ಆದಿವಾಸಿ, ಅಲೆಮಾರಿ, ಬುಡಕಟ್ಟು ಮಕ್ಕಳಿಗೆ ಬ್ಯಾಕ್‌, ಪುಸ್ತಕ ವಿತರಣೆ

| Published : Aug 02 2025, 12:00 AM IST

ಆದಿವಾಸಿ, ಅಲೆಮಾರಿ, ಬುಡಕಟ್ಟು ಮಕ್ಕಳಿಗೆ ಬ್ಯಾಕ್‌, ಪುಸ್ತಕ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

. ನಮ್ಮ ಕಾಲದಲ್ಲಿ ಬೋಧನೆ ಬಿಡಿ ಕನಿಷ್ಠ ಮಕ್ಕಳು ಒಂದೇ ಸ್ಥಳದಲ್ಲಿ ಶಿಸ್ತಿನಿಂದ ಕುಳಿತುಕೊಳ್ಳುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆ

ಮಡಿಲು ಸೇವಾ ಟ್ರಸ್ಟ್ ಅಕ್ಷರ ಮಡಿಲು ಶೈಕ್ಷಣಿಕ ಕಾರ್ಯಕ್ರಮವನ್ನು ತಾಲೂಕಿನ ಸೋನಹಳ್ಳಿಯಲ್ಲಿ ಆಯೋಜಿಸಿ, ಆದಿವಾಸಿ, ಅಲೆಮಾರಿ, ಬುಡಕಟ್ಟು, ಕೃಷಿ ಕಾರ್ಮಿಕರ ಮಕ್ಕಳಿಗೆ ಉಚಿತ ಬ್ಯಾಗ್, ಪುಸ್ತಕಗಳು, ಲೇಖನ ಸಾಮಗ್ರಿಗಳು ಮತ್ತು ಅಧ್ಯಯನ ಸಾಮಗ್ರಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಜೇನುಕುರುಬ ಸಮಾಜದ ಮುಖಂಡ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಉದ್ಘಾಟಿಸಿ ಮಾತನಾಡಿ, ಮಡಿಲು ಸಂಸ್ಥೆಯು ನಮ್ಮ ಆದಿವಾಸಿ ಮಕ್ಕಳನ್ನು ಶೈಕ್ಷಣಿಕವಾಗಿ ಹಾಗೂ ಇಷ್ಟು ಶಿಸ್ತುಬದ್ಧವಾಗಿ ತಯಾರು ಮಾಡಿರುವುದನ್ನು ಕಂಡು ಬಹಳ ಸಂತೋಷವಾಗುತ್ತಿದೆ. ನಮ್ಮ ಕಾಲದಲ್ಲಿ ಬೋಧನೆ ಬಿಡಿ ಕನಿಷ್ಠ ಮಕ್ಕಳು ಒಂದೇ ಸ್ಥಳದಲ್ಲಿ ಶಿಸ್ತಿನಿಂದ ಕುಳಿತುಕೊಳ್ಳುತ್ತಿರಲಿಲ್ಲ. ನಮ್ಮ ಕಾಲದಲ್ಲಿ ಶಾಲೆಗಳೇ ಇರುತ್ತಿರಲಿಲ್ಲ ಮತ್ತು ಬಸ್ ನಲ್ಲಿ ಬರೆದಿರುವ ಊರಿನ ಹೆಸರು ತಿಳಿಯುತ್ತಿರಲಿಲ್ಲ. ಆದ್ದರಿಂದ ನಾವೆಲ್ಲರೂ ಹೋರಾಟ ಮಾಡಿ ಕನಿಷ್ಠ ಬಸ್ ನಲ್ಲಿ ಪ್ರಯಾಣಿಸುವ ಬಗ್ಗೆ ಮತ್ತು ಮೂಲಭೂತ ಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು, ವಯಸ್ಕರ ಶಿಕ್ಷಣವನ್ನು ಪ್ರಾರಂಭಿಸಿದೆವು. ಹಾಡುಗಳಲ್ಲಿ ಸಂಜೆಯ ಸಮಯದಲ್ಲಿ ವಯಸ್ಕರ ಶಿಕ್ಷಣ ( ಎನ್ .ವೈ.ಕೆ.) ಜೊತೆಗೂಡಿ ಜನರಿಗೆ ಕನಿಷ್ಠ ತಮ್ಮ ಹೆಸರು ಹಾಗೂ ಊರುಗಳ ಹೆಸರನ್ನು ಗುರುತಿಸಲು ಹಾಗೂ ಬರೆಯಲು ಕಲಿಸುತ್ತಿದ್ದೆವು ಮತ್ತು ಮಕ್ಕಳಿಗಾಗಿ ಅಂಗನವಾಡಿ ತೆರೆಸಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಹೇಳಿದರು.

