೨೭ನೇ ಅಥ್ಲೆಟಿಕ್ ಕ್ರೀಡಾಕೂಟ ಪುರುಷರ ವಿಭಾಗದಲ್ಲಿ ೧೦೦೦೦ ಮೀ. ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್‌ಐ.ಟಿ. ಕಾಲೇಜಿನ ಕ್ರೀಡಾಪಟು ಅಕ್ಷಯ್.ಎ.ಆರ್. ಪ್ರಥಮ
ಕನ್ನಡಪ್ರಭವಾರ್ತೆ ತಿಪಟೂರು
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದಿರುವ ರಾಜ್ಯಮಟ್ಟದ ವಿ.ಟಿ.ಯು. ೨೭ನೇ ಅಥ್ಲೆಟಿಕ್ ಕ್ರೀಡಾಕೂಟ ಪುರುಷರ ವಿಭಾಗದಲ್ಲಿ ೧೦೦೦೦ ಮೀ. ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್‌ಐ.ಟಿ. ಕಾಲೇಜಿನ ಕ್ರೀಡಾಪಟು ಅಕ್ಷಯ್.ಎ.ಆರ್. ಪ್ರಥಮ . ಹಾಗೂ ಸುಳ್ಯ ಕೆ.ವಿ.ಜಿ.ಸಿ.ಇ. ಕಾಲೇಜಿನ ಕ್ರೀಡಾಪಟು ಕೃಷ್ಣ.ಕೆ.ಎಲ್ , ದ್ವಿತೀಯ, ಮಂಗಳೂರಿನ ಎಸ್.ಸಿ.ಇ.ಎಂ. ಕಾಲೇಜಿನ ಕ್ರೀಡಾಪಟು ಗುರುಪ್ರಸಾದ್ ತೃತೀಯ.ಪುರುಷರ ವಿಭಾಗದ ಡೆಕಾತ್ಲಾನ್ ಸ್ಫರ್ಧೆಯಲ್ಲಿ ಬೆಂಗಳೂರಿನ ಆರ್.ವಿ.ಸಿ.ಇ. ಕಾಲೇಜಿನ ಕ್ರೀಡಾಪಟು ಅಭಿಷೇಕ್.ಎಸ್.ಎಂ., ಪ್ರಥಮ ., ಪುತ್ತೂರಿನ ವಿ.ಸಿ.ಇ.ಟಿ. ಕಾಲೇಜಿನ ಕ್ರೀಡಾಪಟು ಭುವನೇಶ್ವರಂ ಜಗದೀಶ್ ಬಂಡಾರಿ , ದ್ವಿತೀಯ, ಬೆಂಗಳೂರಿನ ಬಿ.ಐ.ಟಿ. ಕಾಲೇಜಿನ ಕ್ರೀಡಾಪಟು ಶ್ಯಾಂವರ್ಗೀಸ್ ತೃತೀಯ.ಪುರುಷರ ವಿಭಾಗದ ೪೦೦ಮೀ. ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್.ಸಿ.ಇ.ಎಂ. ಕಾಲೇಜಿನ ಕ್ರೀಡಾಪಟುವಾದ ಮನ್ವಿತಾ.ಯು. , ಪ್ರಥಮ , ಬೆಂಗಳೂರಿನ ಡಿ.ಎಸ್.ಸಿ.ಇ. ಕಾಲೇಜಿನ ಕ್ರೀಡಾಪಟು ಲೌಕಿ ಅಯ್ಯಪ್ಪ ಸಿ.ಬಿ. , ದ್ವಿತೀಯ ., ಶಿವಮೊಗ್ಗ ಪಿ.ಇ.ಎಸ್.ಐ.ಟಿ.ಎಂ. ಕಾಲೇಜಿನ ಕ್ರೀಡಾಪಟುವಾದ ಆಕಾಶ್.ಎಸ್. , ತೃತೀಯ. ಪುರುಷರ ವಿಭಾಗದ ೪೦೦ ಮೀ. ಹರ್ಡಲ್ಸ್ ಸ್ಫರ್ಧೆಯಲ್ಲಿ ಬೆಂಗಳೂರಿನ ಡಿ.