ಕನ್ನಡಪ್ರಭ ವಾರ್ತೆ ಬೆಂಗಳೂರು

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ನೊಣವಿನಕೆರೆ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಡಾ.ಬಿ.ಆರ್‌ ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್‌, ಯು.ಟಿ. ಖಾದರ್, ಬೈರತಿ ಸುರೇಶ್, ಶರಣ್‌ ಪ್ರಕಾಶ್ ಪಾಟೀಲ್‌ ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.


ಎಂ.ಬಿ. ಪಾಟೀಲ್‌ ಅವರು ‘ಬಸವಣ್ಣ, ಬಸವಾದಿ ಶರಣರು ಹಾಗೂ ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮೀಜಿ’ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.

ಈಶ್ವರ್ ಖಂಡ್ರೆ ಅವರು ಚನ್ನಬಸವ ಪಟ್ಟದೇವರು, ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದರು.

ಬಾಕ್ಸ್..

ಪ್ರತಿಜ್ಞಾವಿಧಿ ಬಿಟ್ಟು ಬೇರೆ ಓದುವಂತೆ ರಾಜ್ಯಪಾಲರ ಸೂಚನೆ:

ಪ್ರಮಾಣವಚನ ಸ್ವೀಕಾರದ ವೇಳೆ ಎಂ.ಬಿ. ಪಾಟೀಲ್ ಅವರು, ‘ಬಸವಣ್ಣ , ಬಸವಾದಿ ಶರಣರು, ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮೀಜಿ’ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದರಿಂದ ಗೊಂದಲಗೊಂಡ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರು ಪ್ರತಿಜ್ಞಾವಿಧಿ ಬೋಧನೆ ಪತ್ರದಲ್ಲಿರುವುದನ್ನು ಮಾತ್ರ ಓದುವಂತೆ ಸೂಚಿಸಿದರು. ಇದನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಸಚಿವರ ಗಮನಕ್ಕೆ ತಂದರು.

ಹೀಗಾಗಿ ಸತೀಶ್ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ ಅವರ ಯಾರ ಹೆಸರೂ ಹೇಳದೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದಷ್ಟೇ ಹೇಳಿದರು. ರಾಜ್ಯಪಾಲರು ಈ ಸೂಚನೆ ನೀಡುವ ಮೊದಲೇ ಪ್ರಮಾಣವ ಸ್ವೀಕರಿಸಿದ್ದ ರಾಮಲಿಂಗಾರೆಡ್ಡಿ ಅವರೂ ಯಾರ ಹೆಸರನ್ನೂ ಪ್ರಸ್ತಾಪ ಮಾಡಿರಲಿಲ್ಲ.

ಬಾಕ್ಸ್..ಪುತ್ರನನ್ನೇ ದಿಟ್ಟಿಸುತ್ತಾ ಕುಳಿತ ಸಿದ್ದು:ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲು ಬರುತ್ತಿದ್ದಂತೆ ಪಕ್ಕದಲ್ಲಿ ಕುಳಿತಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಬು ಬಕ್ರು ಅವರಿಗೆ ಸಿದ್ದರಾಮಯ್ಯ ತಮ್ಮ ಪುತ್ರನತ್ತ ಕೈ ಮಾಡಿ ತೋರಿಸಿದರು. ಪುತ್ರ ಪ್ರಮಾಣವಚನ ಸ್ವೀಕರಿಸುವುದನ್ನು ತದೇಕಚಿತ್ತದಿಂದ ಸಿದ್ದರಾಮಯ್ಯ ನೋಡುತ್ತಾ ಕುಳಿತಿದ್ದರು. ಬಳಿಕ ಯತೀಂದ್ರ ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಾಗ ಭುಜ ತಟ್ಟಿ ಸಿದ್ದರಾಮಯ್ಯ ಪುತ್ರನಿಗೆ ಹಾರೈಸಿದರು.

ಬಳಿಕ ಪ್ರಮಾಣವಚನ ಸ್ವೀಕರಿಸಿದ ಬೈರತಿ ಸುರೇಶ್‌ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಕಾಲಿಗೆ ನಮಸ್ಕರಿಸಿದರು.ಬಾಕ್ಸ್...ಬಾಕ್ಸ್..

ಇನ್ಫಿ ಮೂರ್ತಿ, ಸುಧಾಮೂರ್ತಿ ಕಾಲಿಗೆರಗಿದ ಸಿಎಂ:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರತಿಜ್ಞಾವಿಧಿ ಸ್ವೀಕರಿಸುವ ಮೊದಲು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ, ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಇದೇ ವೇಳೆ ಮೋಹನ್‌ದಾಸ್‌ ಪೈ ಸೇರಿದಂತೆ ವಿವಿಧ ಉದ್ಯಮಿಗಳ ಕೈ ಕುಲುಕಿದರು.ಇದಕ್ಕೂ ಮೊದಲು ವಿವಿಧ ಸ್ವಾಮೀಜಿಗಳ ಜತೆಗೆ ಎಸ್‌.ಎಂ. ಕೃಷ್ಣ ಪತ್ನಿ ಪ್ರೇಮಾ ಕೃಷ್ಣ ಸೇರಿದಂತೆ ಹಿರಿಯರ ಕಾಲಿಗೆ ಡಿ.ಕೆ. ಶಿವಕುಮಾರ್‌ ನಮಸ್ಕರಿಸಿದರು.ಬಾಕ್ಸ್...

