬಿ ನವೀನ್ ಮತ್ತು ಮೋಹನ್ ಜಾದವ್ ಕಾಂತೇಶ್ ಜಿ. ಆರ್ ಮಂಜಪ್ಪ ಹ. ಪುಟ್ಟಸ್ವಾಮಿ. ಟಿ. ಸಿ. ಶಿವಕುಮಾರ್ ಹಾಗೂ ಪಂಚಾಕ್ಷರಿ, ಎಂ. ಸಿ. ಭೈರಲಿಂಗಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಚಿಕ್ಕ ನಲ್ಲೂರು ಎಸ್. ಪರಮೇಶ್. ಲೋಕೇಶ್. ಶಾರದಾ, ಸಾವಿತ್ರಮ್ಮ ಚಂದ್ರಪ್ಪ, ಎ. ಸಿ. ಚೇತನ್ , ಎ. ಸಿ. ಮಂಜುನಾಥ್ ಉಪಸ್ಥಿತರಿದ್ದರು.