ಎಸ್.ಸಿ.ಇ. ಕಾಲೇಜಿನ ಕ್ರೀಡಾಪಟು ಲೌಕಿ ಅಯ್ಯಪ್ಪ ಸಿ.ಎಸ್. , ಪ್ರಥಮ, ಶಿವಮೊಗ್ಗದ ಪಿ.ಇ.ಎಸ್.ಐ.ಟಿ.ಎಂ. ಕಾಲೇಜಿನ ಕ್ರೀಡಾಪಟು ಆಕಾಶ್.ಎಸ್., ದ್ವಿತೀಯ .. ಮಂಗಳೂರಿನ ಎಸ್.ಸಿ.ಇ.ಎಂ. ಕಾಲೇಜಿನ ಕ್ರೀಡಾಪಟು ಪ್ರಜ್ವಲ್ , ತೃತೀಯ. ಪುರುಷರ ವಿಭಾಗದ ಹನರ್ ಥ್ರೋ ಸ್ಪರ್ಧೆಯಲ್ಲಿ ಬೆಂಗಳೂರಿನ ಎಂ.ಎಸ್.ಆರ್.ಐ.ಟಿ.ಕಾಲೇಜಿನ ಕ್ರೀಡಾಪಟುವಾದ ಜಾನೇಶ್.ಕೆ.ಎಸ್ , ಪ್ರಥಮ, ಪುತ್ತೂರಿನ ವಿ.ಸಿ.ಇ.ಟಿ. ಕಾಲೇಜಿನ ಕ್ರೀಡಾಪಟು ಹರ್ಷಿತ್ ಮಹೇಶ್ ನಾಯಕ್, ದ್ವಿತೀಯ, ಬೆಂಗಳೂರಿನ ಬಿ.ಎಂ.ಎಸ್.ಸಿ.ಇ. ಕಾಲೇಜಿನ ಕ್ರೀಡಾಪಟುವಾದ ಪ್ರಸನ್ನ ರಾಜಪ್ಪ, ತೃತೀಯ. ಪುರುಷರ ವಿಭಾಗದ ೧೫೦೦ ಮೀ. ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಡಿ.ಎಸ್.ಸಿ.ಇ. ಕಾಲೇಜಿನ ಕ್ರೀಡಾಪಟುವಾದ ರಾಜೇಶ್ ಆರ್ ನಿರ್ವಾಣೇಶ್ವರ್ , ಪ್ರಥಮ, ಹುಬ್ಬಳ್ಳಿಯ ಜೆ.ಸಿ.ಇ.ಟಿ. ಕಾಲೇಜಿನ ಕ್ರೀಡಾಪಟು ಸಾಹಿನ್ ವಾಸನ್ನ ಆರೀರ್, ದ್ವಿತೀಯ , ಹುಲ್‌ಕೋಟೆ ಆರ್.ಇ.ಸಿ. ಕಾಲೇಜಿನ ಕ್ರೀಡಾಪಟುವಾದ ಚಂದ್ರಶೇಖರ್ ವಡ್ಡಟ್ಟಿ , ತೃತೀಯ. ಪುರುಷ ಮತ್ತು ಮಹಿಳಾ ವಿಭಾಗದ ಮಿಕ್ಸೆಡ್ ೪x೪೦೦ ಮೀ. ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್.ಸಿ.ಇ.ಎಂ. ಕಾಲೇಜಿನ ಕ್ರೀಡಾಪಟುವಾದ ಸಾನಿಯಾ ಶೆಟ್ಟಿ, ಸಾನ್ವಿ ರಾಯ್, ಮನ್ವಿತಾ.ಯು., ಪ್ರಜ್ವಲ್ , ಪ್ರಥಮ, ಮಂಗಳೂರಿನ ಸೆಂಟ್ ಜೋಸೆಫ್.ಸಿ.ಇ. ಕಾಲೇಜಿನ ಕ್ರೀಡಾಪಟು ಅರ್ಲ್ ಡಿಸೋಜಾ, ಗಗನ್ ಜಿ ಬಾಜ್ಪೆ, ತಾನ್ವಿ.ಎಸ್., ಶೃಪಥಿ, ದ್ವಿತೀಯ, ಬೆಂಗಳೂರಿನ ಬಿ.ಎಂ.ಎಸ್.ಸಿ.ಇ. ಕಾಲೇಜಿನ ಕ್ರೀಡಾಪಟುವಾದ ವಾಸುದೇವ ರಕ್ಷಕ್, ವಿಸ್ಮಯ್.