ನಗರದ ಶ್ರೀಮತಿ ಬಂಗಾರಮ್ಮ ಸಜ್ಜನ ಪದವಿ ಮಹಿಳಾ ಕಾಲೇಜಿನ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಸುಪುತ್ರಿ ಕುಮಾರಿ ಅಕ್ಷತಾ ಅಶೋಕಕುಮಾರ ಜಾಧವ ಕರ್ನಾಟಕ ರಾಜ್ಯ ಅಕ್ಕಮಹಾದೇವಿಯ ಮಹಿಳಾ ವಿವಿ ಮಹಿಳಾ ಕ್ರಿಕೆಟ್ ತಂಡಕ್ಕೆ ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆಗೊಂಡಿದ್ದಾಳೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಶ್ರೀಮತಿ ಬಂಗಾರಮ್ಮ ಸಜ್ಜನ ಪದವಿ ಮಹಿಳಾ ಕಾಲೇಜಿನ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಸುಪುತ್ರಿ ಕುಮಾರಿ ಅಕ್ಷತಾ ಅಶೋಕಕುಮಾರ ಜಾಧವ ಕರ್ನಾಟಕ ರಾಜ್ಯ ಅಕ್ಕಮಹಾದೇವಿಯ ಮಹಿಳಾ ವಿವಿ ಮಹಿಳಾ ಕ್ರಿಕೆಟ್ ತಂಡಕ್ಕೆ ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆಗೊಂಡಿದ್ದಾಳೆ.ತಂಡವು ಇದೇ ತಿಂಗಳು ಚೆನ್ನೈ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ ವಿವಿ ಮಹಿಳೆಯರ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ತಂಡವು ಭಾಗವಹಿಸಲಿದ್ದು, ತರಬೇತುದಾರರಾಗಿ ಗುಲ್ಬರ್ಗಾದ ವಿಶ್ವನಾಥ ದೇವರಮನಿ ಹಾಗೂ ಮ್ಯಾನೇಜರ್ ಆಗಿ ವಿಜಯಪುರದ ಪಾರ್ವತಿ ತಂಬಾಕೆ ತಂಡದ ಜೊತೆ ಪ್ರಯಾಣ ಬೆಳೆಸಲಿದ್ದಾರೆ. ಅಕ್ಷತಾಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ.ವೈ.ತಮ್ಮಣ್ಣ, ದೈಹಿಕ ನಿರ್ದೇಶಕಿ ಡಾ.ಸವೀತಾ ಅಣೆಪ್ಪನವರ, ಡಾ.ಸಂಧ್ಯಾರಾಣಿ ಬಿರಾದಾರ, ಕಾಲೇಜಿನ ಅಧೀಕ್ಷರಾದ ಜಗದೀಶ ಪಾಟೀಲ, ಬಿಎಲ್‌ಡಿಇ ಸಂಸ್ಥೆಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಸಂಸ್ಥೆಯ ಅಡಳಿತಾಧಿಕಾರಿ ಎಸ್.ಎಸ್.ಕೋರಿ, ಕೈಲಾಸ ಹಿರೇಮಠ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿಜಯಪುರ ಜಿಲ್ಲಾ ಸಂಯೋಜಕ ಎನ್.ಎಂ.ಹುಟಗಿ, ತರಬೇತುದಾರ ಬುಲ್ಸ್ ರಿಂಗ್‌ದ ರವಿ ಭಾರದಖಾನೆ, ಓಂ ಸಿಸಿ ಯ ಮುರಳಿ ಬೀಳಗಿ, ಕೋಹಿನೂರ ಕ್ಲಬ್ಬಿನ ಸಲೀಮ ಬೇಪಾರಿ, ಬೆಂಗಳೂರಿನ ಶೀನ ಅಕಾಡೆಮಿಯ ತರಬೇತುದಾರ ಗಣೇಶ, ಕ್ರಿಕಲೈಫನ್ ತರಬೇತುದಾರ ಶ್ರೀಕಾಂತ, ಎಂಗ್ರೆಡ್ ಅಕಾಡೆಮಿಯ ಕೇಶವರೆಡ್ಡಿ, ವಿಜಯಪುರದ ದೈಹಿಕ ನಿರ್ದೇಶಕ ಗಣೇಶ ಭೋಸಲೆ, ಚಾಂದವಸೀಮ ಮುಕಾದಮ, ಶ್ರೀಕಾಂತ ಕಾಖಂಡಕಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಲ್ಲದೇ ಬೆಂಗಳೂರಿನ ಕೆಎಸ್‌ಸಿಎ ಮ್ಯಾನೇಜಿಂಗ್ ಕಮಿಟಿಯ ನೂತನ ಸದಸ್ಯರಾಗಿ ಆಯ್ಕೆಯಾದ ಭಾರತ ದೇಶದ ಮಹಿಳಾ ಕ್ರಿಕೆಟ್‌ನ ಮಾಜಿ ಆಟಗಾರ್ತಿ ಹಾಗೂ ವಿಜಯಪುರದ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ಕಾರಣಿಭೂತರಾದ ಕಲ್ಪನಾ ವೆಂಕಟಾಚಾರ್ಯ ಮತ್ತು ರಾಯಚೂರ ವಲಯದ ಸಂಚಾಲಕ ಬೀದರನ ಕುಶಾಲ ಪಾಟೀಲ ಅಭಿನಂದಿಸಿದ್ದಾರೆ.