ಮಡಿಲು ಸಂಸ್ಥೆಯು ಇನ್ನು ಹೆಚ್ಚು ಕಲಿಕಾ ಕೇಂದ್ರಗಳನ್ನು ತೆರದು ಇನ್ನೂ ಅವರ ಕಾರ್ಯಕ್ರಮಗಳು ವಿಸ್ತಾರವಾಗಬೇಕು. ಇಂತಹ ಸಂಸ್ಥೆಗಳು ಹೊಸ ಬದಲಾವಣೆಯನ್ು ತರುತ್ತಿವೆ. ಮಡಿಲು ಸಂಸ್ಥೆಯು ಅಕ್ಷರ ಮಡಿಲು ಶೈಕ್ಷಣಿಕ ಕಾರ್ಯಕ್ರಮ ಪರಿಚಯಿಸಿ ಉಚಿತ ಬ್ಯಾಗ್, ಪುಸ್ತಕ, ಲೇಖನ ಸಾಮಗ್ರಿಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಮೂಲಕ ಉತ್ತಮ ಕೆಲಸ ಮಾಡಿದೆ. ಒಂದು ಬಾರಿ ಮಾತ್ರವಲ್ಲದೆ, ಸ್ಟೇಷನರಿ ಬ್ಯಾಂಕ್ ಎಂಬ ಮತ್ತೊಂದು ಕಾರ್ಯಕ್ರಮವನ್ನು ಪರಿಚಯಿಸಿದೆ. ಮಕ್ಕಳ ಗುರುತಿನ ಚೀಟಿಗಳಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವರ್ಷವಿಡೀ ಉಚಿತ ಅಧ್ಯಯನ ಸಾಮಗ್ರಿ ಒದಗಿಸುತ್ತಿದ್ದಾರೆ ಎಂದರು.

ಬಿಇಒ ಎಸ್‌.ಪಿ. ಮಹಾದೇವ್ ಪುಸ್ತಕ ವಿತರಿಸಿ ಮಾತನಾಡಿ, ಮಡಿಲು ಸೇವಾ ಟ್ರಸ್ಟ್ ಅಕ್ಷರ ಮಡಿಲು ಶೈಕ್ಷಣಿಕ ಕಾರ್ಯಕ್ರಮ, ಸ್ಟೇಷನರಿ ಬ್ಯಾಂಕ್, ಮಡಿಲು ಕಲಿಕಾ ಕೇಂದ್ರಗಳನ್ನು ಪರಿಚಯಿಸಿದೆ. ಇದು ಮಕ್ಕಳ ಸುಧಾರಣೆಗೆ ಬಹಳಷ್ಟು ಸಹಾಯ ಮಾಡಿತು. ಮಕ್ಕಳು ತಮ್ಮ ಹಾಡಿಗಳಿಂದ ಶಾಲೆಗೆ ಹಾಗೂ ಶಾಲೆಯಿಂದ ಹಾಡಿಗೆ ಸಂಚರಿಸಲು ಉಚಿತ ವ್ಯಾನ್ ಸೌಲಭ್ಯ ಕೂಡ ಒದಗಿಸಿರುವುದು ಗಮನಾರ್ಹ ಎಂದು ಅವರು ಹೇಳಿದರು.

ಮಡಿಲು ಸಂಸ್ಥೆಯು ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ನೀಡುತ್ತಿರುವರುವುದರಿಂದ ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ. ಮಡಿಲು ಸಂಸ್ಥೆಯ ಮುಂದಿನ ಕಾರ್ಯಕ್ರಮ ಹಾಗೂ ಯೋಜನೆಗಳಿಗೆ ಉತ್ತಮ ಯಶಸ್ಸು ಸಿಗಲೆಂದು ಹಾರೈಸಿದರು.

ಆದಿವಾಸಿ ಸೋಲಿಗ ಸಂಘದ ರಾಜ್ಯ ಅಧ್ಯಕ್ಷ ಕೆ.ವಿ. ರಾಜು, ನಿವೃತ್ತ ಕಾನೂನು ಪ್ರಾಧ್ಯಾಪಕ ಡಾ. ಶಿವಣ್ಣ ನಾಯಕ, ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಕೆ. ಮಹಾದೇವ್, ಮಡಿಲು ಸಂಸ್ಥೆಯ ಮುಖ್ಯಸ್ಥ ಮುರಳೀಧರನ್, ಸಂಯೋಜಕಿ ಲಕ್ಷ್ಮಿ, ಸಂಸ್ಥಾಪಕ ಲೋಕರಾಜ್ ಅರಸ್, ಸಂಯೋಜಕಿ ಸುನಂದಾ ಬಾಗ್ಲೇರ್, ಮಡಿಲು ಸಂಸ್ಥೆಯ ಪುಟ್ಟಣ್ಣ, ಸೋನಹಳ್ಳಿ ಗ್ರಾಮದ ಯಜಮಾನರಾದ ಎಸ್.ಎಂ. ಮಾದೇಗೌಡ, ಪೋಷಕರು, ಮಕ್ಕಳು ಮತ್ತು ಹಿರೇಹಳ್ಳಿಹಾಡಿ, ಸೋನಹಳ್ಳಿ ಹಾಡಿ ಹಾಗೂ ಸೋನಹಳ್ಳಿ ಗ್ರಾಮಸ್ಥರು ಇದ್ದರು.