ಬಿ. ಶ್ರೀನಿವಾಸ್, ಹರ್ಷಿತಾ.ಸಿ. ಶಿವಾನಿ.ಎಸ್.ರಾಯ್ , ತೃತೀಯ. ಪುರುಷರ ವಿಭಾಗದ ಪಾಲ್ ವಾಲ್ಟ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಜೆ.ಎನ್.ಎನ್.ಸಿ.ಇ. ಕಾಲೇಜಿನ ಕ್ರೀಡಾಪಟುವಾದ ಪ್ರೀತಮ್.ಬಿ.ಎನ್. , ಪ್ರಥಮ ., ಶ್ರವಣಬೆಳಗೊಳದ ಬಿ.ಸಿ.ಇ. ಕಾಲೇಜಿನ ಕ್ರೀಡಾಪಟು ಯಶವಂತ್.ಶಂಕರ್ ಮರಾಠಿ, ದ್ವಿತೀಯ, ಮಂಗಳೂರಿನ ಎಸ್.ಸಿ.ಇ.ಎಂ ಕಾಲೇಜಿನ ಕ್ರೀಡಾಪಟುವಾದ ರಿತೇಶ್ ಶೆಟ್ಟಿ , ತೃತೀಯ. ಪುರುಷರ ವಿಭಾಗದ ೪x೧೦೦ ಮೀ. ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್.ಸಿ.ಇ.ಎಂ. ಕಾಲೇಜಿನ ಕ್ರೀಡಾಪಟುವಾದ ನಿಹಾಲ್.ಎಸ್.ಕುಮಾರ್, ಪ್ರಣಯ್.ಜೆ.ಶೆಟ್ಟಿ, ಪ್ರವೀತ್, ಸಿ.ಕೆ.ಪ್ರೇರಣ್ , ಪ್ರಥಮ , ಬೆಂಗಳೂರಿನ ಎಂ.ಎಸ್.ಆರ್.ಐ.ಟಿ. ಕಾಲೇಜಿನ ಕ್ರೀಡಾಪಟು ವಿಭಾಶ್ ಎಲ್., ಮನೋಜ್.ವಿ.ಎಸ್. ಲಿಖಿತ್ ಸಾಗರ್.ಡಿ.ಎಸ್., ಶುಭಂಪಾಂಡೆ , ದ್ವಿತೀಯ ., ಮೈಸೂರಿನ ವಿ.ವಿ.ಸಿ.ಇ. ಕಾಲೇಜಿನ ಕ್ರೀಡಾಪಟುವಾದ ಎಸ್.ಕಿಶನ್ ಕಾರ್ತಿಕ್, ಎಕ್ವಾಲ್ ಆರ್. ಫಾತಂಗೆ, ವಿಶೇಷ್.ಎಸ್.ಗೌಡ, ಚಿರಂಜೀವಿ ಗೌಡ.ಡಿ. , ತೃತೀಯ.ಈ ಕ್ರೀಡಾಕೂಟದ ವಿಜೇತರಿಗೆ ಕೆವಿಎಸ್ ಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ, ಬಾಗೇಪಲ್ಲಿ ನಟರಾಜು, ಟಿ.ಎಸ್.ಬಸವರಾಜು, ಬಿ.ಎಸ್.ಉಮೇಶ್, ಜಿ.ಪಿ.ದೀಪಕ್, ಜಿ.ಎಸ್.ಉಮಾಶಂಕರ್, ಆರ್.ಎಂ.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಎಚ್.ಜಿ.ಸುಧಾಕರ್, ಟಿ.ಎಸ್.ಶಿವಪ್ರಸಾದ್ ಮತ್ತು ಡಾ.ಎಚ್.ಸಿ.ಸತೀಶ್‌ಕುಮಾರ್. ಡಾ.ರಾಜೇಶ್. ಎಂ.ಎಸ್. ಜಯಂತ್ ಇತರರಿದ್ದರು.