ಸಿದ್ದು ಆಶೀರ್ವಾದ ಪಡೆದ ಡಿಕೆಶಿ ಪತ್ನಿ ಹಾಗೂ ಮಕ್ಕಳು:ಡಿ.ಕೆ. ಶಿವಕುಮಾರ್‌ ಪತ್ನಿ ಉಷಾ, ಪುತ್ರ ಹಾಗೂ ಪುತ್ರಿ ಐಶ್ವರ್ಯಾ ಸಿದ್ಧಾರ್ಥ್‌ ಹೆಗ್ಡೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.ಬಾಕ್ಸ್..ಕಾರ್ಯಕ್ರಮದ ನಡುವೆಯೇ ಎದ್ದು ಹೋದ ಜಮೀರ್‌, ನಸೀರ್:

ಮೊದಲ ಹಂತದ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡಿರುವ ನಸೀರ್ ಅಹ್ಮದ್‌ ಅವರು ಕಾರ್ಯಕ್ರಮದ ನಡುವೆಯೇ ಎದ್ದು ಹೋದರು.

ಯು.ಟಿ. ಖಾದರ್‌ ಪ್ರತಿಜ್ಞಾವಿಧಿ ಪೂರ್ಣಗೊಂಡು ಈಶ್ವರಖಂಡ್ರೆ ಅವರ ಪ್ರಮಾಣವಚನ ನಡೆಯುತ್ತಿದ್ದಾಗ ಎದ್ದು ಹೊರ ನಡೆದರು.ಬಾಕ್ಸ್...

ಲೋಕಭವನದಲ್ಲಿ ತಿರುಪತಿ ಲಡ್ಡು ವಿತರಣೆ:

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಲೋಕಭವನದಲ್ಲಿ ಅಭಿಮಾನಿಗಳು ತಿರುಪತಿ ಲಡ್ಡುಗಳನ್ನು ವಿತರಣೆ ಮಾಡಿದರು.

ಬಾಕ್ಸ್...

ಪ್ರಮಾಣವಚನಕ್ಕೆ ತಾರೆಯರ ಮೆರುಗು:

ನಟ ಶಿವರಾಜ್‌ ಕುಮಾರ್, ಕಿಚ್ಚ ಸುದೀಪ್‌, ಮಾಜಿ ಸಂಸದೆ, ನಟಿ ರಮ್ಯಾ, ನಟ ಡಾಲಿ ಧನಂಜಯ್‌, ನಟಿಯರಾದ ರಾಗಿಣಿ ದ್ವಿವೇದಿ, ನಾಗತಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ನಟರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸೇರಿದಂತೆ ಹಲವರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಾಕ್ಸ್..

ನಮ್ಮ ಹಸ್ಪೆಂಡ್‌ಗೆ ಆಲ್‌ ದಿ ಬೆಸ್ಟ್‌:

ನಮ್ಮ ಹಸ್ಬೆಂಡ್‌ಗೆ ಆಲ್‌ ದಿ ಬೆಸ್ಟ್‌ ಹೇಳ್ತಿದಿನಿ. ಕರ್ನಾಟಕ ಜನತೆಗೆ ಒಳ್ಳೆಯ ಕೆಲಸ ಮಾಡಲಿ. ರಾಜ್ಯವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಕೊಂಡೊಯ್ಯಲಿ ಅವರಿಗೆ ಶುಭವಾಗಲಿ ಎಂದು ಡಿ.ಕೆ. ಶಿವಕುಮಾರ್‌ ಅವರ ಪತ್ನಿ ಉಷಾ ಹೇಳಿದರು.ಬಾಕ್ಸ್..

ಜವಾಬ್ದಾರಿ ಹೆಚ್ಚಾಗಿದೆ: ಡಿಕೆ ಪುತ್ರಿ

ನಮ್ಮ ತಂದೆ ಮುಖ್ಯಮಂತ್ರಿ ಆಗಿರುವುದು ಖುಷಿಯಾಗಿದೆ. ಇದು ಕನಸು ಎನ್ನುವುದಕ್ಕಿಂತ ದೊಡ್ಡ ಜವಾಬ್ದಾರಿ. ಎಲ್ಲರಂತೆ ನಾನು ಸಹ ಅವರ ಆಡಳಿತ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಹೆಳಿದರು.