ಡಿ. 9,10ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಅಧಿವೇಶನ

| Published : Nov 08 2023, 01:00 AM IST

ಡಿ. 9,10ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಅಧಿವೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಗಮಕ ವಾಚನ, ವಿಚಾರ ಗೋಷ್ಠಿ, ಪ್ರಶಸ್ತಿ ಪ್ರದಾನ, ತಾಳಮದ್ದಲೆ, ಬಹುಭಾಷಾ ಕವಿಗೋಷ್ಠಿ ಮುಂತಾದವು ನಡೆಯಲಿವೆ.

ಯಲ್ಲಾಪುರ:

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್‌ಗಳ ಆಶ್ರಯದಲ್ಲಿ ಡಿ. ೯, ೧೦ರಂದು ೨ ದಿನಗಳ ಜಿಲ್ಲಾಮಟ್ಟದ ಅಧಿವೇಶನ ನಡೆಯಲಿದೆ. ಈ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಅಧ್ಯಕ್ಷತೆಯಲ್ಲಿ ಯಲ್ಲಾಪುರದ ಸಂಸ್ಕೃತಿ ನಿವಾಸದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಅಧಿವೇಶನವನ್ನು ಡಿ. ೯ರಂದು ಬೆಳಗ್ಗೆ ಸುವರ್ಣ ಸುದ್ದಿವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ ಉದ್ಘಾಟಿಸಲಿದ್ದು, ಗಮಕ ಕಲಾ ಪರಿಷತ್ತಿನ ರಾಜ್ಯಾಧ್ಯಕ್ಷೆ ಗಂಗಮ್ಮಾ ಕೇಶವಮುರ್ತಿ, ರೋಹಿತ್ ಚಕ್ರತೀರ್ಥ, ಡಾ. ಕೇಶವ ಕುರ್ಸೆ, ಡಾ. ಶಿವರಂಜಿನಿ ಮೈಸೂರು, ಹರಿಪ್ರಕಾಶ ಕೋಣೇಮನೆ ಸೇರಿದಂತೆ ಹಲವು ಗಣ್ಯರು, ಕವಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.ಸಂಸ್ಕೃತ ಸಾಹಿತ್ಯದಲ್ಲಿ ಪರಿಸರ ವಿಷಯದಡಿ ೨ ದಿನಗಳ ಕಾರ್ಯಕ್ರಮ ಸಂಯೋಜಿಸಲಾಗಿದೆ. ಈ ವೇಳೆ ಗಮಕ ವಾಚನ, ವಿಚಾರ ಗೋಷ್ಠಿ, ಪ್ರಶಸ್ತಿ ಪ್ರದಾನ, ತಾಳಮದ್ದಲೆ, ಬಹುಭಾಷಾ ಕವಿಗೋಷ್ಠಿ ಮುಂತಾದವು ನಡೆಯಲಿವೆ.ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಶ್ರೀರಂಗ ಕಟ್ಟಿ, ಗಣಪತಿ ಕಂಚೀಪಾಲ, ಡಿ.ಜಿ. ಹೆಗಡೆ. ಎಂ.ಆರ್. ಹೆಗಡೆ, ಮುಕ್ತಾ ಶಂಕರ, ಚಂದ್ರಕಲಾ ಭಟ್ಟ, ಕೃಷ್ಣ ಭಟ್ಟ ನಾಯ್ಕನಕೆರೆ, ಶ್ರೀರಾಮ ಲಾಲಗುಳಿ, ನಾಗರಾಜ ಮದ್ಗುಣಿ, ಅಜಯ ಭಾರತೀಯ, ಚಂದ್ರಶೇಖರ ಸಿ.ಎಸ್, ಎಂ. ರಾಜಶೇಖರ, ಶುಭಾ ಗಿರಣೀಮನೆ, ವಿದ್ಯಾ ದಿವಾಕರಮನೆ, ಗಣಪತಿ ಹೆಗಡೆ, ಸಮರ್ಥ ಜಮಗುಳಿ ಸಭೆಯಲ್ಲಿ ಉಪಸ್ಥಿತರಿದ್ದರು.